ಮೋಹಕ ತಾರೆ ರಮ್ಯಾ (Actress ramya) ಹಾಗೂ ನಟ ದರ್ಶನ್ (Actor darshan fans) ಅಭಿಮಾನಿಗಳ ನಡುವಿನ ಸಮರ ತಾರಕಕ್ಕೇರಿದ್ದು, ಅಶ್ಲೀಲ ಮೆಸೇಜ್ ಗಳು ಮತ್ತು ಕೆಟ್ಟ ಕೆಟ್ಟ ಕಮೆಂಟ್ ಗಳ ವಿಚಾರದ ಕುರಿತು ಚರ್ಚೆ ಹೆಚ್ಚಾಗಿದೆ. ಈ ಮಧ್ಯೆ ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಶನ್ (D company fans association) ಟ್ವಿಟರ್ ಅಕೌಂಟ್‌ನಿಂದ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ.

ಡಿ-ಬಾಸ್ ಮೇಲೆ ಗೌರವವಿರುವ ಯಾವೊಬ್ಬ ಅಭಿಮಾನಿ ಕೂಡ ಯಾವುದೇ ವಿವಾದಕ್ಕೆ ಕಿವಿಗೊಡಬೇಡಿ, ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ, ಯಾರಿಗೂ ಮೆಸೇಜ್ ಮಾಡಬೇಡಿ, ಪ್ರಚಾರಕ್ಕೆ ಆಗಲಿ, ಹುನ್ನಾರ ಮಾಡಿ ಆಗಲಿ, ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಪೋಸ್ಟ್ ಮಾಡಲಾಗಿದೆ.

ನಟ ದರ್ಶನ್ ಫ್ಯಾನ್ಸ್ ಏನು, ಅವರ ಗುಣ ಹೇಗೆ ಎಂಬುದುದಕ್ಕೆ ಅವರು ಇಲ್ಲಿವರೆಗೆ ಮಾಡಿರುವ ಸಮಾಜಮುಖಿ ಕಾರ್ಯಗಳು ಸಾಕ್ಷಿಯಾಗಿದೆ.ಈ ಅವಮಾನಗಳು ಇನ್ನಷ್ಟು ಒಳ್ಳೆ ಕೆಲಸ ಮಾಡಲು ಮೆಟ್ಟಿಲಾಗಲಿ ಎಂದು ಪೋಸ್ಟ್ ಮಾಡಲಾಗಿದೆ. ಅಭಿಮಾನಿಗಳ ಈ ರೀತಿಯ ವರ್ತನೆ,ಆಕ್ರೋಶದಿಂದ ದರ್ಶನ್ ಬೇಲ್‌ಗೆ ಸಮಸ್ಯೆ ಆಗೋ ಕಾರಣದಿಂದ ಈ ಪೋಸ್ಟ್ ಮಾಡಲಾಗಿದೆ ಎಂಬ ಚರ್ಚೆ ಗರಿಗೆದರಿದೆ.