ರಾಜ್ಯದಲ್ಲಿ ಬಿಜೆಪಿ (Bjp)ಬಳಿಕ ಈಗ ಕಾಂಗ್ರೆಸ್ (Congress) ಪಕ್ಷದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿದೆ.ಹೈಕಮಾಂಡ್ ಖಡಕ್ ವಾರ್ನಿಂಗ್ ನಂತರವೂ, ಸಿಎಂ ಸಿದ್ದರಾಮಯ್ಯ (Cm siddaramaiah) ಆಪ್ತ ಬಳಗ ರಹಸ್ಯ ಸಭೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸಭೆಯಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ (HC Mahadevappa), ಸತೀಶ್ ಜಾರಕಿಹೊಳಿ (Satish jarakiholi)ಭಾಗಿಯಾಗಿದ್ದು, ಕೆ.ಜೆ ಜಾರ್ಜ್ (KJ Georg ) ನಿವಾಸದಲ್ಲಿ ಈ ರಹಸ್ಯ ಸಭೆ ನಡೆಸಲಾಗಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಸಚಿವ ಕೆ.ಜೆ ಜಾರ್ಜ್ ನಿವಾಸದಲ್ಲಿ ನಾಯಕರು ರಹಸ್ಯ ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಡಾ.ಜಿ ಪರಮೇಶ್ವರ್ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಮೂರು ದಿನಗಳ ಕಾಲ ದೆಹಲಿ ಭೇಟಿಗೆ ತರಳಿದ್ದ ಸತೀಶ್ ಜಾರಕಿಹೊಳಿ, ಕೆಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರನ್ನ ಭೇಟಿ ಮಾಡಿ ಬಂದಿದ್ದಾರೆ. ಈ ಬೆನ್ನಲ್ಲೇ ಮೂವರು ಹಿರಿಯ ಸಚಿವರ ರಹಸ್ಯ ಸಮಾಲೋಚನೆ ಸದ್ಯ ತೀವ್ರ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.