ಟೀಕೆಗಳಿಗೆ ಹೆದರಬೇಡಿ
ಅವರ ವೈಯಕ್ತಿಕ ಜೀವನದಲ್ಲಿ ಯಾರಿರಲಿ, ಯಾರಿಲ್ಲದಿರಲಿ…!
ಏನೇ ಇರಲಿ, ಏನಿಲ್ಲದಿರಲಿ…!
ಬಂದದ್ದು ಬರಲಿ, ಬಾರದಿರಲಿ…!
ಜೀವನದಲ್ಲಿ ಬದುಕು ಅನ್ನೋದನ್ನ ಬದುಕಲೇಬೇಕು..
ಬದುಕುವುದು ಬೇರೆಯವರಿಗಾಗಿ ಅಲ್ಲ…!
ಜೀವನ ಅನ್ನೋದು ಮೇಲೆ ಹೇಳಿರುವ ಹಾಗೆ Simple Logic ಅಷ್ಟೇ. ಈ ಜೀವನ ಎಂಬುವುದು ಅರ್ಥಮಾಡಿಕೊಂಡವರಿಗೆ ದುಃಖ, ಯಾತನೆ, ಕಣ್ಣೀರು, ನೋವಿನ ಅನುಭವ ಆಗೋದು ಬಹಳ ಕಡಿಮೆ. ಯಾಕೆಂದರೆ ನಮಗಾಗಿ ನಾವು, ನಮಗಿಷ್ಟ ಬಂದಂತೆ ನಾವು ಬದುಕೋಕೆ ಶುರು ಮಾಡಿದರೆ ಮಾತ್ರ ನಾವು ಸಂತೋಷವಾಗಿರಬಲ್ಲೆವು. ಇಲ್ಲಿ ಯಾರಿಗೆ ಯಾರೂ ಶಾಶ್ವತವಲ್ಲ, ನಾನು, ನನ್ನದು, ನಮ್ಮವರು ಎಂಬುದೆಲ್ಲ ಕೇವಲ ನಮ್ಮ ಭ್ರಮೆ ಅಷ್ಟೇ. ಎಲ್ಲದಕ್ಕೂ, ಎಲ್ಲರಿಗೂ
ಒಂದು ಸಮಯ ಅನ್ನೋದು ಇದ್ದೇ ಇರುತ್ತೆ. ಅದನ್ನು ಅರಿಯದೆ ಎಲ್ಲವೂ ಶಾಶ್ವತವಾಗಿ ಇರುತ್ತೆ ಅನ್ನುವ ಭ್ರಮೆಯಲ್ಲಿ, ಇರಬೇಕು ಅನ್ನುವ ಹಠದಲ್ಲಿ ಹಿಡಿದಾಡಲು ಪ್ರಯತ್ನ ಪಡುತ್ತಾ ಜೀವನ ದಲ್ಲಿ ನಮ್ಮ ಕೈಯ್ಯಾರೆ ನಾವೇ ಹಾಳು ಮಾಡಿಕೊಳ್ಳುತ್ತೇವೆ. ನಮಗಾಗಿ ನಾವು, ನಮ್ಮ ಸಂತೋಷ ನಮ್ಮಲ್ಲಿ ನಾವು ಕಾಣುವಂತೆ ಬದುಕಬೇಕೇ ಹೊರತು, ನಮ್ಮ ಸಂತೋಷವನ್ನು ಬೇರೆಯವರಲ್ಲಿ ಹುಡುಕುವುದು ಸರಿಯಲ್ಲ. ಪ್ರಪಂಚಕ್ಕೆ ಹೆದರಿ ಅಥವಾ ಈ ಸಮಾಜದಲ್ಲಿನ ಜನರ ಮಾತುಗಳಿಗೆ, ಟೀಕೆಗಳಿಗೆ ವ್ಯಂಗಕ್ಕೆ ಅಣ್ಣ ತಮ್ಮಂದಿರಾಕ್ಕೆ ಹೆದರಿ ಬದುಕುತ್ತಾ ಹೋದರೆ ಕೊನೆಗೆ ನಮ್ಮ ಮನಸ್ಸಿಗಾಗಲಿ ಅಥವಾ ಜೀವನದಲ್ಲಿಯಾಗಲಿ ಸಂತೋಷ ಅನ್ನುವುದು ಏನೂ ಉಳಿಯುವುದಿಲ್ಲ. ಜೀವನ ಎಂಬುವುದು ಕ್ಷಣಿಕ. ಪ್ರತಿ ಕ್ಷಣ ಸಂತೋಷಪಡುವಂತೆ ಬದುಕಬೇಕೇಹೊರತು, ಸಂತೋಷವನ್ನ ಹುಡುಕುತ್ತಾ ಬದುಕಬಾರದು.
ನವೀನ ಹೆಚ್ ಎ
ಹನುಮನಹಳ್ಳಿ
ಕೆ ಆರ್ ನಗರ









