ಡಾಜ್ ಮೀಮ್ಗಳ (Doge meme) ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವಿಶ್ವಪ್ರಸಿದ್ಧಿಯಾಗಿದ್ದ ಕಬೋಸು (Kabosu) ಶ್ವಾನ ಸಾವನ್ನಪ್ಪಿದೆ. ಕಬೋಸು ಎಂಬ ಈ ಶ್ವಾನದ ಫೋಟೋಸ್ ಮತ್ತು ವಿಡಿಯೋಗಳು ವಿಚಿತ್ರವಾದ ಹಾಸ್ಯಾಸ್ಪದ ಮೀಮ್ಸ್ (Meme) ಮತ್ತು ಟ್ರೋಲ್ಗಳಿಗೆ (Trolls) ಬಳಕೆ ಮಾಡಿಕೊಳ್ಳಲಾಗಿತ್ತು. ಆ ಮೂಲಕವೇ ಈ ಕಬೋಸು ಸಿಕ್ಕಾಪಟ್ಟೆ ಫೇಮಸ್ ಆಗಿ ಸಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನೂ ಹೊಂದಿತ್ತು. ಇದೀಗ ಆ ಶ್ವಾಸ ನಿಧನ ಹೊಂದಿದೆ ಎಂದು ಅದರ ಮಾಲಿಕರು ತಿಳಿಸಿದ್ದಾರೆ. ಈ ಕಬೋಸು ಶ್ವಾನದ ಸಾಕಷ್ಟು ಮೀಮ್ಸ್ಗಳನ್ನ ಖಂಡಿತವಾಗಿಯೂ ನೀವು ಕೂಡ ನೋಡಿಯೇ ಇರ್ತೀರಾ.
![](https://pratidhvani.com/wp-content/uploads/2024/05/IMG_7927.jpeg)
ಈ ಕಬೋಸು ಮೀಮ್ಸ್ಗಳಯ ಎಷ್ಟು ಜನಪ್ರಿಯವಾಗಿತ್ತು ಅಂದ್ರೆ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ತ್ (Elon musk) ಕೂಡ ಈ ಕಬೋಸು ಬಗ್ಗೆ ಮಾತನಾಡಿದ್ದರು, ಹರ್ಷ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಬರೀ ಮಾತ್ರವಲ್ಲದೇ ಕ್ರಿಪ್ಲೋ ಕರೆನ್ಸಿಯಾಗಿರುವ (crypto coin) ಡಾಜ್ ಕಾಯಿನ್ (Dogecoin)ಗೂ ಇದರ ಮುಖವನ್ನೇ ಲೋಗೋ ಮಾಡಲಾಗಿತ್ತು. ತನ್ನ ಮುದ್ದಾದ ಚಿತ್ರ ವಿಚಿತ್ರ ಎಕ್ಸ್ ಪ್ರೆಶನ್ ಮೂಲಕ ಕಬೋಸು ಜಗತ್ತಿನ ಮನಗೆದ್ದ ಶ್ವಾನವಾಗಿತ್ತು.
![](https://pratidhvani.com/wp-content/uploads/2024/05/IMG_7928.jpeg)
ಕಬೋಸು ಎಂಬುದು ಶಿಬಾ ಇನು ಜಾತಿಯ ಶ್ವಾನವಾಗಿದ್ದು ಅಟ್ಟುಕೊ ನಾಟೊ ಅನ್ನೋರು 2006 ರಲ್ಲಿ ಕಬೋಸುವನ್ನು ದತ್ತು ಪಡೆದಿದ್ದರು. ಹೀಗೆ ಒಂದು ದಿನ ಸಹಜವಾಗಿ ನಮ್ಮ ಪೆಟ್ನ ಫೋಟೋ ಮತ್ತು ವೀಡಿಯೋಗಳನ್ನ ತೆಗೆದು ತಮ್ಮ ಸಾಮಾಜಿಕ ಖಾತೆಯಲ್ಲಿ ಶ್ವಾನದ ಮಾಲಿಕರಾದ ಸಾಟೋ ಪೋಸ್ಟ್ ಮಾಡಿರ್ತಾರೆ. ಅದೇನು ಮಾಯೆನೋ ಏನೋ ಇದ್ದಕ್ಕಿದ್ದಂತೆ ಈ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತೆ ಅಲ್ಲಿಂದ ಮುಂದಕ್ಕೆ ಇದೇ ಶ್ವಾನದ ಮುಖದ ಎಕ್ಸ್ಪ್ರೆಶನ್ಗಳನ್ನ ಇಡ್ಕೊಂಡು ಮೀಮ್ಸ್ಗಳ ಸುರಿಮಳೆಯೇ ಶುರುವಾಗಿತ್ತು ಆ ಮೂಲಕ ಈ ಕಬೋಸು ಶ್ವಾಸ ಕೋಟ್ಯಂತರ ಜನರನ್ನ ರಂಜಿಸಿತ್ತು!
ಸಾಮಾನ್ಯವಾಗಿ ಈ ಶಿಬಾ ಇನು ಜಾತಿಯ ನಾಯಿಗಳು ಇಷ್ಟು ವರ್ಷಗಳ ಕಾಲ ಬದುಕೋದಿಲ್ಲ. ಆದ್ರೆ ಕಬೋಸು 19 ವರ್ಷಗಳ ಕಾಲ ಬದುಕಿದ್ದಳು. ಆಕೆ ಬಹುಶಃ ಪ್ರಪಂಚದ ಅತ್ಯಂತ ಲಕ್ಕಿ ಮತ್ತು ಸಂತಸದಿಂದ ಇದ್ದ ಶ್ವಾನ ಎಂದು ಆಕೆಯ ಮಾಲಿಕರು ದುಗುಡ ವ್ಯಕ್ತಪಡಿಸಿದ್ದಾರೆ.