ಕಳೆದೊಂದು ತಿಂಗಳಿಂದ ಧರ್ಮಸ್ಥಳದ (Dharmasthala case) ವಿಚಾರವಾಗಿ ಸಾಕಷ್ಟು ಚರ್ಚೆಗಳು ಆಗಿದೆ. ಈ ವಿಚಾರ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ಧರಾಮಯ್ಯ (Cm Siddaramaiah), ಯಾರೊಬ್ಬ ವ್ಯಕ್ತಿ ದೂರನ್ನು ನೀಡುತ್ತಾನೆ.ಆ ವಿಚಾರ ತಿಳಿದ ತಕ್ಷಣ, ಹಿಂದೆ ಮುಂದೆ ಯೋಚಿಸದೆ ರಾಜ್ಯ ಸರ್ಕಾರದ ಎಸ್‌ಐಟಿ ಗೆ (SIT) ನೀಡಲು ಮುಂದಾಯಿತು.

ನಮ್ಮ ರಾಜ್ಯದ ಸಿಎಂ ಸಿದ್ಧರಾಮಯ್ಯರಿಗೆ ದೇವರ ಮೇಲೆ ಎಷ್ಟು ನಂಬಿಕೆ ಇದೆ..? ಧರ್ಮಸ್ಥಳದ ಅಣ್ಣಪ್ಪನ ಮೇಲೆ ಎಷ್ಟು ಭಕ್ತಿ ಇದೆ ಗೊತ್ತಿಲ್ಲ.ಆದ್ರೆ, ಧರ್ಮಸ್ಥಳದ ಅಣ್ಣಪ್ಪನಿಗೆ ಕೋಟಿ ಕೋಟಿ ಭಕ್ತರಿದ್ದಾರೆ.ಕೋಟಿ ಕೋಟಿ ಭಕ್ತರಿಗೆ ಧರ್ಮಸ್ಥಳ ಒಂದು ಪುಣ್ಯಕ್ಷೇತ್ರ.ಧರ್ಮಸ್ಥಳ ಕೇವಲ ಒಂದು ಮಂದಿರ ಅಲ್ಲ,ಅದು ಭಾವನೆ ಎಂದಿದ್ದಾರೆ.

ಇದು ನೆನ್ನೆಯಿಂದಲ್ಲ..ಹಲವಾರು ದಶಕಗಳಿಂದ ಅದನ್ನೇ ಉಳಿಸಿಕೊಂಡು ಬಂದಿದ್ದಾರೆ. ಇಂತಹ ಕ್ಷೇತ್ರದ ಮೇಲೆ ಯಾರೋ ಒಬ್ಬ ವ್ಯಕ್ತಿ ಬುರುಡೆ ಹಿಡಿದುಕೊಂಡು ಬಂದು ಬುರುಡೆ ಹೊಡೆಯುತ್ತಾನೆ ಅಂದರೆ…ಆ ವ್ಯಕ್ತಿ ಯಾರು? ಆತನ ಹಿಂದೆ ಯಾರಿದ್ದಾರೆ? ಆತನಿಗೆ ಬೆಂಬಲ ಯಾರು? ಇಂತಹ ವಿಚಾರಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು ಎಂದಿದ್ದಾರೆ.

ಆದ್ರೆ ಈ ವಿಚಾರದಲ್ಲಿ ಸಿಎಂ ಬಹಳ ಆತುರ ಪಟ್ಟಿದ್ದಾರೆ.ಮೊದಲು ಸಿಎಂ ಹೇಳ್ತಾರೆ, ದಕ್ಷಿಣ ಕನ್ನಡ ಪೊಲೀಸರು ಇದನ್ನು ಹ್ಯಾಂಡಲ್ ಮಾಡುತ್ತಾರೆ ಅಂತ.ಆ ಬಳಿಕ ಎರಡು ದಿನ ಆದ್ಮೇಲೆ ಧರ್ಮಸ್ಥಳದ ವಿಚಾರದಲ್ಲಿ ಎಸ್‌ಐಟಿ ರಚನೆ ಮಾಡ್ತೀವಿ ಅಂತಾರೆ.ರಾಜ್ಯದ ಜನರ ಮುಂದೆ ಮೊದಲು ಎಸ್‌ಐಟಿ ರಚನೆ ಮಾಡಲ್ಲ ಅಂದಿದ್ರು. ಮರುದಿನ ಎಸ್‌ಐಟಿ ರಚನೆಯಾಗಲಿದೆ ಅಂದ್ರು..ಯಾಕಾಗಿ ಈ ಗೊಂದಲಗಳು ಎಂದು ಪ್ರಶ್ನೆ ಮಾಡಿದ್ದಾರೆ.











