ಮಹಿಳೆಯೊಬ್ಬರ ಕಣ್ಣಿನಿಂದ ಬರೋಬ್ಬರಿ 60 ಜೀವಂತ ಹುಳುಗಳನ್ನು ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಹೊರತೆಗೆದ ಘಟನೆ ಚೀನಾದಲ್ಲಿ ವರದಿಯಾಗಿದೆ.
ಕುನ್ ಮಿಂಗ್ ನ ಮಹಿಳೆಯೊಬ್ಬರಿಗೆ ಪದೇ ಪದೇ ಕಣ್ಣು ನವೆ ಆಗುತ್ತಿತ್ತು. ಆದರೊಂದು ದಿನ ಕಣ್ಣು ಉಜ್ಜಿಕೊಂಡ ಆಕೆಗೆ ಶಾಕ್ ಕಾದಿತ್ತು. ಆಕೆಯ ಕಣ್ಣಿನಿಂದ ಹುಳುಗಳು ಬೀಳಲಾರಂಭಿಸಿದವು. ಇದನ್ನು ಕಂಡು ಹೌಹಾರಿದ ಮಹಿಳೆ ಆಸ್ಪತ್ರೆಗೆ ಧಾವಿಸಲಾಗಿ, ತಪಾಸಣೆ ನಡೆಸಿದ ವೈದ್ಯರು ಆಕೆಯ ಎರಡೂ ಕಣ್ಣುಗಳಲ್ಲಿ ಜೀವಂತ ಹುಳುಗಳು ಇರುವುದನ್ನು ಪತ್ತೆ ಮಾಡಿದ್ರು.
ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಆಕೆಯ ಬಲಗಣ್ಣಿನಿಂದ 40 ಮತ್ತು ಎಡಗಣ್ಣಿನಿಂದ 20ಕ್ಕೂ ಹೆಚ್ಚು ಜೀವಂತ ಹುಳುಗಳನ್ನು ಹೊರತೆಗೆದಿದ್ದಾರೆ.
ಇನ್ನು ಸಾಕು ಪ್ರಾಣಿಗಳನ್ನು ಮುಟ್ಟಿದ ಕೈಗಳು ಕಣ್ಣಿನ ಸಂಪರ್ಕಕ್ಕೆ ಬಂದು ಅಥವಾ ಕೀಟಗಳ ಕಡಿತದಿಂದ ದೇಹದ ಒಳಹೊಕ್ಕುವ ರೌಂಡ್ ವರ್ಮ್ಸ್ ಆಕೆಯ ಕಣ್ಣುಗಳಲ್ಲಿ ಬಿಡಾರ ಹೂಡಿದ್ವು ಅಂತ ವೈದ್ಯರು ತಿಳಿಸಿದ್ದಾರೆ.
ಇನ್ನು ಇಂಥಹ ರೋಗಗಳನ್ನು ತಡೆಗಟ್ಟಲು ನೈರ್ಮಲ್ಯತೆ ಅತ್ಯಗತ್ಯ ಅಂತ ವೈದ್ಯರು ಮಾಹಿತಿ ನೀಡಿದ್ದಾರೆ.