• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಮಾಜದಲ್ಲಿ ವೈದ್ಯರಿಗೆ ವಿಶಿಷ್ಠ ಸ್ಥಾನವಿದೆ : ಸಚಿವ ಡಾ. ಕೆ. ಸುಧಾಕರ್

ಪ್ರತಿಧ್ವನಿ by ಪ್ರತಿಧ್ವನಿ
April 29, 2022
in ಕರ್ನಾಟಕ
0
ಸಮಾಜದಲ್ಲಿ ವೈದ್ಯರಿಗೆ ವಿಶಿಷ್ಠ ಸ್ಥಾನವಿದೆ : ಸಚಿವ ಡಾ. ಕೆ. ಸುಧಾಕರ್
Share on WhatsAppShare on FacebookShare on Telegram

ಕಳೆದ 7 ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಬದಲಾವಣೆ ಕಂಡಿದೆ. ಪ್ರತೀ ವರ್ಷ 65000 ಎಂಬಿಬಿಎಸ್ ವೈದ್ಯರು ಮತ್ತು 30,000 ವೈದ್ಯರು ಸ್ನಾತಕೋತ್ತರ ಪದವಿ ಪಡೆದು ಸೇವೆಗೆ ಲಭ್ಯರಾಗುತ್ತಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ADVERTISEMENT

ಬೆಂಗಳೂರು ಮೆಡಿಕಲ್ ಕಾಲೇಜಿನ  ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ.  ಇದು ದೇಶದಲ್ಲಿ ಮಹಿಳಾ ಸಬಲೀಕರಣದ ಸಂಕೇತ. ಸಮಾಜದಲ್ಲಿ ಬದಲಾವಣೆಗಳು ಆಗುತ್ತಿವೆ. ಬಡವರ ಮಕ್ಕಳು ಕೂಡ ವೈದ್ಯರಾಗಬೇಕೆಂಬ ಕನಸು ಈಡೇರುತ್ತಿದೆ ಎಂದು ಹೇಳಿದರು.

ಬೆಂಗಳೂರು ಮೆಕಲ್ ಕಾಲೇಜು (ಬಿಎಂಸಿ) ದೇಶದ ಹೆಮ್ಮೆಯ ಕಾಲೇಜುಗಳುಗಳಲ್ಲಿ ಒಂದು.  ಇಲ್ಲಿ ಪ್ರವೇಶ ಪಡೆಯುವ ಕನಸು ಹಲವು ವಿದ್ಯಾರ್ಥಿಗಳಿಗೆ ಇರುತ್ತದೆ.  ಇಲ್ಲಿ ಕಲಿತ ವಿದ್ಯಾರ್ಥಿಗಳು ಅದೃಷ್ಟವಂತರಲ್ಲಿ ಅದೃಷ್ಟವಂತರು. ಅತ್ಯುತ್ತಮ ಸಂಸ್ಥೆಯಲ್ಲಿ ಕಲಿತನ ಅನುಭವ ಜೊತೆಗೆ ಸಮಾಜದಲ್ಲಿ ವಿಭಿನ್ನ ಮತ್ತು ವಿಶಿಷ್ಟ ಗೌರವ  ಸಿಗುತ್ತದೆ. ವೈದ್ಯರಿಗೆ ಸಮಾಜದ ಎಲ್ಲಾ ಕಡೆಯೂ ವಿಶಿಷ್ಟ ಗೌರವ ಇದೆ.  ವೈದ್ಯ ವಿದ್ಯಾರ್ಥಿಗಳು, ಪದವಿ ಪಡೆದವರು ಈ ಸಮಾಜದ ಹೆಮ್ಮೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ  ಒಟ್ಟು 65 ಮೆಡಿಕಲ್ ಕಾಲೇಜುಗಳಿವೆ. 4 ಸರ್ಕಾರಿ ಮೆಡಿಕಲ್ ಕಾಲೇಜುಗಳು ಶೀಘ್ರದಲ್ಲಿ ಆರಂಭವಾಗಲಿವೆ.  ಖಾಸಗಿಯಲ್ಲಿ 3 ಹೆಚ್ವುವರಿ ಮೆಡಿಕಲ್ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ 9 ಜಿಲ್ಲೆಗಳಲ್ಲಿ ಹೊಸತಾಗಿ 9 ಮೆಡಿಕಲ್ ಕಾಲೇಜುಗಳು ಆರಂಭ ಮಾಡಲು ತಯಾರಿಗಳು ನಡೆಯುತ್ತಿವೆ. ದೇಶದ ವೈದ್ಯ ವಿದ್ಯಾರ್ಥಿಗಳಲ್ಲಿ ಶೇಕಡಾ 30.5 ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ.  ಮಹಾರಾಷ್ಟ್ರ, ಮಧ್ಯಪ್ರದೇಶ ನಂತರ ಕರ್ನಾಟಕದಲ್ಲಿ ಅತೀ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ,  ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.  2014ಕ್ಕೂ ಮೊದಲು ದೇಶದಲ್ಲಿ ಕೆಲವೇ ಕೆಲವು ಮೆಡಿಕಲ್ ಕಾಲೇಜಿಗಳಿದ್ದವು. ಆದರೆ  ಕಳೆದ  7 ವರ್ಷಗಳಲ್ಲಿ ಹೊಸತಾಗಿ 150 ಕ್ಕೂ ಅಧಿಕ ಮೆಡಿಕಲ್ ಕಾಲೇಜುಗಳು ಆರಂಭವಾಗಿವೆ.  65,000 ಎಂಬಿಬಿಎಸ್ ಡಾಕ್ಟರ್ ಗಳು ಪ್ರತೀ ವರ್ಷ ಹೊರ ಬರುಯತ್ತಾರೆ. 30,000 ಸ್ನಾತಕೋತ್ತರ ಪದವಿ ಪಡೆದ ವೈದ್ಯರು ಸಮಾಜ ಸೇವೆಗೆ ಲಭ್ಯರಾಗುತ್ತಿದ್ದಾರೆ.  ವೈದ್ಯಕೀಯ ಶಿಕ್ಷಣದ ಕ್ಷೇತ್ರ  ದುಬಾರಿ ವೆಚ್ಚವನ್ನು ಬಯಸುತ್ತಿದೆ. ಆದರೆ ಇದನ್ನು ಸರ್ಕಾರ ಹಂತ ಹಂತವಾಗಿ ಕಡಿಮೆ ಮಾಡಲು ಯೋಜನೆ ರೂಪಿಸಿದೆ. ಬಡವರಿಗೂ ಸಹ ವೈದ್ಯಕೀಯ ಶಿಕ್ಷಣ ಸಿಗಬೇಕು ಅನ್ನುವುದೇ ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ ಎಂದು ಹೇಳಿದರು.

ಕೊರೊನಾ ಸಾಂಕ್ರಾಮಿಕ ರೋಗದ ವೇಳೆ ವೈದ್ಯಕೀಯ ವಿದ್ಯಾರ್ಥಿಗಳು ಅನನ್ಯ ಸೇವೆ ಸಲ್ಲಿಸಿದ್ದಾರೆ.  ಜೀವನದಲ್ಲಿ ಎದುರಾಗಬಹುದುದಾದ ಸಂಕಷ್ಟಗಳು ಕಲಿಕೆಯ ಹಂತದಲ್ಲೇ ಅನುಭವಕ್ಕೆ ಬಂದಿದೆ. ಇದು ಜೀವನದ ಅಂತ್ಯವಲ್ಲ, ಆರಂಭ ಎಂದು ಪ್ರಧಾನಿಯವರು ಹೇಳಿದರಂತೆ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳ ಹೊಸ ಜೀವನ ಇಂದಿನಿಂದ ಆರಂಭವಾಗಿದೆ.  ಕಳೆದ 5 ವರ್ಷಗಳಲ್ಲಿ ತೋರಿದ ಬದ್ಧತೆ, ಶ್ರದ್ಧೆ ಮತ್ತು ಅಧ್ಯಯನ ಶೀಲತೆಯನ್ನು ಬದುಕಿನ ಉದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದು  ಆಶಿಸಿದರು.

ಭಾರತ ವೈದ್ಯಕೀಯ ವಿಜ್ಞಾನಕ್ಕೆಅದ್ಭುತ ಇತಿಹಾಸವಿದೆ. ಆಯುರ್ವೇದದಲ್ಲಿ ಚರಕ, ಶುಶ್ರೂತರ ಕೊಡುಗೆ ಅಮೂಲ್ಯವಾದದ್ದು. ಬಿಎಂಸಿ ಕೂಡ ಕೇವಲ ವೈದ್ಯರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿಲ್ಲ. ಬದಲಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಡೆಗೂ ಗಮನ ಹರಿಸಿದೆ.  ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಬಿಎಂಸಿಯ ವಿದ್ಯಾರ್ಥಿಗಳು ನೀಡಿದ ಸೇವೆಗೆ ಧನ್ಯವಾಧಗಳು. ಇವರ ಶ್ರಮದಿಂದ ಲಸಿಕೆ ಬರುವ  ಹಂತದ ವರೆಗೆ ಕೊರೊನಾವನ್ನು ಕಂಟ್ರೋಲ್ ಮಾಡಲು ಸಾಧ್ಯವಾಯಿತು ಎಂದರು.  

ವೈದ್ಯರ ಸೇವೆ ಸಮಾಜದಲ್ಲಿ ವಿಭಿನ್ನ ಗೌರವವನ್ನು ಹೊಂದಿದೆ. ಮನುಷ್ಯತ್ವ ಮತ್ತುಸೇವೆಯನ್ನು ಒಂದೇ ಕಾಲದಲ್ಲಿ ಅಪೇಕ್ಷೆ ಮಾಡುವ ಕೆಲಸ ಇದಾಗಿದೆ.  ಇದರಲ್ಲಿ ಆತ್ಮ ತೃಪ್ತಿಯೂ ಇದೆ.  ಎಲ್ಲವನ್ನೂ ಮರೆತು ಸಮಾಜಕ್ಕಾಗಿ,  ಇನ್ನೊಬ್ಬರಿಗಾಗಿ ಕೆಲಸ ಮಾಡಬೇಕಾಗುತ್ತದೆ.  ಎಲ್ಲಾ ತ್ಯಾಗವನ್ನು ಮಾಡಲು ಸದಾ ಸಿದ್ಧರಿರಬೇಕಾದ ಕೆಲಸ ಇದು.  ಎಲ್ಲಾ ಕ್ಷಣದಲ್ಲೂ, ಎಲ್ಲಾ ದಿನವೂ ವೈದ್ಯರು ಸಮಾಜದ ಬಗ್ಗೆ ಮಾತ್ರ ಯೋಚನೆ ಮಾಡಬೇಕು ಎಂದು ಹೇಳಿದರು. 

‘ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಆಯುಷ್ಮಾನ್ ಭಾರತ್ ಯೋಜನೆ ಎಲ್ಲರಿಗೂ ಉಚಿತ ಆರೋಗ್ಯ ವಿಮೆ ನೀಡುತ್ತಿದೆ.  ಉಚಿತವಾಗಿ ಆರೋಗ್ಯ ವಿಮೆ ನೀಡುತ್ತಿರುವ ಏಕೈಕ ದೇಶ ಭಾರತವಾಗಿದೆ.  ಶೂನ್ಯ  ಪ್ರಿಮಿಯಂನಲ್ಲಿ 5 ಲಕ್ಷ ರೂಪಾಯಿ ತನಕ ಶಾಶ್ವತ ಆರೋಗ್ಯ ವಿಮೆಯನ್ನು ಸರ್ಕಾರ ನೀಡುತ್ತಿದೆ.   ದೇಶದ ಬಡವರ ಆರೋಗ್ಯದ ಮೇಲೆ ಸರ್ಕಾರ ಹೆಚ್ಚಿನ ಗಮನವಿಟ್ಟಿದೆ ಎಂದು ಹೇಳಿದರು.

Tags: BJPCongress PartyCovid 19ನರೇಂದ್ರ ಮೋದಿಬಿಜೆಪಿವೈದ್ಯರುಸಚಿವ ಡಾ. ಕೆ. ಸುಧಾಕರ್
Previous Post

PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : ದಿವ್ಯಾ ಹಾಗರಗಿ ಬಂಧನ, ನಿಷ್ಪಕ್ಷಪಾತ ತನಿಖೆ ನಡೆಸುತ್ತೇವೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ!

Next Post

ಹಿಂದಿ ಹೇರಿಕೆ ರಾಜ್ಯ ಸರ್ಕಾರ ವಿರೋಧಿಸಬೇಕು: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ Baraguru Ramachandrappa

Related Posts

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   
ಕರ್ನಾಟಕ

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

by ಪ್ರತಿಧ್ವನಿ
May 1, 2026
0

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕೆಡಿ ಚಿತ್ರ ಏಪ್ರಿಲ್ 30ರಂದು ಭರ್ಜರಿಯಾಗಿ ಬಿಡುಗಡೆಯಾಗಿ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ...

Read moreDetails
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್  

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
Next Post
ಹಿಂದಿ ಹೇರಿಕೆ ರಾಜ್ಯ ಸರ್ಕಾರ ವಿರೋಧಿಸಬೇಕು: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ  Baraguru Ramachandrappa

ಹಿಂದಿ ಹೇರಿಕೆ ರಾಜ್ಯ ಸರ್ಕಾರ ವಿರೋಧಿಸಬೇಕು: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ Baraguru Ramachandrappa

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada