ರಾಕಿಂಗ್ ಸ್ಟಾರ್ ಯಶ್ (Rocking star yash) ನಟನೆಯ ಬಹು ನಿರೀಕ್ಷಿತ ಬಾಲಿವುಡ್ (Bollywood) ಸಿನಿಮಾ, ರಾಮಾಯಾಣ (Ramayana ) ಚಿತ್ರದ ಮೊತ್ತ ಮೊದಲ ಗ್ಲಿಂಪ್ಸ್ ಬಿಡುಗಡೆಗೆ ಮುಂದಾಗಿದ್ದು,ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧವಾಗ್ತಿದೆ. ಇದುವರೆಗೂ ಸಿನಿಮಾದ ತಾರಾಗಣ ಹೊರತುಪಡಿಸಿ ಇನ್ಯಾವುದೇ ವಿಚಾರವನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ.

ಇದೀಗ ಇದೇ ಜುಲೈ 3 ರಂದು ರಾಮಾಯಣ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಮಾಡಲಾಗ್ತಿದೆ. ಈ ಗ್ಲಿಂಪ್ಸ್ ಏಕ ಕಾಲದಲ್ಲೇ ಬೆಂಗಳೂರು, ಮುಂಬೈ, ಡೆಲ್ಲಿ, ಅಹಮದಾಬಾದ್, ಹೈದರಾಬಾದ್, ಚೆನ್ನೈ, ಕೊಲ್ಕತ್ತಾ, ಪುಣೆ, ಕೊಚ್ಚಿ ನಗರದಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.

ಇದಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ಯಾಕಂದ್ರೆ ಕೆ.ಜಿ.ಎಫ್ ಚಾಪ್ಟರ್ 2 (KGF chapter 2) ಬಳಿಕ ಯಶ್ ಅವರ ಟಾಕ್ಸಿಕ್ (Toxic) ಸಿನಿಮಾದ ಒಂದೇ ಒಂದು ಟೀಸರ್ ಹೊರತುಪಡಿಸಿದ್ರೆ ಇನ್ಯಾವುದೇ ಅಪ್ಡೇಟ್ಸ್ ಇಲ್ಲ.
ಹೀಗಾಗಿ ಮೂರು ನಿಮಿಷಗಳ ರಾಮಾಯಣದ ಗ್ಲಿಂಪ್ಸ್ ಇದಾಗಿದ್ದು, ಯಶ್ ಕೂಡ ಈ ಗ್ಲಿಂಪ್ಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.ಇದು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿಸಿದೆ.