ಭಾರತ ಹಾಗೂ ಪಾಕ್ ನಡುವೆ ಅಘೋಷಿತ ಯುದ್ಧ ನಡೆದಿದ್ದು, ಪಾಕಿಸ್ತಾನ ಮೊದಲಿಗೆ ಜಮ್ಮು ಏರ್‌ಪೋರ್ಟ್ ಹಾಗೂ ಸೇನಾ ಕಾಲೋನಿ ಮೇಲೆ ಡ್ರೋನ್ ದಾಳಿ ಮಾಡಿತ್ತು. ನೂರಾರು ಡ್ರೋಣ್ಗಳನ್ನು ಹಾರಿಸಿದ್ರಿಂದ ಜಮ್ಮುವಿನಲ್ಲಿ ಆತಂಕ ಎದುರಾಗಿತ್ತು. ಪಾಕ್‌ನ ಅಪ್ರಚೋದಿತ ದಾಳಿಗೆ ಭಾರತ ಸೇನೆ ಕೂಡ ಪ್ರತ್ಯುತ್ತರ ನೀಡಿದ್ದು, ಪಾಕಿಸ್ತಾನದ ಡ್ರೋನ್ಗಳನ್ನು ಹೊಡೆದುರುಳಿಸಿತು. ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಡ್ರೋನ್ಗಳನ್ನು ಹೊಡೆದು ಹಾಕಿದೆ ಭಾರತೀಯ ಸೇನೆ. ಇನ್ನು ಪಾಕಿಸ್ತಾನದ F-16 ಯುದ್ಧ ವಿಮಾನವನ್ನೂ ಧ್ವಂಸ ಮಾಡಿದೆ ನಮ್ಮ ಸೇನೆ.

ಪಠಾಣ್‌ಕೋಟ್ ಏರ್‌ಬೇಸ್ ಮೇಲೂ ಪಾಕ್ ದಾಳಿ ಮಾಡಿದ್ದು, ರಾಜಸ್ಥಾನದ ಜೈಸಲ್ಮೇರ್ ಮೇಲೂ ಪಾಕ್ ಸೇನಾಪಡೆಗಳು ದಾಳಿ ಮಾಡಿವೆ. ಯಾವಾಗ ಪಾಕಿಸ್ತಾನ ಅಪ್ರಚೋದಿತ ದಾಳಿ ಶುರು ಮಾಡಿತೋ ಆಗಲೇ ಭಾರತ S-400 ಸುದರ್ಶನ ಚಕ್ರ ಆ್ಯಕ್ಟೀವ್ ಮಾಡಿ, ಪಾಕಿಸ್ತಾನದ 8 ಮಿಸೈಲ್‌ಗಳನ್ನು ಉಡೀಸ್ ಮಾಡಿತು. ಈ ನಡುವೆ ಪಾಕ್ ಸೇನೆಯನ್ನು ಬಗ್ಗುಬಡಿಯಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಯ್ತು. ರಾಜನಾಥ್ ಸಿಂಗ್ ಸೇನಾ ಪಡೆಗಳ ಮುಖ್ಯಸ್ಥರ ಜೊತೆಗೆ ಸಭೆ ಮಾಡಿದ್ರು.

ಆ ಬಳಿಕ ಪಾಕಿಸ್ತಾನದ ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿಯಲ್ಲಿ ಭಾರತೀಯ ಸೇನೆ ಪ್ರಖರ ದಾಳಿ ಮಾಡಿದ್ದು, ಪಾಕ್ ಪ್ರಧಾನಿ ಕುಟುಂಬದ ಮನೆ ಬಳಿಯೇ ಡ್ರೋನ್ ಅಟ್ಯಾಕ್ ಆಗಿದೆ. ಲಾಹೋರ್ನ ಫಿರೋಜ್ಪುರ ರಸ್ತೆತ ನಿವಾಸದ ಪಕ್ಕದಲ್ಲೇ ಡ್ರೋಣ್ ಅಟ್ಯಾಕ್ ಆಗಿದ್ದು, ಪಾಕ್ ಪ್ರಧಾನಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಅನ್ನೋ ವರದಿಯಾಗಿದೆ. ಈ ನಡುವೆ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್, ಅಮೆರಿಕ ಹಾಗು ಯೂರೋಪಿಯನ್ ರಾಷ್ಟ್ರಗಳು, ಜಪಾನ್ ಸೇರಿದಂತೆ ಮಿತ್ರ ರಾಷ್ಟ್ರಗಳಿಗೆ ಘಟನೆಯ ಬಗ್ಗೆ ಮಾಹಿತಿ ರವಾನಿಸಿದ್ರು.
ಭಾರತದ ವಿದೇಶಾಂಗ ಸಚಿವರು ಹಾಗು ಪಾಕಿಸ್ತಾನದ ಪ್ರಧಾನಿ ಜೊತೆಗೆ ಚರ್ಚಿಸಿದ ಅಮೆರಿಕ ಕಾರ್ಯದರ್ಶಿ, ಪರಿಸ್ಥಿತಿ ತಿಳಿಗೊಳಿಸುವಂತೆ ಸೂಚಿಸಿದ್ರು. ಈ ನಡುವೆ ಕಾಶ್ಮೀರದ ಸಾಂಬಾದಲ್ಲಿ ಒಳನುಸುಳಲು ಯತ್ನಿಸಿದ ಉಗ್ರರನ್ನು ತಡೆದ ಭಾರತೀಯ ಸೇನೆ, ಪಾಕ್ಗೆ ತಕ್ಕ ಉತ್ತರ ನೀಡಿದೆ. ಈ ನಡುವೆ ಪಶ್ಚಿಮ ರಾಜ್ಯಗಳ 24 ವಿಮಾನ ನಿಲ್ದಾಣಗಳು ಬಂದ್ ಮಾಡಿ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಏರ್ ಇಂಡಿಯಾ ಹಾಗು ಇಂಡಿಗೋದಿಂದ ಹೊಸ ಗೈಡ್‌ಲೈನ್ಸ್ ಕೊಟ್ಟಿದ್ದು, ಪ್ರಯಾಣ ಸಮಯದ ಬಗ್ಗೆ ಪ್ರಯಾಣಿಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅಥವಾ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡರೆ ಯಾವುದೇ ಹೆಚ್ಚುವರಿ ವೆಚ್ಚ ಇಲ್ಲ ಎಂದಿವೆ.

ಗಡಿ ರಾಜ್ಯಗಳ DGPಗಳ ಜೊತೆಗೆ ಅಮಿತ್ ಷಾ ಚರ್ಚೆ ಮಾಡಿದ್ದು, ಗಡಿಯಲ್ಲಿ ಬಂದೋಬಸ್ತ್ ಹೆಚ್ಚಿಸಲು BSFಗೆ ಆದೇಶ ಮಾಡಿದೆ. 8 ಸಾವಿರ ಫೇಕ್ ಟ್ವಿಟರ್ ಅಕೌಂಟ್ಗಳನ್ನು ಡಿಲೀಟ್ ಮಾಡಿವೆ. ಜಮ್ಮು ಕಾಶ್ಮೀರದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ಸರ್ಕಾರಿ ಅಧಿಕಾರಿಗಳ ರಜೆ ರದ್ದು ಮಾಡಿ ಆದೇಶ ಮಾಡಲಾಗಿದೆ. ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ನಡುವಿನ IPL ಪಂದ್ಯ ರದ್ದು ಮಾಡಲಾಗಿದೆ.
