ಧರ್ಮಸ್ಥಳದ ಮೇಲಿನ (Dharmasthala case) ಆರೋಪದ ಬಗ್ಗೆ ರಾಜ್ಯ ಸರ್ಕಾರ ಎಸ್.ಐ.ಟಿ (SIT) ರಚನೆ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸದ ತೇಜಸ್ವಿಸೂರ್ಯ (Tejaswi surya) ಮಾತನಾಡಿದ್ದಾರೆ. ಈ ಬಗ್ಗೆ ನಾನು ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮಾತಾಡಿದ್ದೇನೆ. ಅವರು ನನಗೆ ಮಾಹಿತಿ ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು SIT ರಚನೆ ಅನಗತ್ಯವಾಗಿತ್ತು ಅಂತ ಹೇಳಿದ್ದಾರೆ ಎಂದು ಸೂರ್ಯ ಆರೋಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಪೊಲೀಸ್ ಅಧಿಕಾರಿಗಳು SIT ರಚನೆ ಬೇಡ ಎಂಬ ವಿಚಾರವನ್ನು ತಿಳಿಸಿದ್ದಾರೆ.ಆದರೂ ಸಿದ್ದರಾಮಯ್ಯ SIT ರಚನೆ ಮಾಡಿದ್ದಾರೆ. ಯಾರ ಒತ್ತಡದ ಮೇರೆಗೆ ಸಿದ್ದರಾಮಯ್ಯ ಈ SIT ರಚನೆ ಮಾಡಿದ್ದಾರೆ..? ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳೇ ವಿಶೇಷ ತನಿಖಾ ತಂಡ ಬೇಡ ಎಂದಮೇಲೆ, ಹಿದ್ದಿಗೆ ಬಿದ್ದವರಂತೆ ರಾಜ್ಯ ಸರ್ಕಾರ ಎಸ್.ಐ.ಟಿ ರಚನೆ ಮಾಡಿದ್ದು ಯಾಕೆ..? ಇದಕ್ಕೆ ಉತ್ತರ ಸಿದ್ದರಾಮಯ್ಯ ಕೊಡಬೇಕು. ಇದರ ಹಿಂದೆ ಯಾರ ಕೈವಾಡವಿದೆ, ಯಾರ ಒತ್ತಡಕ್ಕೆಮಣಿದು ಸಿಎಂ ಎಸ್.ಐ.ಟಿ ರಚನೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯಗೆ ಸಂಸದ ತೇಜಸ್ವಿಸೂರ್ಯ ಪ್ರಶ್ನೆ ಮಾಡಿದ್ದಾರೆ.











