ಬೆಂಗಳೂರು ಕರಗ (Bengaluru karaga) ಆಚರಣೆಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejaswi surya) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕಿಡಿಕಾರಿದ ತೇಜಸ್ವಿ ಸೂರ್ಯ,ನಮ್ಮ ಹಬ್ಬ ನಡೆಸೋಕೆ ಅಧಿಕಾರಿಗಳ ಅನುಮತಿ ಪಡೆಯಬೇಕಾ..? ನಮ್ಮ ಹಿಂದೂಗಳ ದೇವಾಲಯಗಳನ್ನ (Hindu temples) ನಡೆಸುವ ಅಧಿಕಾರ ಹಿಂದೂಗಳ ಕೈಗೆ ಕೊಡಿ, ದೇವಾಲಯ ನಡೆಸೋದು ಸರ್ಕಾರದ ಕೆಲಸ ಅಲ್ಲ ಎಂದಿದ್ದಾರೆ.

ನಮ್ಮ ರಾಜ್ಯದಲ್ಲಿ ಮಸೀದಿ ನಡೆಸುವ ಹಕ್ಕು ಮುಸ್ಲಿಮರಿಗೆ ಇದೆ.ಹಾಗೆಯೇ ಚರ್ಚ್‌ಗಳನ್ನ ನಡೆಸುವ ಹಕ್ಕು ಕ್ರಿಶ್ಚಿಯನ್ನಗರಿಗೆ ಇದೆ. ಅದೇ ರೀತಿ ನಮ್ಮ ದೇವಾಲಯದ ಹಕ್ಕು ಹಿಂದೂಗಳಿಗೆ ಇರಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.