
ಶಿಕ್ಷಣ ತಜ್ಞ, ವಿಜ್ಞಾನಿ ಹಾಗೂ ಸಾಮಾಜಿಕ ಹೋರಾಟಗಾರರಾದ ಸೋನಮ್ ವಾಂಗ್ಚುಕ್ ರವರನ್ನು NIA ಅಧಿಕಾರುಗಳು ಬಂಧಿಸಿದ್ದಾರೆ. ಇತ್ತ ಅವರ ಪತ್ನಿ ಗೀತಾಂಜಲಿ ಜಿ ಆಂಗ್ಮೋ ಅವರಿಗೆ ತಮ್ಮ ಪತಿಯನ್ನು ಪೊಲೀಸರು ಭೇಟಿಯಾಗಲು ಅವಕಾಶ ನಿರಾಕರಿಸುತ್ತದೆ ಎಂದು ಗೀತಾಂಜಲಿ ತಿಳಿಸಿದ್ದಾರೆ.
ಪೊಲೀಸರ ಈ ನಡೆಯನ್ನು ಖಂಡಿಸಿರುವ ಸೋನಮ್ ಅವರ ಧರ್ಮಪತ್ನಿ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದು, “ ನನ್ನ ಗಂಡನನ್ನು ಭೇಟಿ ಯಾಗುವ ಅರ್ಹತೆ ನನಗಿಲ್ಲವೇ” ನನ್ನ ಗಂಡನನ್ನು ಬಿಡುಗಡೆ ಮಾಡಬೇಕೆ” ಎಂದು ಒತ್ತಾಯಿದ್ದಾರೆ.

ಸೆಪ್ಟೆಂಬರ್ 24ರಂದು ನಡೆದ ಪ್ರತಿಭಟನೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದು, ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರಕ್ಕೆ ವಾಂಗ್ಚುಕ್ ಅವರು ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅವರನ್ನು ಜೋಧ್‌ಪುರ ಜೈಲಿನಲ್ಲಿ ಬಂಧಿಸಿಲಾಗಿದೆ.



ತಮ್ಮ ಪತಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಲೇಹ್ ಜಿಲ್ಲಾಧಿಕಾರಿಗೆ ಗೀತಾಂಜಲಿ ಪತ್ರ ಬರೆದಿದ್ದಾರೆ.
“ನನ್ನ ಪತಿ ‘ಹವಾಮಾನ ಕಾರ್ಯಕರ್ತ’ನಾಗಿದ್ದು, ಲಡಾಖ್‌ನ ಉಳಿವು, ಅದರ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಲಡಾಖ್‌ಗಾಗಿ ತಮ್ಮ ಪ್ರಾಣ ತ್ಯಾಗಕ್ಕೂ ಸಿದ್ದರಾಗಿ ಉಪವಾಸ ಸತ್ಯಾಗ್ರಹಗಳನ್ನು ನಡೆಸಿದ್ದಾರೆ. ಅವರು ಯಾರಿಗೂ ಯಾವತ್ತಿಗೂ ಬೇಸರವನ್ನು ಉಂಟು ಮಾಡಿರಲು ಸಾಧ್ಯವೇ ಇಲ್ಲ. ಅವರನ್ನು ಬಿಡುಗಡೆ ಮಾಡಿ” ಎಂದು ಪತ್ರ ಬರೆದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.





