ಡಿಸಿಎಂ ಡಿಕೆಶಿ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕೌಂಟರ್ ಅಟ್ಯಾಕ್ ಮುಂದುವರೆಸಿದ್ದಾರೆ.ಫೋನ್ ಟ್ಯಾಪ್ ಮಾಡಲು ಹೆಚ್.ಡಿ ಕುಮಾರಸ್ವಾಮಿ ಏನು ಟೆರರಿಸ್ಟಾ ಎಂದು ಹೇಳಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಬಳೀ ಇರುವವರೆಲ್ಲಾ ಟೆರರಿಸ್ಟ್ ಗಳೆ. ಡಿಕೆಶಿ ಸುತ್ತಾಮುತ್ತಾ ಟೆರರಿಸ್ಟ್ ಗಳಿದ್ದಾರೆ. ಟೆರರಿಸ್ಟ್ ಗಳ ಯಾರಾದ್ರೂ ಟಚ್ ಮಾಡಿದ್ದಾರಾ.? ಪ್ರಜ್ವಲ್ ಪ್ರಕರಣದಲ್ಲಿ ಯಾರನ್ನಾದ್ರೂ ಬಂಧಿಸಿದ್ದಾರಾ ಎಂದು ಕಿಡಿಕಾರಿದರು.
ಪ್ರಜ್ವಲ್ ಕೇಸ್ ನಿಂದ ಹೆಚ್ ಡಿ ದೇವೇಗೌಡರ ಫ್ಯಾಮಿಲಿಗೆ ಡ್ಯಾಮೇಜ್ ಆಗಿರೋದು ಸತ್ಯ. ಕುಟುಂಬಕ್ಕೆ ಡ್ಯಾಮೇಜ್ ಮಾಡಲೇಂದೇ ದೊಡ್ಡ ಸಂಚು ಮಾಡಿದ್ದರು ಎಂದರು.ಅಸೂಯೆಗೆ ಮದ್ದಿಲ್ಲ ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ಕೊಟ್ಟ ಹೆಚ್ ಡಿಕೆ, ವಿಡಿಯೋ ಹಂಚಿಕೆ ಮಾಡಿದವರ ವಿರುದ್ದ ಕ್ರಮ ಆಗಲಿ. ವಿಡಿಯೋ ಮಾಡಿದ್ದಕ್ಕಿಂತ ಹಂಚಿದ್ದು ಅಪರಾಧ . ಪೆನ್ ಡ್ರೈವ್ ವೈರಲ್ ನ ರೂವಾರಿ ಕಾರ್ತಿಕ್ ಗೌಡ. ಡಿಕೆ ಸುರೇಶ್ ರನ್ನ ಕಾರ್ತಿಕ್ ಭೇಟಿ ಮಾಡಿದ್ದ. ವಿಡಿಯೋ ಸಿಡಿಯನ್ನ ಡಿಕೆ ಶೀವಕುಮಾರ್ ಕಾಪಿ ಮಾಡಿದ್ದಾರೆ. ಪ್ರಜ್ವಲ್ ಅಪರಾಧ ಸಾಬೀತಾದರೇ ಶಿಕ್ಷೆ ನೀಡಿ ಎಂದರು