
ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ (Chinnaswamy stadium) ನಡೆದ ಕಾಲ್ತುಳಿತ (Bengaluru stampede case) ದುರಂತದಲ್ಲಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಯಾವುದೇ ಸರಿಯಾದ ಆಲೋಚನೆ ಮತ್ತು ವ್ಯವಸ್ಥೆಗಳಿಲ್ಲದೆ ಸರ್ಕಾರ ಕೈಗೊಂಡ ಧಿಡೀರ್ ನಿರ್ಧಾರದಿಂದ ಈ ದುರಂತ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ಬಂದ ಆಟಗಾರರಿಗೆ ವಿಧಾನಸೌಧದ ಮುಂದೆ ಸನ್ಮಾನ ಮಾಡುವ ಅವಶ್ಯಕತೆ ಏನಿತ್ತು..? ಆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾರ್ಯಕ್ರಮ ನಡೆಸುವ ಕುರಿತು ಯಾವುದೇ ಪೂರ್ವ ತಯಾರಿ ಇಲ್ಲದೇ ತರಾತುರಿಯಲ್ಲಿ ವ್ಯವಸ್ಥೆ ಮಾಡಲು ಮುಂದಾಗಿದ್ದೇ ಮೊದಲ ಮಹಾ ತಪ್ಪು. ಆದ್ರೆ ಇನ್ನೂ ವಿಪರಿಯಾಸ ಅಂದ್ರೆ ಅಭಿಮಾನಿಗಳು ಸಾವಿಗೀಡಾಗಿದ್ದಾರೆ ಎಂದಮೇಲೂ ಒಳಗೆ ಸಂಭ್ರಮಾಚರಣೆ ಮಾಡಿದ್ದು.
ಹೌದು ಒಂದೆಡೆ ಅದಾಗಲೇ ಕಾಲ್ತುಳಿತದಲ್ಲಿ ಸಾವು ನೋವು ಸಂಭವಿಸಿದೆ ಎಂಬ ಮಾಹಿತಿ ತಿಳಿದ ನಂತರವು ಡಿಸಿಎಂ ಡಿಕೆ ಶಿವಕುಮಾರ್ ಈ ಸೆಲೆಬ್ರೇಶನ್ ನಲ್ಲಿ ಭಾಗಿಯಾಗಿ ಆಟಗಾರರ ಜಿತೆಗೆ ಟ್ರೋಫಿ ಮುಟ್ಟಿತ್ತು ಫೋಟೋ ಗೆ ಪೋಸ್ ಕೊಟ್ರು.ಆ ಬಳಿಕ ಮಾತನಾಡಿದ ಅವರು, ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಸೇರಬಹುದು ಎಂಬ ನಿರೀಕ್ಷೆ ಇರಲಿಲ್ಲ . ಹೀಗಾಗಿ ಈ ಅವಘಡ ನಡೆದಿದೆ ಎಂದು ಸುಲಭವಾಗಿ ಹೇಳಿ ಮುಗಿಸಿಬಿಟ್ಟರು.

ಒಂದು ಜವಾಬ್ದಾರಿಯುತ ರಾಜ್ಯ ಸರ್ಕಾರದ ಮಾನ್ಯ ಉಪ ಮುಖ್ಯಮಂತ್ರಿಗಳಾಗಿ ಡಿಕೆ ಶಿವಕುಮಾರ್ ಈ ರೀತಿಯ ಬೇಜವಾಬ್ದಾರಿಯ ಮಾತುಗಳನ್ನು ಆಡಬಹುದು ಎಂದು ರಾಜ್ಯದ ಜನ ನಿರೀಕ್ಷಿಸುವುದಾದರೂ ಹೇಗೆ ..? ಸರ್ಕಾರಕ್ಕೆ ಅಥವಾ ಆಡಳಿತ ಯಂತ್ರಕ್ಕೆ ಎಷ್ಟು ಜನ ಸೇರಬಹುದು ಎಂಬ ಅಂದಾಜಿರಲಿಲ್ಲ..ಅದಕ್ಕೆ ಬೇಕಾದ ಪೂರ್ವ ತಯಾರಿ ಇರಲಿಲ್ಲ ಎಂದಾದಮೇಲೆ ಅಷ್ಟು ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾದರೂ ಯಾಕೆ..? ಇದು ಜನ ಪ್ರಶ್ನೆಯಾಗಿದೆ.
