Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ನಾವು ತಪ್ಪು ಮಾಡಿದ್ರೆ ತನಿಖೆ ಮಾಡಲಿ : ಡಿ.ಕೆ.ಶಿವಕುಮಾರ್‌

ಪ್ರತಿಧ್ವನಿ

ಪ್ರತಿಧ್ವನಿ

November 26, 2022
Share on FacebookShare on Twitter

ಮತದಾರರ ಮಾಹಿತಿ ಕಳವು ವಿಚಾರವಾಗಿ ನಾವು ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗವು ಹಿರಿಯ ಚುನಾವಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ನಾನು ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮೇಲಿನವರ ಆದೇಶದ ಮೇರೆಗೆ ನಾವು ಕೆಲಸ ಮಾಡಿದ್ದೇವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದರು. ಈ ಆದೇಶ ಕೊಟ್ಟವರು ಯಾರು ಎಂಬುದು ಗೊತ್ತಾಗಬೇಕು. ಈ ಬಗ್ಗೆ ಬಿಬಿಎಂಪಿ ತನಿಖೆ ನಡೆಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಅಥವಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು. ಅವರ ಉಸ್ತುವಾರಿಯಲ್ಲೇ ಚುನಾವಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

SIDDARAMAIAH | ಅಧಿಕಾರಕ್ಕೆ ಬಂದ್ಮೇಲೆ 10 ಕೆಜಿ ಅಕ್ಕಿ ಕೊಡ್ತೇವೆ.. | ಸಿದ್ದರಾಮಯ್ಯ | CONGRESS | BJP |

Mimicry comedy Gopi | ಒಂದೇ ವೇದಿಕೆಯಲ್ಲಿ ರಾಜಕೀಯಾ ಮುಖಂಡರು!

ಕುಮಟಾ ಶಾಸಕರಿಗೆ ಕಂಟಕವಾದ ಪರೇಶ್‌ ಮೇಸ್ತಾ ಪ್ರಕರಣ: ಹಿಂದೂ ಕಾರ್ಯಕರ್ತರಿಂದಲೇ ಛೀಮಾರಿ

ಯಾವುದೇ ಮತವನ್ನು ಸೇರ್ಪಡೆ ಮಾಡುವಾಗ ಅಥವಾ ತೆಗೆಯುವಾಗ ಆಯಾ ವ್ಯಕ್ತಿಯ ಅರ್ಜಿ ಇರಬೇಕು. ಬಿಎಲ್ಒಗಳನ್ನು ಯಾರು ನೇಮಕ ಮಾಡಿದ್ದರು? ಈ ಬಿಎಲ್ಒಗಳನ್ನು ಕೇವಲ 3 ಕ್ಷೇತ್ರ ಚುನಾವಣಾಧಿಕಾರಿಗಳು ಮಾತ್ರ ಮಾಡಿಲ್ಲ. ಎಲ್ಲಾ 28 ಕ್ಷೇತ್ರಗಳ ಚುನಾವಣಾಧಿಕಾರಿಗಳೂ ಮಾಡಿದ್ದಾರೆ. ಸುಮಾರು 6-7 ಸಾವಿರ ಮಂದಿಗೆ ಈ ಬಿಎಲ್ಒ ಗುರುತಿನ ಚೀಟಿ ಕೊಟ್ಟಿದ್ದಾರೆ. ಇದರಲ್ಲಿ ಕೆಲವರು ಅಮಾಯಕರಿದ್ದು, ಕೆಲಸಕ್ಕೆ ಎಂದು ಸೇರಿದ್ದಾರೆ. ಆದರೆ ಇದರ ಮೂಲ ಕಿಂಗ್ ಪಿನ್ ಆಗಿ ಸರ್ಕಾರದ ಸಚಿವರು, ಶಾಸಕರಿಲ್ಲದೇ ಈ ಅಕ್ರಮ ನಡೆಯಲು ಸಾಧ್ಯವಿಲ್ಲ. ಆರ್ ಆರ್ ನಗರದಲ್ಲಿ ದಾಳಿ ನಡೆಸಿ ದಾಖಲೆ ಸಂಗ್ರಹಿಸಲಾಗಿದೆ. ಎಲ್ಲಾ 28 ಕ್ಷೇತ್ರಗಳಲ್ಲಿ ಈ ಅಕ್ರಮ ನಡೆದಿದೆ. ಈ ಎಲ್ಲ ಕಡೆ ತನಿಖೆ ಆಗಬೇಕು. ಇಲ್ಲೆಲ್ಲ ಮತದಾರರ ಪಟ್ಟಿ ಮರುಪರಿಷ್ಕರಣೆ ಆಗಬೇಕು.

ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡಲು ವ್ಯಕ್ತಿ ಸತ್ತಿದ್ದರೂ ಪ್ರಮಾಣ ಪತ್ರ ನೀಡಿಲ್ಲ ಎಂದರೆ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿ ಪರಿಶೀಲಿಸಬೇಕು. ಮನೆ ಬದಲಾವಣೆ ಮಾಡಿದ್ದರೂ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಬೇಕು. ಆದರೆ ಇವರು ಯಾವುದೋ ಸಂಸ್ಥೆ, ಶಾಸಕರು ಹಾಗೂ ಸಚಿವರ ಕಚೇರಿಯಲ್ಲಿ ಕೂತು ಅವರಿಗೆ ಬೇಕಾದಂತೆ ಕೆಲಸ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಸಂಚೇ ಇದೆ. ನಾವು ನಿನ್ನೆ ವಿಚಾರ ಪ್ರಸ್ತಾಪಿಸಿದಂತೆ ಕೇಂದ್ರ ಸರ್ಕಾರದ ಸಂಸ್ಥೆ ಮೂಲಕ ಖಾಸಗಿ ರೈತರ ಖಾತೆಗೆ ಲಕ್ಷಗಟ್ಟಲೆ ಹಣ ಹೇಗೆ ವರ್ಗಾವಣೆ ಆಯಿತು? ಯಾವ ಕಾರಣಕ್ಕೆ ಹಣ ನೀಡಲಾಗಿದೆ? ಈ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ.

ಮಂತ್ರಿಯೊಬ್ಬರು ಆರಂಭದಲ್ಲಿ ನನಗೆ ಈ ಸಂಸ್ಥೆ ಗೊತ್ತೇ ಇಲ್ಲ ಎಂದರು. ನಂತರ ಈ ಸಂಸ್ಥೆ ಗೊತ್ತಿದೆ, ಆದರೆ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಹೇಳಿದರು. ಸಚಿವರು ಹಾಗೂ ಈ ಸಂಸ್ಥೆ ನಿರ್ದೇಶಕರ ಮಧ್ಯೆ ದೂರವಾಣಿ ಮಾತುಕತೆ ಎಲ್ಲವೂ ಇದೆ. ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಸತ್ಯಾಂಶ ಹೊರಬರಲಿ.

ಮಹದೇವಪುರ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಈ ಕೆಲಸ ಮಾಡಿದ್ದೇವೆ ಎಂಬ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಪ್ರತಿ ಕ್ಷೇತ್ರದಲ್ಲೂ ಮತದಾರರ ಸೇರ್ಪಡೆ ಹಾಗೂ ಅಳಿಸಿರುವ ಪಟ್ಟಿ ಸಂಪೂರ್ಣವಾಗಿ ಮರು ಪರಿಷ್ಕರಣೆ ಆಗಬೇಕು. ಪ್ರತಿ ಮನೆಗೂ ಹೋಗಿ ಯಾರು ಸತ್ತಿದ್ದಾರೆ, ಯಾರು ಮನೆ ಖಾಲಿ ಮಾಡಿ ಬೇರೆಡೆಗೆ ಹೋಗಿದ್ದಾರೆ ಎಂಬುದನ್ನು ನೋಡಿ ನಂತರ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಿ. ಒಂದು ಕುಟುಂಬದ ಮತಗಳನ್ನು ಬೇರೆ, ಬೇರೆ ಬೂತ್ ಗಳಿಗೆ ವರ್ಗಾವಣೆ ಮಾಡಬಾರದು. ಆ ಕೆಲಸವೂ ಇಲ್ಲಿ ನಡೆದಿದೆ. ಇದೆಲ್ಲವೂ ಸರಿಯಾಗಬೇಕು. ಚುನಾವಣಾ ಆಯೋಗ ನಮ್ಮ ದೂರಿನ ಮೇಲೆ ಕೆಲವರನ್ನು ಅಮಾನತು ಮಾಡಿದೆ. ಆದರೆ ಈ ಮತ ಕಳ್ಳತನ ವಿಚಾರ ನಕಲಿ ನೋಟು ಮುದ್ರಣ ಮಾಡಿದಷ್ಟೇ ಅಪರಾಧ. ಇದಕ್ಕೆ ಜನರೇ ಶಿಕ್ಷೆ ನೀಡಬೇಕು.

ಸರ್ಕಾರಿ ಅಧಿಕಾರಿಗಳ ಗುರುತಿನ ಚೀಟಿಯನ್ನು ಅನಧಿಕೃತವಾಗಿ ನೀಡುವುದು ಅಪರಾಧ. ಕಾಂಗ್ರೆಸ್ ಕಾಲದಲ್ಲಿ ಇದು ಆಗಿದ್ದರೆ ತನಿಖೆ ಮಾಡಲಿ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ. ವ್ಯವಸ್ಥೆ ಸರಿಮಾಡುವುದು ಮುಖ್ಯ. ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟರ ಮತಗಳನ್ನು ತೆಗೆದುಹಾಕಲಾಗುತ್ತಿದೆ. ಆರ್ ಆರ್ ನಗರದಲ್ಲಿ ಗೌಡ ಎಂಬ ಹೆಸರಿದ್ದರೆ ಒಂದು ಹೆಸರು ಉಳಿಸಿಕೊಂಡು ಮೂರು ಹೆಸರು ತೆಗೆಯುತ್ತಾರೆ.

ಇದರಲ್ಲಿ ಮಂತ್ರಿ, ಶಾಸಕರು ಇದ್ದಾರೆ. ಶಾಸಕರ ಪತ್ರಗಳು ಈ ಸಂಸ್ಥೆಯ ಕಚೇರಿಯಲ್ಲಿ ಸಿಕ್ಕಿವೆ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುವುದಾಗಿ ಹೇಳಿದ್ದಾರೆ. ಅವರು ಕೇಸು ಹಾಕಲಿ ಎಂದು ಸವಾಲೆಸೆದಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
3858
Next
»
loading
play
ರಾಜ್ಯದ ಜನರ ಧ್ವನಿಯಾದ 'ಪ್ರಜಾ ಧ್ವನಿ' ಯಾತ್ರೆಯ 'ಮಂಡ್ಯ ಸಮಾವೇಶ'ದ ನೇರ ಪ್ರಸಾರ #PrajaDhwaniYatre
play
ಪರಶುರಾಮ ತಪ್ಪಸಿನ ಫಲದಿಂದ ತುಳುನಾಡು ಹುಟ್ಟಿದ್ದು | CM Bommai |
«
Prev
1
/
3858
Next
»
loading

don't miss it !

ಕಾಂಗ್ರೆಸ್​ ಸೋಲಿಸಲು ಸುಪಾರಿ ಪಡೆದಿದ್ದು ಸಿದ್ದರಾಮಯ್ಯನಾ..? ಜಮೀರಾ..?
Top Story

ಕಾಂಗ್ರೆಸ್​ ಸೋಲಿಸಲು ಸುಪಾರಿ ಪಡೆದಿದ್ದು ಸಿದ್ದರಾಮಯ್ಯನಾ..? ಜಮೀರಾ..?

by ಕೃಷ್ಣ ಮಣಿ
January 22, 2023
Siddaramaiah: ಸುಧಾಕರ್ ಗೆ ಟಿಕೆಟ್ ಕೊಡಿಸಿದ್ದೆ ನಾನು | Pratidhvani
ರಾಜಕೀಯ

Siddaramaiah: ಸುಧಾಕರ್ ಗೆ ಟಿಕೆಟ್ ಕೊಡಿಸಿದ್ದೆ ನಾನು | Pratidhvani

by ಪ್ರತಿಧ್ವನಿ
January 25, 2023
O Manase Movie | ಈ ಸಿನಿಮಾದಲ್ಲಿ ನಮ್ದು ಟ್ರೈಯಾಂಗಲ್ ಲವ್ ಸ್ಟೋರಿ..!| Vijay Raghavendra | Pratidhvani
ಸಿನಿಮಾ

O Manase Movie | ಈ ಸಿನಿಮಾದಲ್ಲಿ ನಮ್ದು ಟ್ರೈಯಾಂಗಲ್ ಲವ್ ಸ್ಟೋರಿ..!| Vijay Raghavendra | Pratidhvani

by ಪ್ರತಿಧ್ವನಿ
January 23, 2023
Zameer Ahamed Khan | 500 Crore: ಕೋಟಿ ಕೋಟಿ ಆಫರ್ ಗೊತ್ತಿಲ್ಲ; ನಾನವನಲ್ಲ, ನಾನವನಲ್ಲ ಎಂದ ಜಮೀರ್ | Pratidhvani
ರಾಜಕೀಯ

Zameer Ahamed Khan | 500 Crore: ಕೋಟಿ ಕೋಟಿ ಆಫರ್ ಗೊತ್ತಿಲ್ಲ; ನಾನವನಲ್ಲ, ನಾನವನಲ್ಲ ಎಂದ ಜಮೀರ್ | Pratidhvani

by ಪ್ರತಿಧ್ವನಿ
January 21, 2023
ರಾಘವೇಂದ್ರ ರಾಜ್ ಕುಮಾರ್ ಅಭಿನಯದ ‘ಆಧುನಿಕ ಶ್ರವಣಕುಮಾರ’ ಟೀಸರ್ ರಿಲೀಸ್
ಸಿನಿಮಾ

ರಾಘವೇಂದ್ರ ರಾಜ್ ಕುಮಾರ್ ಅಭಿನಯದ ‘ಆಧುನಿಕ ಶ್ರವಣಕುಮಾರ’ ಟೀಸರ್ ರಿಲೀಸ್

by ಪ್ರತಿಧ್ವನಿ
January 22, 2023
Next Post
Triple Riding movie public review : ಮೈ ಮೇಲೆ ಗಣಿ ಅಂತ ಟ್ಯಾಟೂ ಹಾಕಿಸಿರುವ ಅಭಿಮಾನಿಗಳು | gani tattoo

Triple Riding movie public review : ಮೈ ಮೇಲೆ ಗಣಿ ಅಂತ ಟ್ಯಾಟೂ ಹಾಕಿಸಿರುವ ಅಭಿಮಾನಿಗಳು | gani tattoo

Dhruva Sarja| ROW App Launch: ಭರ್ಜರಿಯಾಗಿ ರೆಡಿ ಆನ್‌ ವ್ಹೀಲ್ಸ್ ಆ್ಯಪ್ ಲಾಂಚ್ ಮಾಡಿದ ಧೃವಾ ಸರ್ಜಾ

Dhruva Sarja| ROW App Launch: ಭರ್ಜರಿಯಾಗಿ ರೆಡಿ ಆನ್‌ ವ್ಹೀಲ್ಸ್ ಆ್ಯಪ್ ಲಾಂಚ್ ಮಾಡಿದ ಧೃವಾ ಸರ್ಜಾ

Teacher beat student : ಸ್ಟೀಲ್ ಸ್ಕೇಲ್ ನಿಂದ ಶಿಕ್ಷಕ ವಿದ್ಯಾರ್ಥಿಗೆ ಥಳಿಸಿ ಕೈ ಸೀಳಿ 6ಸ್ಟಿಚ್ ಹಾಕಿದ್ದಾರೆ

Teacher beat student : ಸ್ಟೀಲ್ ಸ್ಕೇಲ್ ನಿಂದ ಶಿಕ್ಷಕ ವಿದ್ಯಾರ್ಥಿಗೆ ಥಳಿಸಿ ಕೈ ಸೀಳಿ 6ಸ್ಟಿಚ್ ಹಾಕಿದ್ದಾರೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist