ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar)ಇತ್ತೀಚೆಗೆ ಚಿತ್ರರಂಗದ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದ್ದರು. ನಟ್ಟು, ಬೋಲ್ಟ್, ಟೈಟ್ ಮಾಡ್ತೀನಿ ಅನ್ನೋ ಎಚ್ಚರಿಕೆ ನುಡಿಗಳನ್ನು ನುಡಿದಿದ್ದರು.

ಹೀಗೆ ಡಿಸಿಎಂ ವಾರ್ನಿಂಗ್ ಕೊಟ್ಟಿದ್ದು, ಕನ್ನಡಚಿತ್ರಕ್ಕೆ. ಆದರೀಗ ಡಿಕೆಶಿ ಆಡಿದ ಮಾತುಗಳು ಟೀಕೆಗೆ ಗುರಿಯಾಗಿವೆ. ಇದೀಗ ಡಿಕೆಶಿ ಹೇಳಿಕೆಯನ್ನ ಸಚಿವ ಚಲುವರಾಯಸ್ವಾಮಿ (Minister Chaluvarayaswamy) ಸಮರ್ಥಿಸಿಕೊಂಡಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಭೆಗೆ ಎಲ್ಲರೂ ಬಂದಿಲ್ಲ ಎಂಬ ಕಾರಣಕ್ಕೆ ಹೇಳಿಕೆ ನೀಡಿದ್ದಾರೆ. ಈ ವಿಚಾರವನ್ನ ವಿಕೋಪಕ್ಕೆ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ ಅಂತಾ ಹೇಳಿದ್ದಾರೆ..

ಇನ್ನು ಸ್ಯಾಂಡಲ್ವುಡ್ ನಟ-ನಟಿಯರ (Sandalwood Actors) ನಟ್ಟು-ಬೋಲ್ಟು ಟೈಟ್ ಮಾಡುವ ಹೇಳಿಕೆ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ಇದರಿಂದ ಹಿಂದೆ ಸಾಧುಕೋಕಿಲಾ (Sadukokila) ಕೈವಾಡ ಇರುವ ಅಂತೆಕಂತೆಗಳು ಗಾಂಧಿನಗರದಲ್ಲಿ (Gandhinagar) ಜೋರಾಗಿ ಹರಿದಾಡ್ತಿದೆ. ಇದರ ಬೆನ್ನಲ್ಲೇ ಸಾಧು ಕೋಕಿಲಾ ಡಿಸಿಎಂ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ. ಡಿ.ಕೆ ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕು ಎನ್ನುವುದಷ್ಟೇ ಅವರ ಉದ್ದೇಶ ಎಂದು ಸಮರ್ಥಿಕೊಂಡಿದ್ದಾರೆ. ಇನ್ನು ಖ್ಯಾತ ಕಲಾವಿದರೂ ಕೂಡ ಡಿಕೆಶಿ ಹೇಳಿಕೆ ಸರಿಯಾಗೇ ಇದೆ ಎಂದು ತಲೆಯಾಡಿಸಿದ್ದಾರೆ.

ಕೆಲವರು ಡಿಸಿಎಂ ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ರೆ. ಇನ್ನೂ ಕೆಲವರು ಆ ರೀತಿ ಮಾತನಾಡಿದ್ದು ತಪ್ಪು ಎಂದಿದ್ದಾರೆ. ಖ್ಯಾತ ನಿರ್ದೇಶಕ, ಟಿ.ಎಸ್.ನಾಗಾಭರಣ (TS Nagabharana), ಕಲಾವಿದರೂ ಒಂದಾಗಿರಬೇಕು ಅನ್ನೋದು ಒಳ್ಳೆಯದು. ಆದ್ರೆ, ಅವರು ಬರಲಿಲ್ಲ ಎಂಬ ಕಾರಣಕ್ಕೆ ಧಮ್ಕಿ ಹಾಕೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.