ಇಂದು ಬೆಂಗಳೂರಿನಿಂದ (Bengaluru) ಡಿಸಿಎಂ ಡಿಕೆಶಿ (Dcm Dk Shivakumar) ದೆಹಲಿಗೆ ತೆರಳಿದ್ದಾರೆ. ಇವತ್ತು ಸೆಂಟ್ರಲ್ ಮಿನಿಸ್ಟರ್ (Central minister) ಭೇಟಿಗೆ ಹೋಗ್ತಿದೀನಿ.ಕೋಲಾರದ ನೀರು ತಮಿಳುನಾಡಿಗೆ (Tamilnadu) ಹೋಗ್ತಿದೆ.ಅದರ ಸಂಭಂದ ಪಟ್ಟಂತೆ ಅವರನ್ನ ಭೇಟಿ ಮಾಡ್ತೀನಿ ಎಂದಿದ್ದಾರೆ.

ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ (Supreme court) ನೆಗೊಷಿಯೇಷನ್ ಮಾಡಿ ಅಂತ ಆದೇಶ ಆಗಿತ್ತು. ಇದಕ್ಕೆ ಮೂರ್ನಾಲ್ಕು ಬಾರಿ ಡೇಟ್ ಫಿಕ್ಸ್ ಆಗಿತ್ತು .ನಾವು ಅವ್ರಿಗೆ ರಿಕ್ವೆಸ್ಟ್ ಕೂಡ ಮಾಡ್ಕೊಂಡಿದ್ವಿ .ಈಗ ಫೈನಲ್ ಸೆಟ್ಟಲ್ಮೆಂಟ್ ಮಾಡಿ ನಮ್ಮ ಮುಂದೆ ಪ್ರಸ್ತುತಪಡಿಸಿ ಎಂದು ಕೋರ್ಟ್ ಹೇಳಿದೆ.
ಇದೇ ಕೆಲಸಕ್ಕೆ ಟೈಮ್ ಫಿಕ್ಸ್ ಆಗಿತ್ತು.ಹೀಗಾಗಿ ನಾನುಂಡೆಹಾಳಿಗೆ ಹೊರಟಿದ್ದೀನಿ.ನನಗೆ ಮಧ್ಯ ರಾತ್ರಿ ಒಂದು ಮೆಸೇಜ್ ಬಂದಿದೆ.ಅವ್ರು ತಮಿಳುನಾಡಿನವ್ರು ಸಪರೇಟ್ ಆಗಿ ಮೀಟ್ ಮಾಡ್ತೀವಿ ಅಂತ ಹೇಳಿದಾರೆ.ಇದು ಎಷ್ಟು ನಿಜ, ಸುಳ್ಳು ನನಗೆ ಗೊತ್ತಿಲ್ಲ.ಆದ್ರೆ ನಾನಂತು ಹೋಗ್ತಾ ಇದೀನಿ ಎಂದಿದ್ದಾರೆ.