• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಡಿ.ಕೆ ಶಿವಕುಮಾರ್‌ ಸಿಎಂ ಆಗಲು ಜೆಡಿಎಸ್ ಸಂಫೂರ್ಣ ಬೆಂಬಲ : 3 ಲೆಕ್ಕಾಚಾರ..?

ಕೃಷ್ಣ ಮಣಿ by ಕೃಷ್ಣ ಮಣಿ
November 5, 2023
in ಕರ್ನಾಟಕ
0
ಡಿ.ಕೆ ಶಿವಕುಮಾರ್‌ ಸಿಎಂ ಆಗಲು ಜೆಡಿಎಸ್ ಸಂಫೂರ್ಣ ಬೆಂಬಲ : 3 ಲೆಕ್ಕಾಚಾರ..?
Share on WhatsAppShare on FacebookShare on Telegram

ADVERTISEMENT

ಕುಮಾರಸ್ವಾಮಿ ಕಳೆದ ಬಾರಿ‌ ವಿಧಾನಸಭಾ ಚುನಾವಣೆ ವೇಳೆ ಒಕ್ಕಲಿಗರ ಕೋಟೆ ಹಳೇ ಮೈಸೂರು ಭಾಗದಲ್ಲಿ ಹಿನ್ನಡೆ ಅನುಭವಿಸಿ ಕೊತ ಕೊತ ಕುದಿಯುತ್ತಿರುವ ಕುಮಾರಸ್ವಾಮಿ ಏಕಾಏಕಿ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್‌ಗೆ 19 ಶಾಸಕರ ಬೆಂಬಲ ಘೋಷಣೆ ಮಾಡಿದ್ದಾರೆ. ಒಂದು ವೇಳೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ. ವೇದಿಕೆ ಮೇಲೆ ಓಪನ್ ಆಫರ್ ಕೊಟ್ಟಿರುವ ಮಾತಿನ ಹಿಂದಿನ ಮರ್ಮ ಏನು ಅನ್ನೋ ಬಗ್ಗೆ ಚರ್ಚೆ ಮಾಡೋದಾದ್ರೆ..

ಜೆಡಿಎಸ್ ಶಾಸಕರನ್ನು ಸೆಳೆಯುವ ಕಸರತ್ತಿಗೆ ಬ್ರೇಕ್..

ಡಿ.ಕೆ ಶಿವಕುಮಾರ್ ರಾಜ್ಯದಲ್ಲಿ ಸದೃಢ ಸರ್ಕಾರ ಇದ್ದರೂ ಆಪರೇಷನ್ ಹಸ್ತ ಮಾಡ್ತಿದ್ದಾರೆ. ಆಪರೇಷನ್ ಅಲ್ಲ ಕೋ-ಆಪರೇಷನ್ ಎನ್ನುತ್ತ ಎಲ್ಲಾ ಪಕ್ಷದವರನ್ನು ಸೆಳೆಯುವ ಅಸ್ತ್ರ ಹೂಡಿದ್ದಾರೆ. ಸೋತವರು ಅಷ್ಟೇ ಅಲ್ಲದೆ ಶಾಸಕರನ್ನೂ ಸೆಳೆಯುವ ಮುನ್ಸೂಚನೆಗಳು ಸಿಗುತ್ತಿವೆ. ಲೋಕಸಭಾ‌ ಚುನಾವಣೆ ಆದ್ಮೇಲೆ ಏನಾಗಲಿ‌ ಅನ್ನೋದನ್ನೂ ಮರೆತು ಪಕ್ಷಕ್ಕೆ ಬಂದವರನ್ನೆಲ್ಲಾ ಸೇರಿಸಿಕೊಳ್ಳುವ ಕೆಲಸ ಮಾಡ್ತಿದ್ದಾರೆ. ‌ಇದೇ ರೀತಿ ಜೆಡಿಎಸ್ ಶಾಸಕರನ್ನೂ ಸೆಳೆಯಲು ಮುಂದಾಗಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಇದೇ ಕಾರಣಕ್ಕೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವಿದಾದರೆ ನಾವೆಲ್ಲರೂ ಬೆಂಬಲ‌ ಕೊಡ್ತೇವೆ. ಮೂರು ಜನರು ಬರ್ತಾರೆ ಆರು‌ ಜನರು‌ ಬರ್ತಾರೆ ಅನ್ನೋದು ಬೇಡ. ಎಲ್ಲರೂ‌ ಬೆಂಬಲಿಸ್ತೀವಿ ಅಂದಿದ್ದಾರೆ. ಈ ಮೂಲಕ ಮತ್ತೊಂದು ಅಸ್ತ್ರ ಪ್ರಯೋಗ ಮಾಡಿದ್ದಾರೆ.

ಒಕ್ಕಲಿಗ ಶಾಸಕರನ್ನು ಸೆಳೆಯದಂತೆ ಕುಮಾರಸ್ವಾಮಿ ಅಸ್ತ್ರ..

ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್‌ನ ಒಕ್ಕಲಿಗ ನಾಯಕರನ್ನ ಡಿ.ಕೆ ಶಿವಕುಮಾರ್ ಸೆಳೆಯುವ ಮುನ್ಸೂಚನೆ ಸಿಕ್ಕಿದೆ. ಒಂದು ವೇಳೆ ಡಿ.ಕೆ ಶಿವಕುಮಾರ್ ಸೆಳೆದರೆ ಚುನಾವಣಾ ಅಸ್ತ್ರವಾಗಿ ಬಳಕೆ ಆಗಲಿದೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಿದ್ದರೆ ನಾವೆಲ್ಲಾ 19 ಜನರೂ ಸಪೋರ್ಟ್ ಮಾಡ್ತೇವೆ ಅಂತಾ ಅಧಿಕೃತವಾಗಿ ಘೋಷಿಸಲಾಯಿತು. ಆದರೂ ನಮ್ಮ ಪಕ್ಷದ ನಾಯನ್ನು ಸೆಳೆದಿದ್ದಾರೆ. ಅಂದರೆ ನಾವು ಬೆಂಬಲ ಕೊಡ್ತೇವೆ ಅಂತಾ ಹೇಳಿದ್ರು ಜೆಡಿಎಸ್ ಪಕ್ಷವನ್ನು ಮುಗಿಸುವ ಹುನ್ನಾರ ಎಂದು ಒಕ್ಕಲಿಗರ ಕೋಟೆಯಲ್ಲಿ ಮತ ಸೆಳೆಯುವ ಲೆಕ್ಕಾಚಾರದ ಮಾತು ಆಗಿರಬಹುದು.

ಆಸೆಯನ್ನು ಬಿತ್ತಿ ಫಸಲನ್ನು ಪಡೆಯುವ ಲೆಕ್ಕಾಚಾರ..

ಈಗಾಗಲೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಕಸರತ್ತು ಆರಂಭ ಆಗಿದೆ. ಆದರೆ ಹೈಕಮಾಂಡ್ ನಾಯಕರು ಕಸರತ್ತನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಒಂದು ವೇಳೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದೇ ಆದರೆ ಜೆಡಿಎಸ್ ಬೆಂಬಲ ಅಗತ್ಯವಿದ್ದರೆ ಬೆಂಬಲಿಸುವುದರಲ್ಲಿ ನಷ್ಟವೇನೂ ಇಲ್ಲ. ಒಕ್ಕಲಿಗ ನಾಯಕ ಮುಖ್ಯಮಂತ್ರಿ ಆಗುವುದಾದರೆ ಆಗಲಿ. ಬೆಂಬಲಿಸುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದರೆ ಒಕ್ಕಲಿಗರ ಮನಸ್ಸನ್ನೂ ಗೆಲ್ಲಬಹುದು ಅನ್ನೋ ಉದ್ದೇಶದಿಂದಲೂ ಹೇಳಿರುವ ಸಾಧ್ಯತೆಗಳಿವೆ. ಸಿದ್ದರಾಮಯ್ಯ ಬಣ ಏನಾದರೂ ಕೈ ಕೊಟ್ಟು ಹೋಗುವ ಸಂಧರ್ಭ ಬಂದರೆ ಜೆಡಿಎಸ್ ಡಿ.ಕೆ ಶಿವಕುಮಾರ್ ಅವರನ್ನು ಬೆಂಬಲಿಸಲಿದೆ ಅನ್ನೋದನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಅಂತಾನೂ ಹೇಳಬಹುದು

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

DKಶಿವಕುಮಾರ್ ನಾಳೆಯೇ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ 19 ಶಾಸಕರ ಬೆಂಬಲ ನೀಡುತ್ತೇವೆ : HD ಕುಮಾರಸ್ವಾಮಿ

Next Post

ಸಿಎಂ ಬದಲಾವಣೆ ಫಿಕ್ಸ್ ಆಗಿದೆ: ನಳಿನ್‌ ಕುಮಾರ್ ಕಟೀಲ್‌

Related Posts

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..
Top Story

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

by ಪ್ರತಿಧ್ವನಿ
April 16, 2026
0

ಬೆಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ನಡೆಯುತ್ತಿದ್ದು, ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ಷೇತ್ರ ವಿಂಗಡಣೆ, ಜನಗಣತಿ ಹಾಗೂ ಮಹಿಳಾ ಮೀಸಲಾತಿ...

Read moreDetails
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

April 16, 2026
ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
Next Post
ಸಿಎಂ ಬದಲಾವಣೆ ಫಿಕ್ಸ್ ಆಗಿದೆ: ನಳಿನ್‌ ಕುಮಾರ್ ಕಟೀಲ್‌

ಸಿಎಂ ಬದಲಾವಣೆ ಫಿಕ್ಸ್ ಆಗಿದೆ: ನಳಿನ್‌ ಕುಮಾರ್ ಕಟೀಲ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada