ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಯ (Cabinet reshuffle) ಕಸರತ್ತು ಒಂದೆಡೆಯಾದ್ರೆ, ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ (Kpcc president) ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಜೋರು ಜಟಾಪಟಿ ಶುರುವಾಗಿದೆ.

ಹೀಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ (Dk shivakumar) ಅಲರ್ಟ್ ಆಗಿದ್ದು, ದೆಹಲಿಗೆ ಹೋಗಿದ್ದಾರೆ.ಇದರ ಜೊತೆಗೆ ಅವರ ಸಹೋದರ, ಮಾಜಿ ಸಂಸದ ಡಿ.ಕೆ ಸುರೇಶ್ ಕೂಡ (Dk suresh) ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಡಿ.ಕೆ ಶಿವಕುಮಾರ್ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಬೇರೆಯವರಿಗೆ ಬಿಟ್ಟುಕೊಡಲು ಹಿಂದೇಟು ಹಾಕಿದ್ದು, ಈಗ ಮಾಸ್ಟರ್ ಪ್ಲಾನ್ ಮಾಡಿದಂತಿದೆ.
ಸದ್ಯ ತಮ್ಮ ಬಳಿಯೇ ಇರುವ ಅಧ್ಯಕ್ಷ ಸ್ಥಾನವನ್ನ ಹೇಗಾದ್ರು ಮಾಡಿ ಸಹೋದರನಿಗೆ ನೀಡುವಂತೆ ಹೈಕಮಾಂಡ್ ನಾಯಕರಲ್ಲಿ ಮನವಿ ಮಾಡಿದ್ದಾರೆ. ಡಿಕೆ ಸುರೇಶ್ ಇಲ್ಲಿವರೆಗೆ 4 ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದು, ಡಿ.ಕೆ ಸುರೇಶ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಡಿಕೆಶಿ ಪಟ್ಟು ಹಿಡಿದಿದ್ದಾರೆ.











