ಈ ಬಾರಿ ಚನ್ನಪಟ್ಟಣ ಬೈ ಎಲೆಕ್ಷನ್ (Channapattana By election) ಪ್ರಚಾರಕ್ಕೆ ದೇವೇಗೌಡರು (Devegowda) ಆ್ಯಂಬುಲೆನ್ಸ್‌ನಲ್ಲಿ ಬರ್ತಾರೆ ಎಂಬ ಡಿ.ಕೆ ಸುರೇಶ್ (Dk suresh) ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ. ಸಹೋದರನ ಈ ಹೇಳಿಕೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ (Dk shivakumar) ಅಲರ್ಟ್ ಆಗಿದ್ದಾರೆ.

ಯಾವುದೇ ಕಾರಣಕ್ಕೂ ಚನ್ನಪಟ್ಟಣ ಅಖಾಡದಲ್ಲಿ ವೈಯುಕ್ತಿಕ ನಿಂದನೆ ಬೇಡ ಅಂತ ಡಿ.ಕೆ.ಸುರೇಶ್ ಹಾಗೂ ಚನ್ನಪಟ್ಟಣ ಕಾಂಗ್ರೆಸ್ (Congress) ಕಾರ್ಯಕರ್ತರಿಗೆ ಡಿಕೆಶಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಈ ರೀತಿಯ ಹೇಳಿಕೆಗಳು ಮತದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಡಿಕೆ ಸಂದೇಶ ರವಾನಿಸಿದ್ದಾರೆ.
ಉಪಚುನಾವಣೆ ಅಖಾಡದಲ್ಲಿ ಕೇವಲ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿ, ಮತದಾರರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿ. ಯಾವುದೇ ವ್ಯಕ್ತಿ ಅಥವಾ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತುಗಳನ್ನ ಆಡೋದು ಬೇಡ ಅಂತ ಡಿಕೆಶಿ ಸಲಹೆ ನೀಡಿದ್ದಾರೆ.