ಕಾಂಗ್ರೆಸ್ ಗ್ಯಾರಂಟಿ ( Congress guarantee ) ಯೋಜನೆಯಲ್ಲಿ ಮಹಿಳೆಯರಿಗೆ ( Women’s ) ಉಚಿತ ಬಸ್ ಯೋಜನೆಯಾದ ಶಕ್ತಿ ಯೋಜನೆ ( Shakthi scheme ) ಬಹಳ ದೊಡ್ಡ ಮಟ್ಟದಲ್ಲಿ ಯಶಸ್ಸು ( Success ) ಸಾಧಿಸಿದೆ, ಈ ಯೋಜನೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ( Good Response ) ಸಿಗುತ್ತಿದೆ, ಆದರೆ ಈ ಯೋಜನೆ ಡಿಸಿಎಂ ಡಿ.ಕೆ.ಶಿವಕುಮಾರ್ ( DCM D.K Shivakumar ) ಸ್ವ ಕ್ಷೇತ್ರದಲ್ಲಿ ಸರಿಯಾದ ಸಾರಿಗೆ ಸೇವೆಗೆ ಆಗ್ರಹಿಸಿ ಇಂದು ನೂರಾರು ವಿದ್ಯಾರ್ಥಿಗಳು, ಪ್ರಯಾಣಿಕರು ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದಾರೆ, ನಗರದ ಬಸ್ ನಿಲ್ದಾಣದ ಸಮೀಪದಲ್ಲಿ ಬೆಂಗಳೂರು ಮತ್ತು ಗ್ರಾಮೀಣ ಭಾಗಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಸಮರ್ಪಕವಾಗಿ ಸಾರಿಗೆ ಬಸ್ ಸೇವೆ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದ್ರು.
ಇಂದು ಬೆಳ್ಳಂಬೆಳಗ್ಗೆ ಎಂಟರ ಸಮಯದಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ಸಾರಿಗೆ ಬಸ್ಸುಗಳಲ್ಲಿ ಆಸನಗಳಿಗಿಂತ ಹೆಚ್ಚು ಪ್ರಯಾಣಿಕರು ತುಂಬಿದ್ದರು, ಪ್ರತಿನಿತ್ಯ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ( Bangalore ) ಪ್ರಯಾಣ ಮಾಡುತ್ತಿದ್ದ ಕಾಲೇಜು ( college ) ವಿದ್ಯಾರ್ಥಿಗಳಿಗೆ ( Student ) ಬಸ್ಸುಗಳಲ್ಲಿ ಸ್ಥಳಾವಕಾಶವೇ ಇರಲಿಲ್ಲ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಆಗದೆ ತಾಳ್ಮೆ ಕಳೆದುಕೊಂಡ ವಿದ್ಯಾರ್ಥಿಗಳು ಸಾರಿಗೆ ಬಸ್ಸುಗಳನ್ನು ಅಡ್ಡಗಟ್ಟಿ ಪ್ರತಿಭಟನೆ ( Protest ) ಮಾಡಿದರು. ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿಯುತ್ತಿದ್ದಂತೆ ಪ್ರಯಾಣಿಕರು ಮತ್ತು ಬೆಂಗಳೂರಿಗೆ ತೆರಳುತ್ತಿದ್ದ ಉದ್ಯೋಗಿಗಳು ಸಹ ಪ್ರತಿಭಟನೆಗೆ ಕೈಜೋಡಿಸಿದ್ರು.
ಮಾಹಿತಿ ತಿಳಿಯುತ್ತಿದ್ದಂತೆ ಸಾರಿಗೆ ಇಲಾಖೆ ಡಿ ಟಿ ಓ ಪುರುಷೋತ್ತಮ್ ಮತ್ತು ಸಾರಿಗೆ ಘಟಕದ ಸಂಚಾರಿ ನಿಯಂತ್ರಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಅಗತ್ಯಕ್ಕೆ ತಕ್ಕಂತೆ ಬಸ್ಸು ಗಳಿಗಾಗಿ ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದೇವೆ ಆದಷ್ಟು ಶೀಘ್ರವಾಗಿ ಸಮಸ್ಯೆ ಬಗೆಹರಿಸುತ್ತೇವೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಪ್ರತಿಭಟನೆ ಕೈ ಬಿಡಿ ಎಂದು ಮನವಿ ಮಾಡಿಕೊಂಡರು ಆದರೆ ಅದಕೊಪ್ಪದ ವಿದ್ಯಾರ್ಥಿಗಳು ಈಗಲೇ ಸಮಸ್ಯೆ ಬಗೆಹರಿಸಬೇಕು ಎಂದು ಬಿಗಿಪಟ್ಟು ಹಿಡಿದಿದ್ದರಿಂದ ಸಾರಿಗೆ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ನಮ್ಮ ತಾಲೂಕಿನಲ್ಲಿ ಸಾರಿಗೆ ಸಮಸ್ಯೆ ಇಂದು ನೆನ್ನೆಯದಲ್ಲಿ ಹಲವಾರು ವರ್ಷಗಳಿಂದ ಪ್ರಯಾಣಿಕರು ಸಮರ್ಪಕವಾದ ಸಾರಿಗೆ ಸೇವೆ ಇಲ್ಲದ ಪರದಾಡುತ್ತಿದ್ದಾರೆ ಅದನ್ನು ಪ್ರಶ್ನಿಸಿದರೆ ಬಸ್ ನಿಲ್ದಾಣ ಅಧಿಕಾರಿಗಳು ಸಾರ್ವಜನಿಕರಿಗೆ ಸ್ವಲ್ಪವೂ ಗೌರವ ಕೊಡದೆ ದರ್ಪದಿಂದ ಮಾತನಾಡುತ್ತಾರೆ ನಾವು ಯಾರನ್ನ ಕೇಳಬೇಕು ಪ್ರಯಾಣಿಕರಿಗೆ ಅನುಗುಣವಾಗಿ ಸಾರಿಗೆ ಸೌಲಭ್ಯವಿಲ್ಲ ಬಸ್ಸುಗಳ ಸಂಖ್ಯೆ ಕಡಿಮೆ ಇದೆ ಪ್ರತಿನಿತ್ಯ ಬಸ್ಸು ಹತ್ತಲು ದುಸಾಹಸ ಮಾಡಬೇಕು ಬಸ್ಸಿನ ಹಿಂದೆ ಓಡಿ ಹೋಗ್ಬೇಕು ವಯೋ ವೃದ್ಧರು ವಿಶೇಷ ಚೇತನರು ಪ್ರಯಾಣ ಮಾಡುವುದು ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಖಾಸಗಿ ವಾಹನಗಳಲ್ಲಿ ಹೆಚ್ಚಿನ ಜನರು ಪ್ರಯಾಣಿಸಿದರೆ ಪೊಲೀಸರು ದಂಡ ಹಾಕಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಆದರೆ ಸಾರಿಗೆ ಬಸ್ಸಿನಲ್ಲಿ ಆ ನಿಯಮಗಳು ಯಾಕಿಲ್ಲ ಒಂದು ಬಸ್ಸಿನಲ್ಲಿ ಎರಡು ಬಸ್ಸಿನ ಜನರು ಪ್ರಯಾಣ ಮಾಡುವ ಪರಿಸ್ಥಿತಿ ಇದೆ ಬಸ್ಸಿನಲ್ಲಿ ಹೆಚ್ಚಿನ ಜನರನ್ನು ತುಂಬಿಕೊಂಡು ಹೋಗುವಾಗ ಪ್ರಯಾಣಿಕರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ ಪ್ರಾಣಪಾಯ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ ಸಮರ್ಪಕವಾಗಿ ಸಾರಿಗೆ ಸೇವೆ ಕಲ್ಪಿಸಲು ಸಾಧ್ಯವಾಗದಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ವಿದ್ಯಾರ್ಥಿಗಳು ಮತ್ತು ಬೆಂಗಳೂರಿಗೆ ಪ್ರತಿನಿತ್ಯ ಓಡಾಡುವ ಉದ್ಯೋಗಿಗಳಿಗೆ ಪಾಸ್ ವಿತರಣೆ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳ ಬೆವರಿಳಿಸಿದರು.
ಈ ಸುದ್ದಿಯನ್ನೂ ಓದಿ ; ಗ್ಯಾರಂಟಿಗಳ ಯಶಸ್ವಿ ಜಾರಿಯಿಂದ ಕರ್ನಾಟಕ ಮಾದರಿ ಅಭಿವೃದ್ಧಿಗೆ ಹೈಕಮಾಂಡ್ ಮೆಚ್ಚುಗೆ
ಶಕ್ತಿ ಯೋಜನೆ ಜಾರಿಯಾದ ಬೆನ್ನಲ್ಲೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಪ್ರತಿನಿತ್ಯ ಬೆಂಗಳೂರಿಗೆ ಪ್ರಯಾಣ ಬೆಳೆಸುವ ವಿದ್ಯಾರ್ಥಿಗಳು ಉಪಯೋಗಿಗಳು ಬಸ್ಸಿನಲ್ಲಿ ಬೆಂಗಳೂರಿನವರೆಗೂ ಎರಡು ಗಂಟೆಗಳ ಕಾಲ ನಿಂತು ಪ್ರಯಾಣ ಮಾಡಬೇಕು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಬೆಳಗ್ಗೆ ಮತ್ತು ಸಂಜೆ ನಿಂತು ಪ್ರಯಾಣ ಮಾಡಿ ಬೇಸತ್ತು ನಮ್ಮ ಓದಿನ ಕಡೆಗೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ವಿದ್ಯಾರ್ಥಿನಿಯರ ಪಾಡಂತೂ ಹೇಳತೀರದು ಉದ್ಯೋಗಿಗಳ ಪಾಡು ಇದಕ್ಕಿಂತ ಭಿನ್ನವಾಗಿಲ್ಲ
ಅನೇಕ ಬಾರಿ ಮನವಿ ಸಲ್ಲಿಸಿ ಪ್ರತಿಭಟನೆ ಮಾಡಿದರು ಸಹ ಯಾವುದೇ ಪ್ರಯೋಜನ ಆಗಿಲ್ಲ ಸಾರ್ವಜನಿಕರು ಧ್ವನಿ ಎತ್ತಿದಾಗ ಸಮಸ್ಯೆ ಬಗೆಹರಿಸುತ್ತೇವೆಂದು ಕೊಟ್ಟ ಭರವಸೆಗಳಲ್ಲಿ ಭರವಸೆಗಳಾಗಿ ಉಳಿದಿದೆ ನಿಮ್ಮ ಭರವಸೆಗಳಿಗೆ ನಾವು ಬಗ್ಗುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು.
ಒಂದು ದಿನ ಕಾಲಾವಕಾಶ ಕೊಡಿ ನಾಳೆಯಿಂದ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಡಿಟಿಓ ಪುರುಷೋತ್ತಮ್ ಮನವಿ ಮಾಡಿಕೊಂಡರು ಬರಿ ಬಾಯಿ ಮಾತಿನಲ್ಲಿ ಹೇಳಿದರೆ ನಾವು ನಂಬುವುದಿಲ್ಲ ಸಮಸ್ಯೆ ಬಗೆಹರಿಸುವುದಾಗಿ ಹಸ್ತಾಕ್ಷರಗಳಲ್ಲಿ ನಿಮ್ಮ ಸಹಿ ಸಹಿತ ಬರೆದು ಕೊಡುವಂತೆ ಬೇಡಿಕೆ ಇಟ್ರು ಅಧಿಕಾರಿಗಳು ಸಮಸ್ಯೆ ಬಗೆಹರಿಸುವುದಾಗಿ ಹಸ್ತಾಕ್ಷರದಲ್ಲಿ ಬರೆದು ಕೊಟ್ಟ ನಂತರ ಪ್ರತಿಭಟನೆ ಕೈ ಬಿಟ್ಟು ನಾಳೆ ಇದೇ ಸಮಸ್ಯೆ ಮುಂದುವರಿದರೆ ನಾಳೆ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆಯನ್ನು ಕೊಟ್ಟರು
ಬೆಳಿಗ್ಗೆ ಎಂಟು ಗಂಟೆಯಿಂದ 9 ಗಂಟೆಯವರೆಗೂ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಹೋಗಲು ಆಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು ಸಮಯ ಮೀರಿದ್ದರಿಂದ ಕೆಲವು ಕಾಲೇಜು ವಿದ್ಯಾರ್ಥಿಗಳು ಉದ್ಯೋಗಿಗಳು ಬೆಂಗಳೂರು ಪ್ರಯಾಣ ಕೈಬಿಟ್ಟು ಮನೆಗೆ ಹಿಂದಿರುಗಿದರು