ಮಹಾ ಶಿವರಾತ್ರಿಯಂದು (Maha shivaratri) ಈಶ ಫೌಂಡೇಶನ್ ನ (Isha foundation) ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ (Dcm dk Shivakumar) ಪ್ರತಿಕ್ರಿಯಿಸಿದ್ದಾರೆ. ಈಶ ಯೋಗ ಕೇಂದ್ರದ ಶಿವರಾತ್ರಿ ಕಾರ್ಯಕ್ರಮದಲ್ಲಿ ಡಿಕೆ ಭಾಗಿಗೆ ಆಕ್ಷೇಪ ವಿಚಾರಕ್ಕೆ ಸಂಬಂಧಪಟ್ಟಂತೆ, ಹೈಕಮಾಂಡ್ ನ ದೊಡ್ಡ ನಾಯಕರ ಬಗ್ಗೆ ನಾನು ಮಾತನಾಡಲ್ಲ, ರೀ..ಅವರೆಲ್ಲಾ ಹೈಕಮಾಂಡ್ ದೊಡ್ಡ ನಾಯಕರು, ನಾನು ಕಮೆಂಟ್ ಮಾಡಲ್ಲ ಎಂದಿದ್ದಾರೆ.

ನಾನು ಶಿವರಾತ್ರಿಗೆ ಹೋಗಿದ್ದೆ, ಅದು ನನ್ನ ವ್ಯಯಕ್ತಿಕ ನಂಬಿಕೆ,ಯಾರು ಎನ್ ಕಮೆಂಟ್ ಮಾಡಿದ್ರೋ ಗೊತ್ತಿಲ್ಲ. ಯಾವ ಬಿಜೆಪಿಯ ಸ್ವಾಗತನೂ ಬೇಡ.. ಕಾಂಗ್ರೆಸ್ ಸ್ವಾಗತನೂ ಬೇಡ. ಮಾಧ್ಯಮಗಳು ನನ್ನ ಬಗ್ಗೆ ಮಾತನಾಡೋದು ಬೇಡ ಎಂದಿದ್ದಾರೆ.

ಇನ್ನು ಸದ್ಗುರು ಅವರು ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದು ಗೊತ್ತಿಲ್ಲ.ಅವರು ಏನು ಕಮೆಂಟ್ ಮಾಡಿದ್ದಾರೋ ಗೊತ್ತಿಲ್ಲ. ಸದ್ಗುರು ಅವರು ನಮ್ಮ ರಾಜ್ಯದವರು, ನಮ್ಮ ಮೈಸೂರಿನವರು. ನನ್ನನ್ನು ಖುದ್ದಾಗಿ ಬಂದೂ ಕರೆದ್ರು, ಹಾಗಾಗಿ ಹೋಗಿದ್ದೆ ಎಂದಿದ್ದಾರೆ.

ಅವರ ಆಚಾರ ವಿಚಾರಗಳನ್ನ ನಾನು ನಂಬಿದ್ದೇನೆ.ಅವರು ಪರ್ಸನಲ್ ಆಗಿ ಎನ್ ಮಾತನಾಡಿದ್ದಾರೆ ಗೊತ್ತಿಲ್ಲ.ಯಾರ ಮಾತನ್ನ ಯಾರು ನಿಲ್ಲಿಸಲು ಆಗಲ್ಲ,ನಮ್ಮ ಲೀಡರ್ ರಾಹುಲ್ ಗಾಂಧಿನಮ್ಮ ಎದುರಿಗೆ ಹೇಳಿಕೆ ಕೊಟ್ರೆ ಬೇರೆ ಇರುತ್ತೆ.ಯಾವ ಎಐಸಿಸಿ ಯಾವ ಲೀಡರ್..ಅವರೆಲ್ಲಾ ನ್ಯಾಶನಲ್ ಲೀಡರ್ ಬಿಡಿ ಎಂದಿದ್ದಾರೆ.