ಈ ರಾಜ್ಯದಲ್ಲಿ ಏನೇ ನಡೆದರೂ ನಾವೇ ಹೊಣೆಯೇ?ಎಂದು, ಸಿ.ಟಿ ರವಿ (CT ravi) ಅವರ ವಿಚಾರದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ (Dcm Dk Shivakumar) ಹೇಳಿಕೆ ನೀಡಿದ್ದಾರೆ.
ಈ ರಾಜ್ಯದಲ್ಲಿ ಏನೇ ನಡೆದರೂ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ (Cm siddaramaiah) ಅವರೇ ಕಾರಣವೇ? ಎಲ್ಲದಕ್ಕೂ ನಾನೇ ಹೊಣೆಯೇ? ಸಿ.ಟಿ ರವಿ ಅವರ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಡಿಸಿಎಂ ಗರಂ ಆಗಿದ್ದಾರೆ.
ಏನೇ ಪ್ರಕರಣಗಳಿದ್ದರೂ ಆ ಬಗ್ಗೆ ಕ್ರಮ ತೆಗೆದುಕೊಳ್ಳಲು ಪೊಲೀಸರಿದ್ದಾರೆ, ಕಾನೂನಿದೆ. ಅವರು ಯಾವ, ಯಾವ ಸೆಕ್ಷನ್ ಗಳನ್ನು ಹಾಕಿದ್ದಾರೆ ಎಂಬುದು ನಮಗೆ ತಿಳಿದಿಲ್ಲ.ಇದರಲ್ಲಿ ನಮ್ಮ ಯಾವ ಹಸ್ತಕ್ಷೇಪವೂ ಇಲ್ಲ. ಅವರುಂಟು, ಕಾನೂನು ಹಾಗೂ ಪೊಲೀಸರುಂಟು ಎಂದಿದ್ದಾರೆ.
ಆದ್ರೆ ತಾಯಿಗೆ, ಹೆಣ್ಣು ಕುಲಕ್ಕೆ, ನಮ್ಮ ಸಂಸ್ಕೃತಿಗೆ ಆಗಿರುವ ಅವಮಾನದ ಬಗ್ಗೆ ಮೊದಲು ಉತ್ತರ ನೀಡಲಿ. ಓರ್ವ ಸಾರ್ವಜನಿಕ ವ್ಯಕ್ತಿಯಾಗಿ ಪರಿಷತ್ ನಲ್ಲಿ ಮಹಿಳೆಯ ಬಗ್ಗೆ ಅವರು ಆಡಿದ ಮಾತಿಗೆ ಮೊದಲು ಉತ್ತರ ನೀಡಲಿ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.