ಬೆಳಗಾವಿಯ ಸಾಹುಕಾರ್ ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ. ಇದೀಗ ಬಿಜೆಪಿ ಪಕ್ಷದಲ್ಲಿರುವ ರಮೇಶ್ ಜಾರಕಿಹೊಳಿ ಮತ್ತೆ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಕನಸು ಕಾಣುತ್ತಿದ್ದಾರೆ. ಆದರೆ ರಾಜಕೀಯ ತಂತ್ರಗಾರಿಕೆ ಮಾಡುತ್ತಿರುವುದು ಬಿಜೆಪಿಗೆ ತಿರುಮಂತರ ಆಗುವ ಸಾಧ್ಯತೆ ದಟ್ಟವಾಗಿದೆ. ಆಪರೇಷನ್ ಕಮಲಕಮ್ಕೆ ಒಳಗಾಗಿದ್ದ ರಮೇಶ್ ಜಾರಕಿಹೊಳಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿದ್ದರು. ಡಿ.ಕೆ ಶಿವಕುಮಾರ್ ಕಾರ್ಯ ನಿರ್ವಹಣೆ ಮಾಡ್ತಿದ್ದ ಜಲಸಂಪನ್ಮೂಲ ಇಲಾಖೆಯೇ ಬೇಕು ಎಂದು ಹಠ ಹಿಡಿದು ಪಡೆದುಕೊಂಡಿದ್ರು. ಆದರೆ ಕೆಲವೇ ದಿನಗಳಲ್ಲಿ ಬಿಡುಗಡೆ ಆದ ಬೆತ್ತಲೆ ವೀಡಿಯೋ ಪ್ರಕರಣದಲ್ಲಿ ಸರ್ಕಾರಕ್ಕೆ ಎದುರಾದ ಮುಜುಗರ ತಪ್ಪಿಸಲು ರಾಜೀನಾಮೆ ಕೊಟ್ಟು ತೆರೆಮರೆಗೆ ಸರಿದ ರಮೇಶ್ ಜಾರಕಿಹೊಳಿ, ಇದೀಗ ಮತ್ತೆ ಮುನ್ನಲೆಗೆ ಬರುವ ಪ್ರಯತ್ನ ಮಾಡಿದ್ದಾರೆ. ಆದರೆ ತಾನು ಮಾಡುತ್ತಿರುವ ಕೆಲಸ ತನ್ನ ಪಕ್ಷಕ್ಕೆ ಮುಳುವಾಗುವ ಬಗ್ಗೆ ರಾಜಕೀಯ ಪರಿಣಿತರು ಚರ್ಚೆ ನಡೆಸುತ್ತಿದ್ದಾರೆ.
ಬೆತ್ತಲಾಗಿದ್ದು ರಮೇಶ್ ಜಾರಕಿಹೊಳಿ, ಡಿಕೆಶಿ ಮೇಲೆ ಆರೋಪ..!
ತನ್ನ ಬೆತ್ತಲೆ ಸಿಡಿ ಮಾಡಿಸಿದ್ದು ಮಹಾನಾಯಕ ಎಂದಷ್ಟೇ ಹೇಳುತ್ತಿದ್ದ ರಮೇಶ್ ಜಾರಕಿಹೊಳಿ, ಇದೀಗ ನೇರವಾಗಿ ಡಿಕೆ ಶಿವಕುಮಾರ್ ಎಂದು ವಾಗ್ದಾಳಿ ನಡೆಸಿದ್ದಾರೆ. 21 ಮಾರ್ಚ್ 2021ರಂದು ಬಿಡುಗಡೆ ಆಗಿದ್ದ ಬೆತ್ತಲೆ ವೀಡಿಯೋ ಹಿಂದೆ ಡಿಕೆ.ಶಿವಕುಮಾರ್ ಇದ್ದಾನೆ. ಬ್ಲೂಫಿಲಂ ಮಾಡ್ಕೊಂಡೇ ರಾಜಕಾರಣ ಮಾಡ್ತಿರೋ ಮಹಾನಾಯಕ ಅಂತಾ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಡಿಕೆ.ಶಿವಕುಮಾರ್ ಮಹಿಳೆ ಮುಖಾಂತರ ನನ್ನ ತೇಜೋವಧೆ ಮಾಡಲು ಸಿ.ಡಿ ರಿಲೀಸ್ ಮಾಡಿದ್ದು. 40 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾನೆ. CD ಬಿಡುಗಡೆ ಹಿಂದೆ ಬರೋಬ್ಬರಿ 8 ಜನ ಇದ್ದಾರೆ. ಎಲ್ಲರನ್ನೂ ಅರೆಸ್ಟ್ ಮಾಡ್ಬೇಕು. ಮೊದಲು ಸಿ.ಡಿಯಲ್ಲಿ ಇರುವ ಹುಡುಗಿಯನ್ನ ಅರೆಸ್ಟ್ ಮಾಡ್ಬೇಕು. ಶ್ರವಣ್, ನರೇಶ್, ಕನಕಪುರದ ಗ್ರಾನೈಟ್ ಉದ್ಯಮಿ, ಡ್ರೈವರ್ ಕೃಷ್ಣಮೂರ್ತಿ ಮಂಡ್ಯದ ಇಬ್ಬರು ರಾಜಕಾರಣಿಗಳು ನನ್ನ ಸಿ.ಡಿ ಮಾಡಿದ್ರು. ಅವರನ್ನೂ ಅರೆಸ್ಟ್ ಮಾಡ್ಬೇಕು ಎಂದು ಆಗ್ರಹ ಮಾಡಿದ್ದಾರೆ. ರಾಜ್ಯದಲ್ಲಿ ನೂರಾರು ಜನರ ಸಿ.ಡಿಗಳನ್ನು ಮಾಡಿಟ್ಟುಕೊಂಡಿದ್ದು. ಸಿಬಿಐ ತನಿಖೆ ಆಗ್ಬೇಕು ಅಂತಾ ಒತ್ತಾಯ ಮಾಡಿದ್ದಾರೆ.

ಡಿಕೆಶಿ ಮೇಲೆ ಆರೋಪ ಬಿಜೆಪಿಗೆ ಮುಳುವಾಗುವುದು ಹೇಗೆ..?
ಡಿ.ಕೆ ಶಿವಕುಮಾರ್ ಉದ್ದೇಶ ಪೂರ್ವಕವಾಗಿ ರಮೇಶ್ ಜಾರಕಿಹೊಳಿ ಸಿ.ಡಿ ಮಾಡಿಸಿದ್ದಾರೆ ಎನ್ನುವ ಆರೋಪವನ್ನು ಒಪ್ಪಿಕೊಂಡರೂ ಬಟ್ಟೆ ಬಿಚ್ಚಿ ಬೇರೆಯವರ ಜೊತೆ ಪಲ್ಲಂಗದಾಟ ಆಡುವುದಕ್ಕೆ ಒತ್ತಾಯ ಮಾಡಿದ್ದಾರಾ..? ಇಲ್ಲ ಯಾರಾದರೂ ಗನ್ ಪಾಯಿಂಟ್ನಲ್ಲಿ ರಮೇಶ್ ಜಾರಕಿಹೊಳಿಯನ್ನು ಬೆದರಿಸಿ ಸಿ.ಡಿ ಮಾಡಿಕೊಂಡಿದ್ದಾರಾ..? ಅಥವಾ ಯಾರೋ ಹೆಣೆದ ಬಲೆಯಲ್ಲಿ ರಮೇಶ್ ಜಾರಕಿಹೊಳಿ ಬಲಿಪಶು ಆಗಿದ್ದಾರಾ..? ಎನ್ನುವ ಪ್ರಶ್ನೆ ಸೃಷ್ಟಿಯಾಗುತ್ತದೆ. ಆದರೆ ಇಲ್ಲಿ ರಮೇಶ್ ಜಾರಕಿಹೊಳಿಗೆ ಯಾರೋ ಬಲೆ ಬೀಸಿರಬಹುದು. ರಾಜಕಾರಣದಲ್ಲಿ ಅದೆಲ್ಲಾ ಇದ್ದಿದೆ. ಆದರೆ ಈತ ಕಚ್ಚೆ ಹರುಕ ಅನ್ನೋ ವಿಚಾರ ಗೊತ್ತಿದ್ದವರೇ ಮಾಡಿರುತ್ತಾರೆ ಎನ್ನುವುದು ಕೂಡ ಅಷ್ಟೇ ಸತ್ಯ. ಮೊನ್ನೆ ರಮೇಶ್ ಜಾರಕಿಹೊಳಿ ಆರೋಪಕ್ಕೆ ನೇರವಾಗಿ ತಿರುಗೇಟು ಕೊಟ್ಟಿದ್ದ ಡಿ.ಕೆ ಶಿವಕುಮಾರ್, ಸಿ.ಡಿ ವಿಚಾರದಲ್ಲಿ ನನ್ನ ಪಾತ್ರವಿಲ್ಲ, ಯಾರೋ ಷಡ್ಯಂತ್ರ ಮಾಡಿದ್ರೆ ಈತ ಚಡ್ಡಿ ಬಿಚ್ಚು ಎಂದು ನಾನು ಹೇಳಿಕೊಟ್ಟಿದ್ನಾ..? ಎಂದು ತಿರುಗೇಟು ನೀಡಿದ್ರು. ಇನ್ನು ಸಿಬಿಐ ಬೇಕಿದ್ರು ತನಿಖೆ ಮಾಡಲಿ, ಯಾವ ತನಿಖೆಯನ್ನಾದರೂ ಮಾಡಿಸಲಿ ಎಂದು ಸವಾಲು ಎಸೆದಿದ್ದರು. ಇದರಲ್ಲಿ ಡಿ.ಕೆ ಶಿವಕುಮಾರ್ ಮಾತಿಗೆ ಬೆಲೆ ಇದ್ದು, ರಮೇಶ್ ಜಾರಕಿಹೊಳಿ ಮಾತಿಗೆ ಯಾವುದೇ ಬೆಲೆ ಸಿಗುವುದಿಲ್ಲ.
ಕೋರ್ಟ್ ವಿಚಾರದಲ್ಲಿ ಮೂಗು ತೂರಿಸಿದ್ದು ರಮೇಶ್ಗೆ ಸಂಕಷ್ಟ..!
ರಮೇಶ್ ಜಾರಕಿಹೊಳಿ ಆರೋಪದ ಮೇಲೆ ಪೊಲೀಸ್ರು ತನಿಖೆ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಸಂತ್ರಸ್ತ ಯುವತಿ ಕೊಟ್ಟಿರುವ ದೂರಿನ ಆಧಾರದಲ್ಲಿ ಪೊಲೀಸ್ರು ತನಿಖೆ ಮಾಡಿ ಬಿ-ರಿಪೋರ್ಟ್ ಹಾಕಿದ್ದಾರೆ. ಪೊಲೀಸ್ರ ಈ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇನ್ನು ಕೋರ್ಟ್ ಕಣ್ಗಾವಲಿನಲ್ಲಿ ತನಿಖೆ ನಡೆಸಲಾಗ್ತಿದೆ. ಆದರೆ ರಮೇಶ್ ಜಾರಕಿಹೊಳಿ ಮಾತನಾಡಿರುವುದು ಕಾನೂನು ಮೀರಿದ ಅಂಶಗಳು. ಡಿ.ಕೆ ಶಿವಕುಮಾರ್ ಜೈಲಿಗೆ ಕಳುಹಿಸ್ತೇನೆ. ನನ್ನದೂ ಕೊನೆ ಚುನಾವಣೆ, ಡಿಕೆ ಶಿವಕುಮಾರ್ಗೂ ಕೊನೆ ಚುನಾವಣೆ ಎಂದು ಭವಿಷ್ಯ ನುಡಿದಿದ್ದಾರೆ. ಮುಂದೆ ಸಿಬಿಐ ತನಿಖೆ ಮಾಡುಸ್ತೀನಿ ಎಂದೆಲ್ಲಾ ಹೇಳಿಕೆ ಕೊಟ್ಟಿರುವುದು ರಾಜ್ಯದ ಪೊಲೀಸ್ ವ್ಯವಸ್ಥೆ ಮೇಲೆ ಅಪನಂಬಿಕೆ ಹಾಗು ಕೋರ್ಟ್ ಕಣ್ಗಾವಲಿನಲ್ಲಿ ತನಿಖೆ ನಟಡೆಯುತ್ತಿರುವಾಗ ಸಿಬಿಐ ತನಿಖೆ ಮಾಡಿಸ್ತೀನಿ ಎಂದರೆ ಕೋರ್ಟ್ ವಿರುದ್ಧ ಕೊಟ್ಟ ಹೇಳಿಕೆ ಆಗುತ್ತದೆ. ಈ ಬಗ್ಗೆ ಕೋರ್ಟ್ ಸ್ವಯಂ ಪ್ರೇರಣೆ ನ್ಯಾಯಾಂಗ ನಿಂದನೆ ಕೇಸ್ ದಾಖಲು ಮಾಡಿಕೊಳ್ಳಬಹುದು, ಅಥವಾ ಯಾರಾದರೂ ಈ ಬೈಟ್ ಇಟ್ಟುಕೊಂಡು ಕೋರ್ಟ್ಗೆ ಅರ್ಜಿ ಹಾಕಿದ್ರೆ ಸಂಕಷ್ಟ ಗ್ಯಾರಂಟಿ. ಅದೇನೇ ಇರಲಿ. ಜನ ಬ್ಲ್ಯೂ ಫಿಲ್ಮ್ ವಿಡಿಯೋದಲ್ಲಿ ಪಾತ್ರಧಾರಿ ಆಗಿದ್ದವನೇ ಆರೋಪ ಮಾಡಿದ್ರೆ ಜನ ನಂಬುತ್ತಾರೆ ಎನ್ನೋದು ಮುಟ್ಟಾಳತನ ಎನ್ನಬಹುದು. ಜನ ಮರೆತಿದ್ದನ್ನು ನೆನಪು ಮಾಡಿ, ಬಿಜೆಪಿಯಲ್ಲಿ ಇರುವುದೆಲ್ಲಾ ಇಂಥವರೇ..! ಎನ್ನುವ ಹಾಗೆ ಮಾಡಿದ್ದಾರೆ ಅಷ್ಟೆ.
