ಕಾಂಗ್ರೆಸ್ (Congress) ಪಕ್ಷದಲ್ಲಿ ಕಳೆದ ಹಲವು ದಿನಗಳಿಂದ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದ್ದು, ಈ ಎಲ್ಲಾ ಬೆಳವಣಿಗೆಗಳ ಬಗ್ಗೆ, ಪಕ್ಷದಲ್ಲೇ ಇರುವ ತಮ್ಮ ವಿರೋಧಿಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್(Dk Shivakumar ) ಕೌಂಟರ್ ಕೊಟ್ಟಿದ್ದಾರೆ

ನನ್ನನ್ನ ಪಕ್ಷದ ಅಧ್ಯಕ್ಷನಾಗಿ ಮಾಡಿರೋದು ಮನೆಯಲ್ಲಿ ಕೂರಿಸೋಕ್ಕಾ ?ನನ್ನ ಸ್ಟ್ರೆಂಥ್, ನನ್ನ ವೈಬ್ರೇಷನ್ ಏನು ಅಂತಾ ಹೈಕಮ್ಯಾಂಡ್ ಗೆ ಗೊತ್ತು. ನನ್ನನ್ನ ದೆಹಲಿ, ಆಂಧ್ರ, ತೆಲಂಗಾಣ, ಹಿಮಾಚಲ ಪ್ರದೇಶಕ್ಕೆ ಸುಮ್ಮನೆ ಕರೆಯುತ್ತಾರಾ ? ಎಂದು ಹೇಳಿದ್ದಾರೆ.
ನಾನು ಐದು ವರ್ಷದಿಂದ ಅಧ್ಯಕ್ಷನಾಗಿದ್ದೇನೆ.ಈಗ ಹೈಕಮಾಂಡ್ ನವರು ಡಿಸಿಎಂ ಮಾಡಿದ್ದಾರೆ. ಕಳೆದ 1990 ರಿಂದ ಸಚಿವನಾಗಿದ್ದೇನೆ. ಪಕ್ಷ ನನನ್ನು ಇಷ್ಟೆಲ್ಲಾ ಮಾಡಿದ ಮೇಲೆ ನಾನು ಮನೆಯಲ್ಲಿ ಕೂರದಕ್ಕೆ ಆಗುತ್ತಾ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡುವ ವಿರೋಧಿಗಳಿಗೆ ಡಿಕೆ ಶಿವಕುಮಾರ್ ಕೌಂಟರ್ ಕೊಟ್ಟಿದ್ದಾರೆ.










