ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಬೆಂಗಳೂರಿನ ಅವಘಡದಿಂದ ಭಯಭೀತರಾಗಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಿರುವ ಕ್ರಮ ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವಾಗಿದೆ ಎಂದು ಮಾಜಿ ಪೊಲೀಸ್ ಆಯುಕ್ತ, ಬಿಜೆಪಿ ನಾಯಕ ಭಾಸ್ಕರ್ ರಾವ್ (Bhaskar rao) ಹೇಳಿದ್ದಾರೆ.

ಇದು ಸತ್ಯ ಹೇಳಿದ್ದಕ್ಕೆ ಬಿ.ದಯಾನಂದ್ (B dayanand) ಅವರಿಗೆ ಸಿಕ್ಕಿರುವ ಬಹುಮಾನ ಅಂದ್ರೆ ಈ ಅಮಾನತು ಶಿಕ್ಷೆ ಮತ್ತು ಅವರು ಮತ್ತು ಅವರ ಇಡೀ ತಂಡ ಬೆಂಗಳೂರನ್ನು ಸುರಕ್ಷಿತವಾಗಿಡಲು ಇಡೀ ರಾತ್ರಿ ಶ್ರಮಿಸಿದ್ದಾರೆ.ಆದ್ರೆ ಅಂತಿಮವಾಗಿ ಸರ್ಕಾರ ಅವರಿಗೆ ಈ ಗೌರವ ನೀಡಿದೆ ಎಂದು ಕಿಡಿಕಾರಿದ್ದಾರೆ.

ಈ ಡೆತ್ ಮಾರ್ಚ್ ಅನ್ನು ಆಯೋಜಿಸಿದ್ದು ಡಿಸಿಎಂ ಡಿಕೆ ಶಿವಕುಮಾರ್ DK Shivakumar).ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲಾಗದ ಉಪಮುಖ್ಯಮಂತ್ರಿಯೇ ಪ್ರಮುಖ ಅಪರಾಧಿ ಎಂದು ಕರ್ನಾಟಕದ ಎಲ್ಲರಿಗೂ ತಿಳಿದಿದೆ.ಆದ್ರೆ ಅನ್ಯಾಯವಾಗಿ ಬೆಂಗಳೂರು ಕಮಿಷನರ್ ಮೇಲೆ ಅಸ್ತ್ರ ಪ್ರಯೋಗ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಸಿದ್ದರಾಮಯ್ಯನವರ ವಿಚಾರದಲ್ಲಿ ಹೇಳಬೇಕೆಂದರೆ ಎಂ..ಯಾವುದೇ ಮುಖ್ಯಮಂತ್ರಿ ಇಷ್ಟು ಅಸಹಾಯಕ, ಹೇಡಿ ಮತ್ತು ಭಯಭೀತರಾಗಿಲ್ಲ.ಸರ್ಕಾರವು ತನ್ನ ಕೈಗಳ ಮೇಲೆ ರಕ್ತವನ್ನು ಮೆತ್ತಿಕೊಂಡಿದೆ ಮತ್ತು ಈಗ ತನ್ನ ಯೋಗ್ಯತೆಯನ್ನು ಕಳೆದುಕೊಂಡಿದೆ. ರಾಜ್ಯ ಸರ್ಕಾರ ಈಗ ವಿಪತ್ತಿನಲ್ಲಿದೆ ಎಂದು ಭಾಸ್ಕರ್ ರಾವ್ ಕಿಡಿಕಾರಿದ್ದಾರೆ.






