ಮುಡಾ ಪ್ರಕರಣದ (Muda scam) ಬೆಳವಣಿಗೆಗಳ ಬಗ್ಗೆ ಹೈಕೋರ್ಟ್ (Highcourt) ಹಾಗೂ ಜನಪ್ರತಿನಿಧಿಗಳ ಕೋರ್ಟ್ ತೀರ್ಪಿನ ನಂತರ ಡಿಸಿಎಂ ಡಿಕೆ ಶಿವಕುಮಾರ್ (Dcm dk shivakumar) ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಲಯ ತನಿಖೆ ನಡೆಯಲಿ ಎಂದು ಆದೇಶ ಮಾಡಿದೆ. ಹೀಗಾಗಿ ತನಿಖೆ ನಡೆಯಲಿ ಎಂದಿದ್ದಾರೆ. 1
ಈ ವಿಚಾರದಲ್ಲಿ ಕೋರ್ಟ್ ಯಾವ ರೀತಿಅದೇಶ ನೀಡಿದೆ ಅದರಂತೆ ತನಿಖೆ ನಡೆಯುತ್ತೆ. ಇಲ್ಲಿ ಅಧಿಕಾರಿಗಳು ಒಂದು ವೇಳೆ ತಪ್ಪು ಮಾಡಿರಬಹುದು. ಆದ್ರೆ ಸಿಎಂ ಸಿದ್ದರಾಮಯ್ಯು (Cm siddaramaiah) ಮಾತ್ರ ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿದ್ದಾರೆ. ಆ ಮೂಲಕ ಪರೋಕ್ಷಾಗಿ ತಪ್ಪು ನಡೆದಿರುವುದನ್ನು ಡಿಕೆಶಿ ಒಪ್ಪಿಕೊಂಡಂತಿದೆ.
ಈ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿಲ್ಲ. ಇದನ್ನೇ ಬಳಸಿಕೊಂಡು ರಾಜಕಾರಣ ಮಾಡುವವರು ಮಾಡ್ತಾರೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.