ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಯಾಕೋ ಒಳಬೇಗುದಿ ಕಮ್ಮಿಯಾಗುವಂತೆ ಕಾಣುತ್ತಿಲ್ಲ. ಇದೀಗ ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ (Dcm Dk Shivakumar) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjuna Kharge) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರೋದು ಕುತೂಹಲಕ್ಕೆ ಕಾರಣವಾಗಿದೆ.

ಹೌದು ಎಐಸಿಸಿ ಅಧ್ಯಕ್ಷರನ್ನ ಕೆಪಿಸಿಸಿ ಅಧ್ಯಕ್ಷರು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗ್ತಿದೆ. ಇಂದು ಗದಗ್‌ನಲ್ಲಿ ಕೆ.ಹೆಚ್ ಪಾಟೀಲ್ ಶತಮಾನೋತ್ಸವ ಕಾರ್ಯಕ್ರಮ ಏರುವ ಹಿನ್ನಲೆ, ಬೆಂಗಳೂರಿನಿಂದ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಯಲ್ಲೇ ಡಿಸಿಎಂ ಗದಗ್‌ಗೆ ತೆರಳಿದ್ದಾರೆ.
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಪದೇ ಪದೇ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿಎಂ ಬದಲಾವಣೆ ಚರ್ಚೆಗಳು ಮುನ್ನಲೆಗೆ ಬರುತ್ತಿದೆ.ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ 5 ವರ್ಷ ಪೂರ್ಣಗೊಂಡ ಹಿನ್ನೆಲೆ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಡಿ.ಕೆ ಶಿವಕುಮಾರ್ ಮೊನ್ನೆಯಷ್ಟೇ ಡಿನ್ನರ್ ಪಾರ್ಟಿ ಕೂಡ ಆಯೋಜನೆ ಮಾಡಿದ್ರು.

ಈ ನಡುವೆ ಇದೀಗ ಎಐಸಿಸಿ ಅಧ್ಯಕ್ಷರ ವಿಶ್ವಾಸ ಗಳಿಸಲು ಡಿಸಿಎಂ ಮುಂದಾಗಿದ್ದಾರೆ. ಈ ಮಧ್ಯೆ ಪಕ್ಷದ ಒಂದಷ್ಟು ಹಿರಿಯ ನಾಯಕರು ಪದೇ ಪದೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಕೂಡ ಮಾಡ್ತಿದ್ದಾರೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ಮುಖೇನ ತನಗೆ ಎಐಸಿಸಿ ಬೆಂಬಲ ಇದೆ ಅಂತ ಡಿಸಿಎಂ ಸಂದೇಶ ರವಾನೆ ಮಾಡಿದ್ರಾ ಎಂಬ ಚರ್ಚೆ ಗರಿಗೆದರಿದೆ .