ಇಂದು ಮಂಡ್ಯದಿಂದ (mandya) ಮೈತ್ರಿ ಅಭ್ಯರ್ಥಿಯಾಗಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಂಡ್ಯ ಭಾಗದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಡಿಕೆ ಬ್ರದರ್ಸ್ (DK brothers) ವಿರುದ್ಧ ಹರಿದಿದ್ದಾರೆ . ಈ ಹಿಂದೆ ಕಾಂಗ್ರೆಸ್(congress) ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಲು ಸಂಪೂರ್ಣ ಬೆಂಬಲ ನೀಡಿದ್ವಿ ಅಂತ ಹೇಳ್ತಾರೆ . ಆದರೆ DK ಬ್ರದರ್ಸ್ ನನ್ನನು ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸ ಮಾಡಿದ್ರು ಅಂತ ಡಿಕೆ ಬ್ರದರ್ಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ , ರಾಮನಗರ(Ramanagar) , ಕನಕಪುರ (Kanakapura)ಭಾಗದ ಜೆಡಿಎಸ್ (jds) ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ನೇರ ನೇರ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ವಿರುದ್ಧ ಹರಿಹಾಯ್ದರು . ರಾಮನಗರ ಮತ್ತು ಕನಕಪುರಕ್ಕೆ , ನಾನು ಮುಖ್ಯಮಂತ್ರಿಯಾದ ಅವಧಿಯಲ್ಲಿ ನೀಡಿದ ಕೊಡುಗೆಗಳು ಮತ್ತು ಡಿಕೆ ಬ್ರದರ್ಸ್ ನಿಡಿರುವ ಕೊಡುಗೆಗಳು ಏನು ಅನ್ನೋದನ್ನ ಸಾರ್ವಜನಿಕವಾಗಿ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ , ಒಂದೇ ವೇದಿಕೆಗೆ ಬನ್ನಿ ಅಂತ ಡಿಕೆ ಬ್ರದರ್ಸ್ ಗೆ ಪಂಥಾಹ್ವಾನ ನೀಡಿದರು.

ಇದೇ ಸಂದರ್ಭದಲ್ಲಿ 2019ರ ಲೋಕಸಭಾ ಚುನಾವಣೆಯ ಮಂಡ್ಯ ಫಲಿತಾಂಶವನ್ನು ನೆನೆದ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು (Nikhil Kumaraswamy) ಗೆಲ್ಲಿಸಲು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ನನ್ನನ್ನು ನಂಬಿಸಿ ಡಿಕೆ ಬ್ರದರ್ಸ್ ನನ್ನ ಕತ್ತು ಕುಯ್ಯುವ ಕೆಲಸ ಮಾಡಿದ್ರು, ನನಗೆ ನಂಬಿಕೆ ದ್ರೋಹ ಮಾಡಿದ್ದಾರೆ ಅಂತ ಹೇಳುವ ಮೂಲಕ ,ಒಕ್ಕಲಿಗರ ಮತಗಳನ್ನು ತಮ್ಮ ಮತಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ಮಾಡಿದ್ದಾರೆ .

ಇದಕ್ಕೂ ಮುಂಚೆ ಡಿಕೆ ಬ್ರದರ್ಸ್ ನನಗೆ ವಿಷ ಹಾಕಿದ್ರು ಎಂಬ ಹೇಳಿಕೆ ಕೊಟ್ಟಿದ್ದ ಕುಮಾರಸ್ವಾಮಿ , ಈಗ ನಂಬಿಸಿ ಕತ್ತು ಕುಯ್ದಿದ್ದಾರೆ ಎಂಬ ಮಾತುಗಳನ್ನು ಆಡಿದ್ದಾರೆ ಇದಕ್ಕೆ ಡಿಕೆ ಬ್ರದರ್ಸ್ ಪ್ರತಿಕ್ರಿಯೆ ಏನು ಎಂಬುದನ್ನು ಕಾದುನೋಡಬೇಕಿದೆ.