• Home
  • About Us
  • ಕರ್ನಾಟಕ
Thursday, July 17, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಅಭಿವೃದ್ಧಿಯೇ ನಮ್ಮ ತಂದೆ ತಾಯಿ, ಗ್ಯಾರಂಟಿಗಳೇ ಬಂಧು ಬಳಗ: ಡಿಸಿಎಂ ಡಿ.ಕೆ.ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
March 9, 2025
in ಕರ್ನಾಟಕ, ಜೀವನದ ಶೈಲಿ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಕ್ಷೇತ್ರಕ್ಕೆ ರೂ.400 ಕೋಟಿ ಅನುದಾನ, ನೀರಾವರಿ ಇಲಾಖೆಯಿಂದ ರೂ.250 ಕೋಟಿ ಮೊತ್ತದ ಕೆಲಸಗಳು ನಡೆಯುತ್ತಿವೆ

ADVERTISEMENT

ಕನಕಪುರ, ಮಾ.9:

“ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ನಮಗೆ ಅಭಿವೃದ್ಧಿಯೇ ತಾಯಿ ತಂದೆ, ಗ್ಯಾರಂಟಿಗಳೇ ಬಂಧು ಬಳಗ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕನಕಪುರ ತಾಲ್ಲೂಕಿನ ಭೂಹಳ್ಳಿ ಹೊಸಕೆರೆ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, “ನನ್ನ ಕ್ಷೇತ್ರಕ್ಕೆ ಸುಮಾರು ರೂ.400 ಕೋಟಿಗಳಷ್ಟು ಅನುದಾನ ತಂದಿದ್ದೇನೆ. ಒಂದೇ ಸಲ ಅನುದಾನ ತಂದರೆ ಬೇರೆ ಕ್ಷೇತ್ರದವರು ಪ್ರಶ್ನೆ ಮಾಡುತ್ತಾರೆ. ಹಂತ,‌ ಹಂತವಾಗಿ ಅನುದಾನ ತಂದು ಅಭಿವೃದ್ಧಿ ಕೆಲಸದ ಮೂಲಕ ಜನರ ಋಣ ತೀರಿಸಲಾಗುವುದು. ರೂ.250 ಕೋಟಿ ಮೊತ್ತದ ಕಾಮಗಾರಿಗಳು ನೀರಾವರಿ ಇಲಾಖೆಯಿಂದಲೇ ನಡೆಯುತ್ತಿದೆ” ಎಂದರು.

“ಪಾದ್ದರೆಯಿಂದ ಭೂಹಳ್ಳಿ ಅರಣ್ಯ ತಪಾಸಣಾ ಕೇಂದ್ರದ ವರೆಗೆ ಸುಮಾರು ರೂ.13 ಕೋಟಿ ವೆಚ್ಚದಲ್ಲಿ ರಸ್ತೆ, ದೊಡ್ಡಆಲಹಳ್ಳಿಯಿಂದ ಕಬ್ಬಾಳಿನ ತನಕ 40 ಕೋಟಿ ವೆಚ್ಚದಲ್ಲಿ ರೂ.14.5 ಕಿಮೀ ಉದ್ದದ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಇದರಿಂದ ನಮ್ಮ ಜನರ ಆಸ್ತಿ ಮೌಲ್ಯ ಹೆಚ್ಚಾಗಲಿದೆ” ಎಂದು ಹೇಳಿದರು.



ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಬಳಿಯ ಭೂಹಳ್ಳಿ ಅರಣ್ಯ ತಪಾಸಣಾ ಕೇಂದ್ರದಲ್ಲಿ ಪಾದ್ದರೆಯಿಂದ ಭೂಹಳ್ಳಿ ಅರಣ್ಯ ತಪಾಸಣಾ ಕೇಂದ್ರದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಭಾನುವಾರ ನೆರವೇರಿಸಿದರು. ನಿಕಟಪೂರ್ವ ಸಂಸದ ಡಿ ಕೆ ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಸುಧಾಮ್ ದಾಸ್, ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ, ಜಿ.ಪಂ. ಸಿಇಒ ಅನ್ಮೋಲ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

“ಕನಕಪುರ, ಸಾತನೂರು, ದೊಡ್ಡ ಆಲಹಳ್ಳಿ ರಸ್ತೆಗಳನ್ನು ಅಗಲೀಕರಣ ಮಾಡಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ನಗುತ್ತಿದ್ದರು. ಆದರೆ ಇಂದು ಕೆಲಸವನ್ನು ಮಾಡಿ ತೋರಿಸಿದ್ದೇವೆ. ರಸ್ತೆ ಅಭಿವೃದ್ಧಿಗೆ ಎಂದು ರೂ.135 ಕೋಟಿ, ಹೊಸಕೆರೆ ತುಂಬಿಸಲು ರೂ.108 ಕೋಟಿ ಖರ್ಚು ಮಾಡಲಾಗುತ್ತಿದೆ. ನಲ್ಲಳ್ಳಿ- ಮುಲ್ಲಳ್ಳಿ ಸಂಪರ್ಕ ಸೇತುವೆಗೆ ರೂ.11 ಕೋಟಿ, ಅರ್ಕಾವತಿಯಿಂದ ನೀರನ್ನು ಎತ್ತಿ ದೊಡ್ಡ ಆಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಸೂಕ್ಷ್ಮ ನೀರಾವರಿ ಕಲ್ಪಿಸಲು ರೂ. 70 ಕೋಟಿಯ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ 8 ಗ್ರಾಮಗಳ 2 ಸಾವಿರ ಎಕರೆ ಭೂಮಿಗೆ ಉಪಯೋಗವಾಗಲಿದೆ. ಅರ್ಕಾವತಿ ನದಿಗೆ ಅಡ್ಡಲಾಗಿ ಕೊಕ್ಕರೆ ಹೊಸಹಳ್ಳಿ ಬಳಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ರೂ.10 ಕೋಟಿ ವೆಚ್ಚ ಮಾಡಲಾಗುತ್ತಿದೆ” ಎಂದು ತಿಳಿಸಿದರು.

ಕ್ಷೇತ್ರದ ಎಲ್ಲಾ ಕೆರೆಗಳನ್ನು ತುಂಬಿಸಲು ಕ್ರಮ

“ನನ್ನ ಕ್ಷೇತ್ರದಲ್ಲಿ ಎಷ್ಟು ಕೆರೆಗಳನ್ನು ತುಂಬಿಸಲು ಸಾಧ್ಯವೋ ಅಷ್ಟು ಕೆರೆಗಳನ್ನು ತುಂಬಿಸುತ್ತೇನೆ. ಹಂತ,‌ ಹಂತವಾಗಿ ಕೆಲಸಗಳನ್ನು ಮಾಡುತ್ತೇನೆ. ಅಧಿಕಾರ ಅವಧಿಯಲ್ಲಿ ಎಲ್ಲಾ ಕಡೆ ನೀರು ತುಂಬಿ ಹರಿಯಬೇಕು. ಚನ್ನಪಟ್ಟಣ, ರಾಮನಗರ, ಮಾಗಡಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಲಾಗಿದೆ. ಅಲ್ಲಿನ ಜನಕ್ಕೂ ನಾನು ಕೆಲಸ ಮಾಡಿಸುವುದಾಗಿ ಮಾತು ಕೊಟ್ಟಿದ್ದೇನೆ” ಎಂದರು.

“ಮೇಕೆದಾಟು ಕಚೇರಿ ಪ್ರಾರಂಭ ಮಾಡಲಾಗಿದ್ದು. ಎಷ್ಟು ಜಮೀನು ಮುಳುಗಡೆಯಾಗುತ್ತದೆ ಎಂದು ಅಂದಾಜು ಮಾಡಲು ಕಂದಾಯ ಹಾಗೂ ಅರಣ್ಯ ಅಧಿಕಾರಿಗಳು ಕೆಲಸ ಪ್ರಾರಂಭ ಮಾಡಿದ್ದಾರೆ. ಕಾವೇರಿ ನದಿಯಿಂದ ನೀರನ್ನು ತಂದು ಜನರ ಬದುಕನ್ನು ಬದಲಾವಣೆ ಮಾಡುವ ದೊಡ್ಡ ಕೆಲಸ ನಡೆಯುತ್ತಿದೆ” ಎಂದರು.

“ಒಬ್ಬ ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎನ್ನುವುದಕ್ಕಿಂತ ಆತ ಎಷ್ಟು ಜನರ ಬದುಕನ್ನು ಬದಲಾವಣೆ ಮಾಡಿದ ಎನ್ನುವುದು ಮುಖ್ಯ‌. ಕೆರೆ ತುಂಬಿಸುವ ಯೋಜನೆಯಿಂದ ಸಾವಿರಾರು ರೈತರಿಗೆ ಉಪಯೋಗವಾಗುತ್ತದೆ. ಅಂತರ್ಜಲ ಹೆಚ್ಚುತ್ತದೆ, ಭೂಮಿ ಸದಾ ಹಸಿರಾಗಿ ಇರುತ್ತದೆ. ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ” ಎಂದರು.

“ಚೀನಾದಿಂದ ರೇಷ್ಮೆ ಆಮದು ಕಡಿಮೆಯಾಗಿದೆ. ಆದ ಕಾರಣಕ್ಕೆ ರೇಷ್ಮೆಗೆ ಉತ್ತಮ ಬೆಲೆ ಬಂದಿದೆ. ಅದಕ್ಕೆ ಯಾರೂ ಸಹ ಭೂಮಿಯನ್ನು ಮಾರಾಟ ಮಾಡಲು ಹೋಗಬೇಡಿ. ಮುಂದಕ್ಕೆ ನಿಮ್ಮ ಭೂಮಿಯ ಬೆಲೆ ಹೆಚ್ಚಲಿದೆ. ಶಿಡ್ಲಘಟ್ಟ ಭಾಗದಲ್ಲಿ ನಮಗಿಂತ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದಾರೆ. ಸಿಲ್ಕ್ ಮತ್ತು ಮಿಲ್ಕ್ ಅನ್ನು ಕೋಲಾರ ಭಾಗದಲ್ಲಿ ಹೆಚ್ಚು ಉತ್ಪಾದನೆ ಮಾಡುತ್ತಿದ್ದಾರೆ” ಎಂದರು.

“ದೇವೆಗೌಡರು ಹಾಗೂ ಕುಮಾರಸ್ವಾಮಿ ಅವರು ಸಾತನೂರು ಹೋಬಳಿಯನ್ನು ರಾಮನಗರಕ್ಕೆ ಸೇರಿಸಲು ಹೊರಟಿದ್ದರು. ಕನಕಪುರದಲ್ಲಿಯೇ ಸಾತನೂರನ್ನು ಉಳಿಸಿಕೊಳ್ಳಬೇಕು ಎಂದು ಸ್ಥಳೀಯ ಮುಖಂಡರಿಂದ ದೊಡ್ಡ ಹೋರಾಟ ನಡೆದ ಕಾರಣಕ್ಕೆ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಸಿಕ್ಕಿದೆ” ಎಂದರು.

“ಕ್ಷೇತ್ರ ಪುನರ್ ವಿಂಗಡಣೆ ವೇಳೆ ಎಸ್.ಎಂ.ಕೃಷ್ಣ ಅವರು ಹಾಗೂ ಕುಲದೀಪ್ ಸಿಂಗ್ ಅವರ ಪ್ರಯತ್ನದ ಫಲವಾಗಿ ಈ ಹೋಬಳಿ ಕನಕಪುರದಲ್ಲಿಯೇ ಉಳಿಯಿತು. ಈ ಸಂದರ್ಭದಲ್ಲಿ ನನಗೆ ಉಂಟಾದ ಸಮಾಧಾನಕ್ಕಿಂತ ಹೆಚ್ಚು ಸಮಾಧಾನವಾಗುತ್ತಿದೆ. ಏಕೆಂದರೆ ಕಾವೇರಿ ಸಂಗಮದಿಂದ ನೀರು ತಂದು ಈ ಭಾಗದ 21 ಕೆರೆಗಳಿಗೆ ತುಂಬಿಸುವ ಯೋಜನೆ ನನಗೆ ತೃಪ್ತಿ ನೀಡುತ್ತಿದೆ” ಎಂದು ಹೇಳಿದರು.

“ರೈತರ ಬದುಕನ್ನು ಹಸನು ಮಾಡಬೇಕು‌ ಎಂದು ಸರ್ಕಾರದ ಮೇಲೆ ಪ್ರಭಾವ ಬೀರಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಅಂದಿನ ಹೋಬಳಿ ಉಳಿಸಿ ಹೋರಾಟ ಇಂದಿಗೆ ಫಲ ಕೊಟ್ಟಿದೆ” ಎಂದರು.

“ಕ್ಷೇತ್ರದ ಅನೇಕ ವಿದ್ಯಾವಂತ ಯುವಕರಿಗೆ ಅನೇಕ ಖಾಸಗಿ ಕಂಪೆನಿಗಳಲ್ಲಿ ಕೆಲಸ ಕೊಡಿಸಲಾಗಿದೆ. ಇನ್ನೂ ಬಾಕಿ ಇದ್ದರೆ ಅವರಿಗೂ ಕೆಲಸ ಕೊಡಿಸಲಾಗುವುದು” ಎಂದರು.

Tags: cm kumaraswamyCongress meetingDCM DK ShivakumarDinesh Gundu RaoDK Shivakumardk sureshKanakapurakannada latest newskannada news livekannada online newskannada tv channelkarnataka latest newskarnataka political developmentsKarnataka Politicslive karnataka newsmallikarjun kharge biographynews first kannadaonline kannada newsrahul gandhi newsramanagarasadashiva nagarsiddaramaiah on cm kumaraswamysiddaramaiah on farmer loan relief
Previous Post

“ಮರಳಿ ಮನಸಾಗಿದೆ” ಹಾಡುಗಳ ದಿಬ್ಬಣ ಶುರುವಾಗಿದೆ .

Next Post

ರಾಜ್ಯ ಸರ್ಕಾರದಲ್ಲಿ ತಾಳ ಮೇಳ ಇಲ್ಲ.. ಪ್ರಹ್ಲಾದ್​ ಜೋಶಿ ಟೀಕೆ

Related Posts

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು
Top Story

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು

by ಪ್ರತಿಧ್ವನಿ
July 17, 2025
0

-----ನಾ ದಿವಾಕರ---- ಸ್ಥಳಗಳಿಗೆ ಹೊಸ ಹೆಸರಿಸುವ ಪರಂಪರೆಗೆ ಪ್ರಜಾತಂತ್ರದ ಸ್ಪರ್ಶ ಇರಬೇಕು ಭಾರತದ ರಾಜಕಾರಣದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಊರುಗಳ, ನಗರಗಳ ಮತ್ತು ರಸ್ತೆ-ವೃತ್ತಗಳ ಹೆಸರುಗಳನ್ನು...

Read moreDetails
ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?

ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?

July 16, 2025

Basavaraj Bommai: ಜಿಟಿಟಿಸಿ ತರಬೇತಿ ಪಡೆಯುವವರಿಗೆ ಒಳ್ಳೆಯ ಭವಿಷ್ಯವಿದೆ..

July 16, 2025

CM Siddaramaiah: ನ್ಯಾಯ ಯೋಧ ರಾಹುಲ್ ಗಾಂಧಿಯವರ ಧೈರ್ಯಕ್ಕೆ ಅಭಿನಂದಿಸಿದ ಸಿಎಂ.

July 16, 2025

Just Married: ಜನಮನಸೂರೆಗೊಳ್ಳುತ್ತಿದೆ “ಜಸ್ಟ್ ಮ್ಯಾರೀಡ್” ಚಿತ್ರದ “ಮಾಂಗಲ್ಯಂ ತಂತು ನಾನೇನಾ” ಹಾಡು .

July 16, 2025
Next Post
ರಾಜ್ಯ ಸರ್ಕಾರದಲ್ಲಿ ತಾಳ ಮೇಳ ಇಲ್ಲ.. ಪ್ರಹ್ಲಾದ್​ ಜೋಶಿ ಟೀಕೆ

ರಾಜ್ಯ ಸರ್ಕಾರದಲ್ಲಿ ತಾಳ ಮೇಳ ಇಲ್ಲ.. ಪ್ರಹ್ಲಾದ್​ ಜೋಶಿ ಟೀಕೆ

Recent News

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು
Top Story

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು

by ಪ್ರತಿಧ್ವನಿ
July 17, 2025
ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?
Top Story

ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?

by ಪ್ರತಿಧ್ವನಿ
July 16, 2025
Top Story

CM Siddaramaiah: ನ್ಯಾಯ ಯೋಧ ರಾಹುಲ್ ಗಾಂಧಿಯವರ ಧೈರ್ಯಕ್ಕೆ ಅಭಿನಂದಿಸಿದ ಸಿಎಂ.

by ಪ್ರತಿಧ್ವನಿ
July 16, 2025
Top Story

Just Married: ಜನಮನಸೂರೆಗೊಳ್ಳುತ್ತಿದೆ “ಜಸ್ಟ್ ಮ್ಯಾರೀಡ್” ಚಿತ್ರದ “ಮಾಂಗಲ್ಯಂ ತಂತು ನಾನೇನಾ” ಹಾಡು .

by ಪ್ರತಿಧ್ವನಿ
July 16, 2025
ರಾಜ್ಯದಲ್ಲಿ ಹೂಡಿಕೆ: ಕೈಗಾರಿಕಾ ಸಚಿವ ಎಂ ಬಿ ಪಾಟೀಲರ ಜತೆ ರೋಲ್ಸ್‌ ರಾಯ್ಸ್‌ ಕಂಪನಿ ಮಾತುಕತೆ
Top Story

ರಾಜ್ಯದಲ್ಲಿ ಹೂಡಿಕೆ: ಕೈಗಾರಿಕಾ ಸಚಿವ ಎಂ ಬಿ ಪಾಟೀಲರ ಜತೆ ರೋಲ್ಸ್‌ ರಾಯ್ಸ್‌ ಕಂಪನಿ ಮಾತುಕತೆ

by ಪ್ರತಿಧ್ವನಿ
July 16, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು

July 17, 2025
ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?

ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?

July 16, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada