ಹಾಸನ:ಲೋಕಸಭಾ ಚುನಾವಣೆ ವೇಳೆಯಲ್ಲಿ ಹಣ ಹಂಚಿಕೆ ಬಗ್ಗೆ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ (shivalinge gowda)ಅವರದ್ದು ಎನ್ನಲಾದ ಆಡಿಯೊ ವೈರಲ್ ಬಗ್ಗೆ ಎಸ್ಪಿ ಕಛೇರಿಗೆ ಜೆಡಿಎಸ್ ನಾಯಕರು ದೂರು ನೀಡಿದ್ದಾರೆ.ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಾಜಿ ಶಾಸಕ ಲಿಂಗೇಶ್ ನೇತೃತ್ವದಲ್ಲಿ ದೂರು ನೀಡಿದ್ದು, ಹಿಂಬರಹ ಪಡೆದುಕೊಂಡಿದ್ದಾರೆ. ಶಾಸಕ ಶಿವಲಿಂಗೇಗೌಡ ವಿರುದ್ದ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮೊದಲು ದೂರು ಸ್ವೀಕರಿಸಲು ಪೊಲೀಸರು ನಿಕಾಕರಣೆ ಹಿನ್ನೆಲೆಯಲ್ಲಿ ಬಳಿಕ ಎಸ್ಪಿ ಕಛೇರಿಗೆ ದೂರು ನೀಡಲಾಗಿದೆ. ಸುಮಾರು 28 ಸೆಕೆಂಡ್ಸ್ ಇರುವ ಆಡಿಯೊ ಅಂಶಗಳನ್ನು ಪ್ರಸ್ತಾಪಿಸಿ ದೂರು ನೀಡಲಾಗಿದೆ.
ಏಳು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮತದಾರರಿಗೆ ಹಂಚಿಕೆ ಮಾಡಿದ ಬಗ್ಗೆ ಆಡಿಯೊ ವೈರಲ್ ಆಗಿದೆ. ಶಾಸಕ ಶಿವಲಿಂಗೇಗೌಡ ಅವರದ್ದು ಎನ್ನಲಾದ ಆಡಿಯೊದಲ್ಲಿ ಹಾಸನದ ಕಾಂಗ್ರೆಸ್ ನಾಯಕರಾದ ಗೋಪಾಲಸ್ಚಾಮಿ, ಬಿ ಶಿವರಾಂ ಮತ್ತು ಸಿಎಂ, ಡಿಸಿಎಂ ಹೆಸರು ಪ್ರಸ್ತಾಪ ಆಗಿದೆ. ಹಂಚಿಕೆ ಆಗಿರುವ ಹಣ ಹವಾಲಾ ಹಣ ಆಗಿರುವ ಅನುಮಾನ ಇದೆ. ಹವಾಲಾ ಹಣ ಕಾನೂನು ಬಾಹಿರವಾಗಿದ್ದು ಈ ಬಗ್ಗೆ ತನಿಖೆ ಆಗಬೇಕು. ಕೇಸ್ ದಾಖಲಿಸಿ ತನಿಖೆ ನಡೆಸಲು ಒತ್ತಾಯಿಸಲಾಗಿದೆ.