ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ಬಿಜೆಪಿ ಪ್ರತಿಭಟನೆ ವೇಳೆ ವಿವಸ್ತ್ರಗೊಂಡಿದ್ದ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯ ಅಸಲಿ ಮುಖ ಬಯಲಾಗಿದೆ.

ಸುಜಾತಾ ಹಂಡಿ 3 ವರ್ಷಗಳ ಹಿಂದೆ ಧಾರವಾಡ ತಾಲೂಕಿನ ತುಕಾರಾಮ್ ಎಂಬ ವ್ಯಕ್ತಿಗೆ ಹನಿಟ್ರ್ಯಾಪ್ ಮಾಡಿ ಕರೆದುಕೊಂಡು ಬಂದು ಕೂಡಿ ಹಾಕಿ 4 ದಿನ ಟಾರ್ಚರ್ ಮಾಡಿದ್ದಳು. ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಳು.

ಹನಿಟ್ರ್ಯಾಪ್ ಮಾಡಿದ್ದ ಸುಜಾತಾ ಹಂಡಿ ಹಣಕ್ಕೆ ಬೇಡಿಕೆಯಿಟ್ಟು ಹಿಗ್ಗಾಮುಗ್ಗಾ ಥಳಿಸಿದ್ದಳು. ಅಮ್ಮಾ, ತಾಯಿ ಅಕ್ಕಾ ಬಿಟ್ಟುಬಿಡು ಅಂತ ಆ ವ್ಯಕ್ತಿ ಗೋಳಾಡಿದ್ರೂ, ಕಾಲಿಗೆ ಬಿದ್ದು ಕಣ್ಣೀರು ಹಾಕಿದ್ರೂ ಬಿಡದೇ ನೈಲಾನ್ ಹಗ್ಗದಿಂದ ಮನಸೋ ಇಚ್ಛೆ ಥಳಿಸಿದ್ದಳು. ಲಾಂಗ್ ಹಿಡಿದು ಲೇಡಿ ಡಾನ್ನಂತೆ ಬೆದರಿಕೆಯೂ ಹಾಕಿ ಸಹಚರರ ಜೊತೆ ಸೇರಿ 1.84 ಲಕ್ಷ ರೂ. ಹಣವನ್ನೂ ವಸೂಲಿ ಮಾಡಿದ್ದಳು ಎನ್ನಲಾಗಿದೆ.

ಈ ಬಗ್ಗೆ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸುಜಾತಾ ಮತ್ತು ಆಕೆ ಸಹಚರರ ವಿರುದ್ಧ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ 2023 ರ ನವೆಂಬರ್ 12 ರಂದು ದೂರು ದಾಖಲಿಸಿದ್ದರು. ಸದ್ಯ ಈ ಕೇಸ್ ನ್ಯಾಯಾಲಯದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.







