ಇಂಡಿಯಾ (I.N.D.I.A) ಮೈತ್ರಿ ಕೂಟದಲ್ಲಿ ದೊಡ್ಡ ಬಿರುಕು ಮೂಡಿದಂತೆ ಬಾಸವಾಗುತ್ತಿದೆ. ಇತ್ತೇಚೆಗೆ ನಡೆದ ಹರಿಯಾಣ (Haryana), ಮಹಾರಾಷ್ಟ್ರ (Maharashtra) ಚುನಾವಣೆಗಳ ಸೋಲಿನ ಬಳಿಕ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ .
ಈ ಹಿನ್ನಲೆಯಲ್ಲಿ ಇಂಡಿಯಾ ಒಕ್ಕೂಟದ ನಾಯಕತ್ವ ಬದಲಾಗಬೇಕು ಎಂಬ ಕೂಗು ಜೋರಾಗಿದ್ದು, ಸಮಾಜವಾದಿ ಪಕ್ಷ (SP) ಈ ಬಗ್ಗೆ ಧ್ವನಿ ಎತ್ತಿದೆ. ಆದ್ರೆ ಕಾಂಗ್ರೆಸ್ ಪಕ್ಷ ಈ ನಿಲುವನ್ನು ವಿರೋಧಿಸಿದೆ. ಹೀಗಾಗಿ ಸಮಾಜವಾದಿ ಪಕ್ಷ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿಯಿಂದ (MVA) ಹೊರ ನಡೆದಿದೆ.

ಮತ್ತೊಂದೆಡೆ ಲೋಕಸಭೆಯಲ್ಲಿ ಅಧಿವೇಶನ ವೇಳೆ ಗೌತಮ್ ಅದಾನಿ (Gowtam adani) ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಿಂದ ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳು ದೂರ ಉಳಿದಿವೆ.
ಹೀಗಾಗೀ ಈ ಒಕ್ಕೂಟದಲ್ಲಿ ನಾಯಕತ್ವಕ್ಕಾಗಿ ಹೋರಾಟ ಶುರುವಾಗಿದೆ. ಇತ್ತ ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ, ತಮಗೆ ಅವಕಾಶ ಸಿಕ್ಕರೆ, ಇಂಡಿಯಾ ಕೂಟದ ನೇತೃತ್ವ ವಹಿಸಲು ಸಿದ್ದ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamatha benarji) ಹೇಳಿರುವುದು ಕೊಟ್ಟೋಹಲಕ್ಕೆ ಕಾರಣವಾಗಿದೆ.