ದೇಶದ ಚುನಾವಣೆ ಫಲಿತಾಂಶ ಪ್ರಕಟವಾದ ದಿನ ಷೇರು ಮಾರುಕಟ್ಟೆ ಕುಸಿತ ಕಂಡಿರುವ ಹಿಂದೆ ದೊಡ್ಡ ಹಗರಣವೇ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಅಲ್ಲದೇ, ಹಗರಣದಿಂದ ಹೂಡಿಕೆದಾರರ 30 ಲಕ್ಷ ಕೋಟಿ ರೂ. ನಷ್ಟಕ್ಕೆ ಕಾರಣವಾಗಿದೆ. ನರೇಂದ್ರ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇದರಲ್ಲಿ ನೇರವಾಗಿ ಭಾಗಿಯಾಗಿದ್ದು, ಈ ಕುರಿತು ತನಿಖೆಯಾಗಬೇಕೆಂದು ಆಗ್ರಹಿಸಿದ್ದರು. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇರಳ ಕಾಂಗ್ರೆಸ್ ದಾಖಲೆಯೊಂದನ್ನು ಬಿಡುಗಡೆ ಮಾಡಿದೆ.
ಚುನಾವಣೋತ್ತರ ಸಮೀಕ್ಷೆ ನಂತರ ಬಿಜೆಪಿ ನಾಯಕ ಅಮಿತ್ ಶಾ ಹೂಡಿಕೆ ಮಾಡಿ ನಂತರ ಫಲಿತಾಂಶಕ್ಕೂ ಹಿಂದಿನ ದಿನ ತನ್ನ ಷೇರುಗಳನ್ನು ಮಾರಾಟ ಮಾಡಿರುವ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಕೇರಳ ಕಾಂಗ್ರೆಸ್ ಸವಾಲು ಹಾಕಿದೆ. ಅಲ್ಲದೇ, ಚುನಾವಣಾ ಸಂದರ್ಭದಲ್ಲಿ ಅಮಿತ್ ಶಾ ಸಲ್ಲಿಸಿದ ದಾಖಲೆಗಳನ್ನು ಕೇರಳ ಸರ್ಕಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಇದು ಅಮಿತ್ ಶಾ ಅವರು ತಮ್ಮ ಅಫಿಡೆವಿಟ್ನಲ್ಲಿ ಘೋಷಿಸಿರುವ ಷೇರುಗಳ ಪಟ್ಟಿಗಳ ಒಟ್ಟು ಪಟ್ಟಿ. ಇದನ್ನು ತಿರುಚದಿದ್ದರೆ ಅಥವಾ ಆಂತರಿಕ ಮಾರಾಟ ನಡೆಯದಿದ್ದರೆ ನಾವು ಕೆಲವು ಪ್ರಶ್ನೆಗಳೊಂದಿಗೆ ಪರಿಶೀಲನೆಗೊಳಪಡಿಸಬೇಕಾಗಿದೆ ಎಂದು ಕೇರಳ ಕಾಂಗ್ರೆಸ್ ಹೇಳಿದೆ. ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗುವುದಕ್ಕೂ ಮುನ್ನ ಅಮಿತ್ ಶಾ ಎಷ್ಟು ಷೇರುಗಳನ್ನು ಖರೀದಿಸಿದ್ದರು? ಜೂನ್ 3ರಂದು ಎಷ್ಟು ಷೇರು ಮಾರಾಟ ಮಾಡಿದ್ದರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕೇರಳ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪೋಸ್ಟ್ ನಲ್ಲಿ ಕಂಪನಿಗಳ ಹೆಸರುಗಳು ಅಮಿತ್ ಶಾ ಹಾಗೂ ಅವರ ಪತ್ನಿಯವರು ಷೇರು ಹೂಡಿಕೆ ಮಾಡಿರುವ ಕಂಪನಿಗಳ ಪಟ್ಟಿಯಾಗಿದೆ.
ಕೇರಳ ಕಾಂಗ್ರೆಸ್ ಪೋಸ್ಟ್ ಮಾಡಿರುವ ಅಮಿತ್ ಶಾ ಅವರ ಚುನಾವಣಾ ಅಫಿಡೆವಿಟ್ನ ದಾಖಲೆಗಳಲ್ಲಿ ನೂರಾರು ಕಂಪನಿಗಳಿಗೆ ಹೂಡಿಕೆ ಮಾಡಿರುವ ಮಾಹಿತಿಯಿದೆ. ಇದರಿಂದ ಬಿಜೆಪಿ ನಾಯಕರು ನೂರಾರು ಕೋಟಿಗೂ ಅಧಿಕ ಲಾಭ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.