ರಾಷ್ಟ್ರ ರಾಜಕಾರಣದ ಹುಚ್ಚು ದೊರೆ ಎಂದು ಖ್ಯಾತಿ ಪಡೆದಿರುವ ಮಾಜಿ ಸಚಿವ ಹಾಗು ಪಂಜಾಬ್ ಕಾಂಗ್ರೆಸ್ಸಿನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ವಿರುದ್ದ ಶಿಸ್ತು ಕ್ರಮ ಜರುಗಿಸಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ.
ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ಚೌಧರಿ ಈಗಾಗಲೇ ಈ ಕುರಿತು ಪಕ್ಷದ ವರಿಷ್ಠೆ ಸೋನಿಯಾಗೆ ಪತ್ರ ಬರೆದಿದ್ದು ಪಕ್ಷ ವಿರೋಧಿ ಹೇಳಿಕೆ ಹಾಗು ಚಟುವಟಿಕೆ ನಡೆಸಿದ ಆರೋಪದ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಕೋರಿದ್ದಾರೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಈ ದೂರನ್ನು ಶಿಸ್ತು ಸಮಿತಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಸುನೀಲ್ ಜಾಖರ್‌ರನ್ನು ಇದೇ ಆರೋಪದ ಮೇಲೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಈ ಹಿಂದೆ ಸಿಧು ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ ಮತ್ತು ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಿಲ್ಲ ಎಂಬುದಕ್ಕೆ ಹಾಗು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪಕ್ಷವನ್ನು ಹೀನಾಮಾನವಾಗಿ ಟೀಕಿಸಿದ್ದಾರೆ ಮತ್ತು ಕಾಂಗ್ರೆಸ್‌ನ ಬದ್ದವೈರಿ ಎಂದೇ ಕರೆಯಲ್ಪಡುವ ಪಂಜಾಬ್ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮುಖ್ಯಮಂತ್ರಿ ಭಗವಂತ್ ಮಾನ್‌ರನ್ನು ಹಾಡಿ ಹೊಗಳಿದ್ದಾರೆ.
ಮುಂದುವರೆದು, ಇತ್ತೀಚಿಗೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪ್ರಸ್ತಾವನೆಯನ್ನು ತಿರಸ್ಕರಿಸಿದ ಬೆನ್ನಲ್ಲೇ ಪ್ರಶಾಂತ್ ಜೊತೆಗಿದ್ದ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದ ಸಿಧು ಪ್ರಶಾಂತ್ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಮೊದಲ ಹೊಡೆತವು ಯುದ್ದದ ಅರ್ಧದಷ್ಟು ನೀಡಿದಂತೆ ಒಳ್ಳೆಯ ಆರಂಭವು ಯಾವತ್ತಿದ್ದರು ಉಳ್ಳೆಯ ಅಂತ್ಯವನ್ನು ಕಾಣುತ್ತದೆ ನಮ್ಮ ಸಂವಿಧಾನವನ್ನು ಗೌರವಿಸುವ ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಯಾವಾಗಲು ಉತ್ತಮ ಎಂದು ಟ್ವೀಟ್ ಮಾಡಿದ್ದರು.
ತಮ್ಮ ಹಾಗು ಪಕ್ಷದೊಳಗಿನ ಆಂತರಿಕ ಕಿತ್ತಾಟ, ಮುಖ್ಯಮಂತ್ರಿಯಾಗಿ ಚನ್ನಿ ಆಯ್ಕೆ ಸರ್ಕಾರದ ಯೋಜನೆಗಳನ್ನು ನಿರಂತರವಾಗಿ ಟೀಕಿಸಿದ ಫಲವಾಗಿ ಸಿಧು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರೆ ತಪ್ಪಾಗದು. ಯಾಕೆಂದರೆ ತಮ್ಮದೇ ಪಕ್ಷದ ಸರ್ಕಾರವನ್ನು ಭ್ರಷ್ಟ ಹಾಗೂ ಬೇರೆ ಕಪ್ಷದೊಮದಿಗೆ ಕೈ ಜೋಡಿಸಿದ್ದಾರೆ ಎಂದರೆ ಪಕ್ಷದ ಇಮೇಜ್ ಡ್ಯಾಮೇಜ್ ಆಗದೇ ಇರುತ್ತದೆಯೆ.
ಅಮರಿಂದರ್ ಸಿಂಗ್ ವಿರುದ್ದ ನಿರಂತರವಾಗಿ ಕೆಂಡಕಾರುತ್ತಲೇ ಬಂದಿದ್ದ ಸಿಧುರನ್ನು ಕಳೆದ ವರ್ಷ ಜುಲೈನಲ್ಲಿ ಪಂಜಾಬ್ ಪಿಸಿಸಿ ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು. ಆದರೆ, ಅದು ಮೂರು ತಿಂಗಳ ನಂತರ ಅಮರೀಂದರ್‌ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು.
ಮತ್ತೊಂದು ಸುದ್ದಿ ಕೇಳಿ ಬರುತ್ತಿರುವುದು ಏನೆಂದರೆ ಸಿಧು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಆಪ್‌ಗೆ ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪಾಂಜಾಬ್‌ನಲ್ಲಿ 5 ರಾಜ್ಯಸಭಾ ಸ್ಥಾನಗಳು ಖಾಲಿಯಿದ್ದು ಇದರಲ್ಲಿ ಒಂದು ಸ್ಥಾನದ ಮೇಲೆ ಸಿಧು ಕಣ್ಣಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಆಪ್ ವರಿಷ್ಠರು ಸಿಧುರನ್ನು ಬಿಲಕುಲ್ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂಬ ಒತ್ತಾಯ ಕೇಳಿ ಬಂದಿದೆ ಮುಂದಿನ ದಿನಗಳಲ್ಲಿ ಸಿಧುರ ಹುಚ್ಚಾಟ ಎಲ್ಲಿಯವರೆಗು ಬಂದು ನಿಲ್ಲುತ್ತದೆ ಬುದನ್ನು ಕಾದು ನೋಡಬೇಕಿದೆ.