ಕನ್ನಡದ ಹಿರಿಯ ನಿರ್ದೇಶಕ ದೊರೈರಾಜ್ ಅವರೊಂದಿಗೆ ಸೇರಿ ದೊರೈಭಗವಾನ್ ಎಂದು ಪ್ರಸಿದ್ದರಾಗಿದ್ದ ಅವರು ಈ ಜೋಡಿ 55 ಕನ್ನಡ ಚಿತ್ರಗಳನ್ನ ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಸಿನಿ ರಸಿಕರಿಗೆ ಸದಭಿರುಚಿಯ ಸಿನಿಮಾಗಳನ್ನು ಮಾಡಿ ಇವರು 24 ಕಾದಂಬರಿಗಳನ್ನು ಸಿನಿಮಾಗೆ ಆಳವಡಿಸಿದ್ದಾರೆ. ಕೇವಲ ಒಂದೇ ಒಂದು ಮನಸಿನಲ್ಲೆ ಹಲವಾರು ಚಿಂತನೆಗಳ ಜಿಜ್ಞಾಸೆ ಮೈದೋರುವಾಗ ಎರಡು ಮನಸುಗಳು ಒಟ್ಟಾಗಿ ಚಿಂತಿಸುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ದೊರೈ – ಭಗವಾನರು ವಿಶೇಷವಾಗಿ ನಿಲ್ಲುತ್ತಾರೆ.
ತಮ್ಮೊಳಗಿನ ಸೂಕ್ಷ್ಮ ಸಂವೇದನೆಗಳು, ತೀಕ್ಷಣ ಪ್ರಚೋದನೆಗಳನ್ನು ಚಿತ್ರವೊಂದರ ರೂಪದಲ್ಲಿ ಪರದೆಯ ಮೇಲೆ ತರುವಲ್ಲಿ ಯಶಸ್ವಿಯಾಗಿ ಇತರರಿಗೆ ಮಾದರಿಯಾಗಿದ್ದಾರೆ. ಕಾದಂಬರಿಗಳನ್ನಾಧರಿಸಿ ಸಿನಿಮಾ ಮಾಡುವಾಗ ಕಾದಂಬರಿಯ ಪಾತ್ರಗಳಿಗೆ ಮನಸುಗಳನ್ನು ಒಗ್ಗಿಸಿಕೊಂಡು ತಾವೇ ಪಾತ್ರವಾಗಿ ಅನುಭವಿಸಿ ತದ ನಂತರ ಕಲಾವಿದರಿಂದ ಕೆಲಸ ಹೊರ ತೆಗೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಎಪ್ಪತ್ತು ಎಂಬತ್ತರ ದಶಕದಲ್ಲಿ ಶ್ರೇಷ್ಠ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದವರು ತನ್ನೇದ ಆದ ಸಿನಿಮಾರಂಗದಲ್ಲಿ ಹೆಸರು ಮಾಡಿ ಎಲ್ಲಾರಿಗೂ ಮಾದರಿ ನಿರ್ದೇಶಕರಾಗಿ ಸಾಧನೆ ಮಾಡಿದವರು ದೊರೈಭಗವಾನ್ ಅವರು.
ಬಿ.ದೊರೈರಾಜ್ ಮೈಸೂರಿನವರು,ಸಂಗೀತ ಚಿತ್ರ ಕಲೆ,ಕ್ರೀಡೆಯಲ್ಲಿ ಆಸಕ್ತರಾಗಿದ್ದ ಇವರು ಚಲನಚಿತ್ರಗಳ ಬಗ್ಗೆ ಬೇಗನೆ ಆಸಕ್ತಿ ತಾಳಿದರು,ಮೈಸೂರಿನಲ್ಲಿ ನವಜ್ಯೋತಿ ಸ್ಟುಡಿಯೋ ಆರಂಭವಾದಾಗ ಅಲ್ಲಿ ಸಹಾಯಕರಾಗಿ ಸೇರಿ ಮುಂದೆ ಮುಂಬೈನಲ್ಲಿ ಏನ್.ಜಿ.ರಾವ್ ಬಳಿ ಕ್ಯಾಮರಾ ಸಹಾಯಕರಾದರು.ಅನೇಕ ಮಲಯಾಳಿ ಚಿತ್ರಗಳಿಗೆ ಸ್ವತಂತ್ರವಾಗಿ ಛಾಯಾಗ್ರಹಣ ನೀಡಿದ ದೊರೈರಾಜ್ ಅವರು ರಾಜ್ ಅಭಿನಯದ “ಸೋದರಿ”ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಛಾಯಾಗ್ರಾಹಕರಾಗಿ ಬಂದರು.ಅನಂತರ ಅನೇಕ ಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ದುಡಿದ ಅವರಿಗೆ “ಜಗಜ್ಯೋತಿ ಬಸವೇಶ್ವರ’ಛತ್ರದ ಚಿತ್ರೀಕರಣದ ಸಂದರ್ಬದಲ್ಲಿ ಎಸ್.ಕೆ.ಭಗವಾನ್ ರ ಪರಿಚಯವಾಗಿ ಉಂಡೆ ಈ ಜೋಡಿ ಕನ್ನಡ ಚಿತ್ರ ರಂಗ ಮರೆಯಲಾಗದ ಕೊಡುಗೆಯನ್ನೇ ನೀಡಿತು.

ಮೈಸೂರಿನವರಾದ ಎಸ್.ಕೆ. ಭಗವಾನ್ ಅವರಿಗೆ ಶಾಲಾ ದಿನಗಳಲ್ಲೇ ರಂಗಭೂಮಿಯತ್ತ ಇದ್ದ ಆಸಕ್ತಿ ಕ್ರಮೇಣ ಚಿತ್ರರಂಗದತ್ತ ಹೊರಳಿತು. ಸಿನಿಮಾ ರೆಪ್ರೆಸೆಂಟೆಟಿವ್ ಆಗಿ ರಾಜ್ಯವನ್ನು ಸುತ್ತಿದ ಎಸ್.ಕೆ. ಭಗವಾನ್ ಭಾಗ್ಯೋದಯ ಚಿತ್ರದಲ್ಲಿ (೧೯೫೬) ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳಿಗೆ ಸಹಾಯಕರಾಗಿದ್ದು ಸಂಧ್ಯಾರಾಗ ಹಾಗೂ ರಾಜದುರ್ಗದ ರಹಸ್ಯ ಚಿತ್ರಗಳನ್ನು ಎ.ಸಿ.ನರಸಿಂಹಮೂರ್ತಿ ಅವರೊಂದಿಗೆ ನಿರ್ದೇಶಿಸಿದರು. ಟಿ.ವಿ.ಸಿಂಗ್ ಠಾಕೂರ್, ಅವರಲ್ಲಿ ಪಳಗಿದ ಭಗವಾನ್, ದೊರೈ ಅವರೊಂದಿಗೆ ನಿರ್ದೇಶಿಸಿದ ಮೊದಲ ಚಿತ್ರ ‘ಜೇಡರ ಬಲೆ’ ಅವರಿಗೆ ಹೆಸರು ತಂದುಕೊಟ್ಟಿತು. ದೊರೈ-ಭಗವಾನ್ ಜೋಡಿಯದು ಕಸ್ತೂರಿ ನಿವಾಸ, ಹೊಸಬೆಳಕು, ಜೀವನ ಚೈತ್ರ ಮೊದಲಾದ ೨೩ಕ್ಕೂ ಹೆಚ್ಚು ಚಿತ್ರಗಳನ್ನು ತೆರೆಗೆ ತಂದ ಹೆಗ್ಗಳಿಕೆ.ಸೌತ್ ಇಂಡಿಯನ್ ಫಿಲಂ ಛೇಂಬರ್ ಸೇರಿದಂತೆ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಭಗವಾನ್ ಪ್ರಸ್ತುತ ಆದರ್ಶ ಫಿಲಂ ಇನ್ಸ್‌ಟಿಟ್ಯೂಟ್‌ನ ಪ್ರಿನ್ಸಿಪಾಲರುರಾಗಿ ಕೆಲಸ ಮಾಡಿದ್ರು .
ಎಸ್.ಕೆ.ಭಗವಾನ್ ಅವರು 1933 ಜುಲೈ 3ರಂದು ತಮಿಳು ಬ್ರಾಹ್ಮಣ ಅಯ್ಯರ್ ಕುಟುಂಬದಲ್ಲಿ ಜನಿಸಿ ಬೆಂಗಳೂರಿನಲ್ಲಿ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಯುವಕರಾಗಿದ್ದಾಗ ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ನಾಟಕಗಳನ್ನು ಮಾಡುತ್ತಿದ್ದರು. 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕರಾಗಿ ಸಿನಿಮಾ ಜೀವನ ಆರಂಭಿಸಿದರು.
1966ರಲ್ಲಿ ಎಂ.ಸಿ.ನರಸಿಂಹಮೂರ್ತಿ ಅವರ ಜೊತೆಗೂಡಿ ಸಂಧ್ಯಾರಾಗ ಸಿನಿಮಾ ನಿರ್ದೇಶಿಸಿದರು. ಬಳಿಕ ದೊರೈ-ಭಗವಾನ್ ಜೊತೆಗೂಡಿ ರಾಜಕುಮಾರ್ ನಾಯಕ ನಟರಾಗಿರುವ ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿ ಕನ್ಯೆ, ಚಂದನದ ಗೊಂಬೆ, ವಸಂತಗೀತ, ಆಪರೇಷನ್ ಡೈಮಂಡ್ ರಾಕೆಟ್, ಹೊಸಬೆಳಕು, ಯಾರಿವನು ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿ ಹೆಸರು ಗಳಿಸಿದ್ದರು….
ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ.
ಸಾಕಷ್ಟು ಅಭಿಮಾನಿಗಳು ಹೊಂದಿರುವ ಅವರು ಇಂದು ಕನ್ನಡ ನಟ ನಟಿಯರು ಅಂತಿಮ ದರ್ಶನ ಪಡೆದು ಗಣ್ಯರು ಸಂತಾಪ ಸೂಚಿಸಿದ್ದಾರೆ.