
ತುಮಕೂರಲ್ಲಿ (Tumkur) ದಸರಾ (Dasara) ಕುರಿತಂತೆ ಮಾತನಾಡುವ ವೇಳೆ ಗೃಹ ಸಚಿವ ಪರಮೇಶ್ವರ್ (Parameshwar), ಇಲ್ಲದ ತಪ್ಪುಗಳನ್ನು ಹುಡುಕದಂತೆ ಪತ್ರಕರ್ತರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ತುಮಕೂರು ದಸರಾ ಕಾರ್ಯಕ್ರಮದಲ್ಲಿ ತಪ್ಪು ಹುಡುಕದಂತೆ ಗೃಹ ಸಚಿವರು ವಾರ್ನಿಂಗ್ ಕೊಟ್ಟಿದ್ದಾರೆ.

ಹೌದು ಸ್ಪಷ್ಟ ಪದಗಳಲ್ಲಿ ಗೃಹಸಚಿವ ಪರಮೇಶ್ವರ್ ಹೇಳಿದ್ದು ‘ಇಟ್ಸ್ ಎ ವಾರ್ನಿಂಗ್.., ವಾರ್ನ್ ಮಾಡಿದ್ದೇನೆ’ ಎಂದಿದ್ದಾರೆ. ನೀವು ತಪ್ಪು ಹುಡುಕಬೇಡಿ. ನಮಗೆ ಸಹಕಾರ ಮಾಡಿ, ತಪ್ಪು ಆಗೊದಕ್ಕಿಂತ ಮುಂಚಿತವಾಗಿಯೇ ಹೇಳಿ ಬಿಡಿ.ಇಲ್ಲೇನೋ ಸರಿ ಇಲ್ಲ ಸರಿ ಮಾಡಿಕೊಳ್ಳಿ ಅಂತ ಹೇಳಿ ಬಿಡಿ.ಇದು ಜಿಲ್ಲೆಯ ಮರ್ಯಾದೆ ಪ್ರಶ್ನೆ. ಹೇಳೋದನ್ನ ಕೇಳಿಕೊಳ್ಳಿ.ಊರು ಮರ್ಯಾದೆ ಯಾಕೆ ಕಳೀತೀರಾ ಎಂದು ಮಾಧ್ಯಮದ ವಿರುದ್ಧ ಗರಂ ಆಗಿದ್ದಾರೆ.

ಹೀಗಾಗಿ ಈ ವಿಚಾರವನ್ನು ನಾನು ನಿಮಗೆ ಸೂಕ್ಷ್ಮವಾಗಿ ಹೇಳಿದ್ದೇನೆ. ಅದಕ್ಕೆ ವಾರ್ನಿಂಗ್ ಅಂತ ಹೇಳಿದ್ದೇನೆ.. ಯಾಕೆಂದ್ರೆ ನೀವು ಒಂದು ಸ್ಟೆಪ್ ಮುಂದಕ್ಕೆ ಹೋಗ್ಬಿಡ್ತಿರಾ ಎಂದು ತುಮಕೂರು ದಸರಾ ನ್ಯೂನ್ಯತೆಗಳ ಬಗ್ಗೆ ಮಾತನಾಡಿದ್ದ ಮಾಧ್ಯಮಗಳಿಗೆ ಸಚಿವ ಪರಮೇಶ್ವರ್ ಈ ರೀತಿ ವಾರ್ನಿಂಗ್ ಕೊಟ್ಟಿದ್ದಾರೆ.