ದಿನಕರ್ ಮತ್ತು ದರ್ಶನ್ ಅವರ ಮುಂದಿನ ಸಿನಿಮಾ ಬಗ್ಗೆ ತೀವ್ರ ನಿರೀಕ್ಷೆ ಇದೆ. ದರ್ಶನ್ ಅವರ ಬೆನ್ನು ನೋವಿನಿಂದ ಚಿತ್ರೀಕರಣಕ್ಕೆ ತಡೆ ಉಂಟಾಗಿದೆ. ಈ ಮಧ್ಯೆ ದಿನಕರ್ ಅವರು ದರ್ಶನ್ ಜೊತೆ ಸಿನಿಮಾ ಮಾಡುವುದು ಖಚಿತ ಎಂದು ತಿಳಿಸಿದ್ದಾರೆ. ಅವರ ನಡುವಿನ ಜಗಳದ ವದಂತಿಗಳಿಗೆ ಸ್ಪಷ್ಟನೆ ನೀಡಿದ ದಿನಕರ್.
‘ನವಗ್ರಹ’ ಸಿನಿಮಾ ನಿರ್ದೇಶನ ಮಾಡಿ ಯಶಸ್ಸು ಕಂಡರು. ನವಗ್ರಹ ಚಿತ್ರದಲ್ಲಿ ದರ್ಶನ್ ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಆ ಬಳಿಕ ದರ್ಶನ್ ನಟನೆಯ ‘ಸಾರಥಿ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಈ ಹಿಟ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗೋಕೆ ರೆಡಿ ಆಗಿದೆ.
‘ರಾಯಲ್’ ಸಿನಿಮಾ ಹೆಸರಿನ ಚಿತ್ರವನ್ನು ದಿನಕರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿ ನಡೆದಿದೆ. ದಿನಕರ್ ಹಾಗೂ ದರ್ಶನ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಮಾತಿದೆ. ಈ ಬಗ್ಗೆ ಮಾತನಾಡಿದ ಅವರು, ‘ಅಣ್ಣ ತಮ್ಮ ಬೇರೆ ಆಗಿದ್ದೀವಿ ಎಂದು ಯಾರು ಹೇಳಿದ್ದಾರೆ? ಗಂಡ ಹೆಂಡತಿ ಮಧ್ಯೆ ಹೇಗೆ ಜಗಳವೋ ಹಾಗೆ ಅಣ್ಣ ತಮ್ಮ ಎಂದಮೇಲೆ ಜಗಳ ಇದ್ದೇ ಇರುತ್ತದೆ’ ಎಂದಿದ್ದಾರೆ ಅವರು.
ಹಾಗಂತ ಇವರು ಯಾವಾಗಲೂ ಜಗಳ ಆಡುತ್ತಾನೇ ಇರೋದಿಲ್ಲ. ‘ನಾವು ಮಾತನಾಡುತ್ತಲೇ ಇರುತ್ತೇವೆ. ತಿಂಗಳಿಗೊಮ್ಮೆ ಆಗೊಮ್ಮೆ ಈಗೊಮ್ಮೆ ನಮ್ಮ ಮಧ್ಯೆ ಮಾತುಕತೆ ನಡೆಯುತ್ತಾ ಇರುತ್ತದೆ. ಈ ಸಿನಿಮಾಗೆ ದರ್ಶನ್ ಸಾಥ್ ಕೊಡಬಹುದು. ಸದ್ಯ ಅವರಿಗೆ ಬೆನ್ನು ನೋವಿದೆ. ಟ್ರೀಟ್ಮೆಂಟ್ಗಾಗಿ ಮೈಸೂರಿಗೆ ಹೋಗಿದ್ದೇವೆ. ಅಜಯ್ ಹೆಗಡೆ ಎರಡು ಬಾರಿ ಟ್ರೀಟ್ಮೆಂಟ್ ಮಾಡಿದ್ದಾರೆ. ಈ ಕಾರಣಕ್ಕೆ ಅಲ್ಲಿಯೇ ಟ್ರೀಟ್ಮೆಂಟ್ ನಡೆಯುತ್ತಿದೆ’ ಎಂದು ದಿನಕರ್ ಮಾಹಿತಿ ನೀಡಿದ್ದಾರೆ