ಬೆಂಗಳೂರಲ್ಲಿ (Bangalore) ನಿನ್ನೆ ನಡೆದ ಗಾಂಧಿ ಜಯಂತಿ (Gandhi Jayanthi) ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh gunduRao) ವೀರ ಸಾವರ್ಕರ್ (Veer savarkar ) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವೀರ ಸಾವರ್ಕರ್ ಓರ್ವ ಬ್ರಾಹ್ಮಣರಾಗಿದ್ರೂ ಮಾಂಸ ತಿನ್ನುತ್ತಿದ್ದರು, ದನದ ಮಾಂಸ ತಿನ್ನುತ್ತಿದ್ದರು, ಅವರು ಗೋಮಾಂಸದ ವಿರುದ್ಧ ಇರಲಿಲ್ಲ, ಅವರು ಮಾರ್ಡನಿಸ್ಟ್ (Modernist) ಆಗಿದ್ರು ಎಂಬ ಹೇಳಿಕೆ ನೀಡಿದ್ದರು.

ನಿನ್ನೆಯ ಕಾರ್ಯಕ್ರಮಲ್ಲಿ ಗಾಂಧಿ ಹಾಗೂ ಸಾವರ್ಕರ್ ಬಗ್ಗೆ ಗುಂಡೂರಾವ್ ಹೋಲಿಕೆ ಮಾಡಿ ಮಾತನಾಡಿದ್ರು. ವೀರ ಸವಾರ್ಕರ್ ಮೂಲಭೂತವಾದಿಯಾಗಿದ್ದರೂ ಕೂಡ ಮಾರ್ಡನಿಸ್ಟ್ ಆಗಿದ್ದು ಎಂದಿದ್ದಾರೆ. ಇದು ವಿವಾದದ ಕಿಡಿ ಹೊತ್ತಿಸಿದೆ.
ಇದೀಗ ಅವರು ಕೊಟ್ಟ ಹೇಳಿಕೆ ವಿವಾದಕ್ಕೊಳಗಾಗಿದೆ. ಇದರ ಬೆನ್ನಲ್ಲೇ ಇಂದು ಪ್ರತಿಕ್ರಿಯಿಸಿರೋ ಅವರು, ನಾನು ಆ ರೀತಿ ಹೇಳಲಿಲ್ಲ. ನಾನು ಸಾವರ್ಕರ್ ಬಗ್ಗೆ ಹೇಳಿದ ಅರ್ಥ ಬೇರೆ ಎಂಬ ಸಮಜಾಯಿಷಿ ನೀಡಿದ್ದಾರೆ.










