ಕಾಂಗ್ರೆಸ್ ನವರು ಚಳುವಳಿ ಮಾಡುವ ಮಟ್ಟಕ್ಕೆ ಬೆಲೆ ಏರಿಕೆಯಾಗಿಲ್ಲ ಎಂಬ ಸಿ.ಟಿ ರವಿ ಹೇಳಿಕೆಗೆ, ಗಾಂಧಿ ನಗರದ ಶಾಸಕ ದಿನೇಶ್ ಗುಂಡೂರಾವ್, ಚಳವಳಿ ಮಾಡುವಷ್ಟು ಬೆಲೆಯೇರಿಕೆ ಆಗಿಲ್ಲ ಎಂದಿರುವ ಸಿ.ಟಿ.ರವಿ ಈ ರಾಜ್ಯದ ಪ್ರಥಮ ದರ್ಜೆಯ ಅವಿವೇಕಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಕಿಡಿಕಾರಾದ್ದಾರೆ.
ರಾಜ್ಯದಲ್ಲಿ ಅಲ್ಲ ಇಡೀ ದೇಶದಲ್ಲೇ ದಿನನಿತ್ಯ ಬಳಸುವ ವಸ್ತು, ತೈಲಬೆಲೆ ಇನ್ನಿತರೆ ವಸ್ತುಗಳ ಬೆಲೆ ಏರಿಕೆಯಾಗುತ್ತದಲೇ ಇದೆ. ಇದನ್ನು ದಿನನಿತ್ಯ ರಾಜ್ಯದ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸದ್ಯ ಸಿಟಿ ರವಿ, ಕಾಂಗ್ರೇಸ್ ನವರು ಚಳುವಳಿ ಮಾಡುವ ಮಟ್ಟಕ್ಕೆ ಬೆಲೆ ಏರಿಕೆಯಾಗಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಕುರಿತು ಗಾಂಧಿ ನಗರದ ಶಾಸಕ ದಿನೇಶ್ ಗುಂಡೂರಾವ್ ಪೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಚಳವಳಿ ಮಾಡುವಷ್ಟು ಬೆಲೆಯೇರಿಕೆ ಆಗಿಲ್ಲ ಎಂದಿರುವ ಸಿ.ಟಿ.ರವಿ ಈ ರಾಜ್ಯದ ಪ್ರಥಮ ದರ್ಜೆಯ ಅವಿವೇಕಿ ಎಂಬುದನ್ನು ಸಾಬೀತುಪಡಿಸಿದ್ದಾರೆ.ಜನರ ಸಮಸ್ಯೆಗಳ ಅರಿವೇ ಇಲ್ಲದೆ ಮಾತನಾಡುವ ಇವರು ಜನನಾಯಕರೇ? ಸಿ.ಟಿ.ರವಿಯಂತಹ ಕೋಟಿ ಕುಳಗಳಿಗೆ ಬೆಲೆಯೇರಿಕೆ ಸಮಸ್ಯೆಯಿಲ್ಲದಿರಬಹುದು. ಆದರೆ ಚಳವಳಿ ಮಾಡದಿರಲು ಎಲ್ಲರೂ ಸಿ.ಟಿ.ರವಿಯಂತೆ ಕೋಟಿ ಕುಳಗಳೆ.? ಎಂದು ಪ್ರಶ್ನಿಸಿದ್ದಾರೆ.

ಮುಂದುವರೆದು, ಬೆಲೆಯೇರಿಕೆಯನ್ನು ನಾಚಿಕೆ ಬಿಟ್ಟು ಸಮರ್ಥಿಸಿಕೊಳ್ಳುತ್ತಿರುವ BJP ನಾಯಕರು ಸರ್ಟಿಫೈಡ್ ಕಿರಾತಕರಿದ್ದಂತೆ. ಈ ಸರ್ಟಿಫೈಡ್ ಕಿರಾತಕರು ಜನಸಾಮಾನ್ಯರ ಪಾಲಿಗೆ ನಿಜವಾದ ಖಳನಾಯಕರು. ಹೊಟ್ಟೆ ಬಟ್ಟೆ ಕಟ್ಟಿ ಸಂಸಾರ ನಡೆಸುವ ಜನಸಾಮಾನ್ಯನಿಗೆ ಬೆಲೆಯೇರಿಕೆಯ ತಾಪವೇನು.? ಎಂದು ಗೊತ್ತಿದೆ. ಆದರೆ ಹೃದಯವೇ ಇಲ್ಲದ ಬಿಜೆಪಿಯ ಕೆಲ ಕಿರಾತಕರಿಗೆ ಜನರ ಗೋಳು ಹೇಗೆ ತಿಳಿಯಲು ಸಾಧ್ಯ.? ಎಂದಿದ್ದಾರೆ
ಕಾಂಗ್ರೆಸ್ ನವರು ಚಳುವಳಿ ಮಾಡುವ ಮಟ್ಟಕ್ಕೆ ಬೆಲೆ ಏರಿಕೆಯಾಗಿಲ್ಲ. ಕಾಂಗ್ರೆಸ್ ನವರು ಅಧಿಕಾರ ಬಿಟ್ಟು ಹೋಗುವಾಗ ಗ್ಯಾಸ್ ಬೆಲೆ 981 ರೂಪಾಯಿ ಇತ್ತು. ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದರು.










