ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಈ ಕೇಸ್ ಸಿಬಿಐ ಗೆ ನೀಡಿದ್ದ ಅನುಮತಿ ಹಿಂಪಡೆದ ಆದೇಶ ಹಾಗೂ ಲೋಕಾಯುಕ್ತ ತನಿಖೆಗೆ ಸರ್ಕಾರ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಅಂತಿಮ ವಿಚಾರಣೆ ಇಂದು ನಡೆದು ತೀರ್ಪು ಬರುವ ಸಾಧ್ಯತೆಯಿದೆ.
ಇದೇ ವಿಚಾರವಾಗಿ ಮೊನ್ನೆ ಸರ್ಕಾರ & ಡಿಕೆ ಪರ ವಕೀಲರು ಈಗಾಗಲೇ ವಾದ ಮಾಡಿದ್ದರು. ಇಬ್ಬರು ಸಿನಿಯರ್ ಕೌನ್ಸಿಲ್ ಗಳು ಕಪಿಲ್ ಸಿಬಲ್ & ಮನು ಸಿಂಘ್ವಿ ನ್ಯಾಯದೀಶರ ಮುಂದೆ ವಾದಿಸಿದ್ದರು.ಅದಕ್ಕೆ ಇಂದು ಸಿಬಿಐ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಮಂಡನೆ ಮಾಡಿದ್ದಾರೆ.
ಎರಡೂ ಅರ್ಜಿಗಳ ವಾದ ಪ್ರತಿವಾದ ಮುಕ್ತಾಯಗೊಂಡಿದ್ದು, ಹೈಕೋರ್ಟ್ ವಿಭಾಗೀಯ ಪೀಠಆದೇಶ ಕಾಯ್ದಿರಿಸಿದೆ. ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ಆದೇಶ ಪ್ರಶ್ನಿಸಿದ್ದ ಯತ್ನಾಳ್ ಅರ್ಜಿ ಸಲ್ಲಿಸಿದ್ದರು, ಹೀಗಾಗಿ ಇಂದು ಹೊರಬೀಳಿಲಿರುವ ತೀರ್ಪು ಕುತೂಹಲಕ್ಕೆ ಕಾರಣವಾಗಿದೆ.