• Home
  • About Us
  • ಕರ್ನಾಟಕ
Wednesday, September 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಉಪಗ್ರಹ ಹಾಗೂ ಎಐ ತಂತ್ರಜ್ಞಾನದ ಡಿಜಿಟಲ್‌ ವಾಟರ್‌ ಸ್ಟಾಕ್‌ ಅಳವಡಿಕೆ: ಸಚಿವ ಎನ್‌ ಎಸ್‌ ಭೋಸರಾಜು

ಪ್ರತಿಧ್ವನಿ by ಪ್ರತಿಧ್ವನಿ
August 28, 2025
in Top Story, ಕರ್ನಾಟಕ, ರಾಜಕೀಯ, ವಾಣಿಜ್ಯ, ವಿದೇಶ
0
ಉಪಗ್ರಹ ಹಾಗೂ ಎಐ ತಂತ್ರಜ್ಞಾನದ ಡಿಜಿಟಲ್‌ ವಾಟರ್‌ ಸ್ಟಾಕ್‌ ಅಳವಡಿಕೆ: ಸಚಿವ ಎನ್‌ ಎಸ್‌ ಭೋಸರಾಜು
Share on WhatsAppShare on FacebookShare on Telegram

ADVERTISEMENT

ಬೆಂಗಳೂರು ಆಗಸ್ಟ್‌ 28: ರಾಜ್ಯದಲ್ಲಿರುವ ಜಲಮೂಲಗಳ ಸಮಗ್ರ ನಿರ್ವಹಣೆ ಹಾಗೂ ನೀರಿನ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವ ನಿಟ್ಟಿನಲ್ಲಿ ಉಪಗ್ರಹ ದತ್ತಾಂಶ ಹಾಗೂ ಎಐ ತಂತ್ರಜ್ಞಾನ ಆಧಾರಿತ ಡಿಜಿಟಲ್‌ ವಾಟರ್‌ ಸ್ಟಾಕ್‌ ಯೋಜನೆ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಣೆಯನ್ನು ನೀಡಿರುವ ಅವರು, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಂತರ್ಜಲದ ಮಟ್ಟ ಕುಸಿತಗೊಂಡಿರುವ ಹಾಗೆಯೇ, ನೀರಿನ ಲಭ್ಯತೆ ಅಸಮರ್ಪಕವಾಗಿರುವ ಸಂಧರ್ಭದಲ್ಲಿ ದೇಶದಲ್ಲೆ ಮೊದಲ ಬಾರಿಗೆ, ಕರ್ನಾಟಕ ಸರ್ಕಾರ ‘ಡಿಜಿಟಲ್ ವಾಟರ್ ಸ್ಟಾಕ್’ (DWS) ಎಂಬ ನೂತನ ತಂತ್ರಜ್ಞಾನ ಆಧಾರಿತ ನೀರಿನ ನಿರ್ವಹಣಾ ವೇದಿಕೆಯನ್ನು ಅನುಷ್ಠಾನಗೊಳಿಸುತ್ತಿದೆ.

ಕರ್ನಾಟಕ ಟ್ಯಾಂಕ್ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ (KTCDA) ಈ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ರಾಜ್ಯದ ಕೆರೆಗಳು ಮತ್ತು ಇನ್ನಿತರ ಜಲಮೂಲಗಳನ್ನು ಡಿಜಿಟಲ್ ವಾಟರ್ ಸ್ಟಾಕ್ (DWS) ಚಟುವಟಿಕೆ ಅಡಿಯಲ್ಲಿ ಸಮರ್ಪಕವಾಗಿ ಸರ್ವೇ ಸೇರಿದಂತೆ ಮೇಲ್ವಿಚಾರಣೆ ಹಾಗೂ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದನ್ನು ಖಚಿತಪಡಿಸಲಿದೆ.

ಉಪಗ್ರಹ ಸೆನ್ಸಾರ್‌ ಹಾಗೂ ಇಮೇಜಿಂಗ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳ ಮೂಲಕ ರಾಜ್ಯದ ಸರೋವರಗಳು, ಕೆರೆಗಳು ಮತ್ತು ಭೂಗರ್ಭದ ಜಲಧಾರೆಗಳ (aquifer‌) ಗಳ ಸಮಗ್ರ ನಿರ್ವಹಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇದಾಗಿದೆ. ವಿವಿಧ ಇಲಾಖೆಗಳಲ್ಲಿ ಹಂಚಿಹೋಗಿರುವ ಜಲಮೂಲಗಳ ದತ್ತಾಂಶಗಳನ್ನು ಒಗ್ಗೂಡಿಸುವ ಮೂಲಕ ಒಂದೇ ವೇದಿಕೆಯಡಿಯಲ್ಲಿ ನಿರ್ವಹಿಸುವುದು ಇದರ ಮುಖ್ಯ ಉದ್ದೇಶವಾಗಿವೆ.

DK Shivakumar:  ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ನಾನು ಮಾತನಾಡದಿರುವುದೇ ಉತ್ತಮ:ಡಿಕೆಶಿ #blsanthosh

ರಾಜ್ಯದಲ್ಲಿ 41,000ಕ್ಕೂ ಹೆಚ್ಚು ನೀರಿನ ಮೂಲಗಳಿದ್ದು, 34,000ಕ್ಕೂ ಹೆಚ್ಚು ಕೆರೆಗಳನ್ನು ಈಗಾಗಲೇ ಸಮೀಕ್ಷೆ ಮಾಡಲಾಗಿದೆ ಮತ್ತು 31,000ಕ್ಕೂ ಹೆಚ್ಚು ಜಿಯೋಟ್ಯಾಗ್‌ ಮಾಡಲಾಗಿದೆ. 42,678 ಎಕರೆ ಅಕ್ರಮ ಅತಿಕ್ರಮಣ ಗುರುತಿಸಲಾಗಿದ್ದು, 29,000 ಎಕರೆ ಪ್ರದೇಶದಲ್ಲಿ ಅತಿಕ್ರಮಣ ತೆರವುಗೊಳಿಸಲಾಗಿದೆ. ಮೊದಲ ಹಂತದಲ್ಲಿ ಅಂತರ್ಜಲದ ನೀರಿನ ಅತಿಯಾದ ಬಳಕೆ ಮಾಡುತ್ತಿರುವ 41 ತಾಲ್ಲೂಕುಗಳಲ್ಲಿ ಡಿಜಿಟಲ್‌ ವಾಟರ್‌ ಸ್ಟಾಕ್‌ ಯೋಜನೆಯನ್ನು ಜಾರಿಗೆ ತರಲಾಗುವುದು. ರಾಜ್ಯದ ಜಲಮೂಲಗಳನ್ನು ನೈಸರ್ಗಿಕವಾದ ಉಳಿತಾಯ ಖಾತೆಗಳಂತೆ ಪರಿವರ್ತಿಸಲು ಹಾಗೆಯೇ, ಲಭ್ಯವಿರುವಂತಹ ಜಲಮೂಲಗಳ ಸಮರ್ಪಕ ನಿರ್ವಹಣೆ ಮಾಡುವುದಕ್ಕೆ ನಮ್ಮ ಸರಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಈ ಯೋಜನೆ ಬಹಳಷ್ಟು ಸಹಕಾರಿಯಾಗಿರಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ.

ಏನಿದು ಡಿಜಿಟಲ್‌ ವಾಟರ್‌ ಸ್ಟಾಕ್:‌
ಉಪಗ್ರಹಗಳ ಸೆನ್ಸರ್‌ಗಳಿಂದ ಪಡೆದ ದತ್ತಾಂಶಗಳು, ಎಐ ಹಾಗೂ ಮಷಿನ್‌ ಲರ್ನಿಂಗ್‌ನಿಂದ ಇಮೇಜಿಂಗ್‌ನ ವಿಶ್ಲೇಷಣೆ ಮಾಡುವ ತಂತ್ರಜ್ಞಾನ ಇದಾಗಿದೆ. ಇದರಿಂದ ಜಲಮೂಲಗಳ ಐದು ವರ್ಷಗಳ ಹಿಂದಿನ ದತ್ತಾಂಶವನ್ನು ಪಡೆದುಕೊಂಡು, ಪ್ರಸ್ತುತ ಇರುವ ಸ್ಥಿತಿಗತಿಗಳ ಹೋಲಿಕೆ ಮಾಡಬಹುದಾಗಿದೆ. ಅಲ್ಲದೇ, ಯಾವುದೇ ಜಲಮೂಲದ ಸ್ವರೂಪ, ನೀರಿನ ಶೇಖರಣೆಯಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ಗುರುತಿಸುವ ಮೂಲಕ ಅದನ್ನು ಸರಿಪಡಿಸುವ ಕಾರ್ಯ ಮಾಡಲು ಇದು ಅನುವು ಮಾಡಿಕೊಡಲಿದೆ.

ಮಾಸ್ಟರ್ ವಾಟರ್‌ ಅಟ್ಲಸ್ ಮತ್ತು ಡ್ಯಾಶ್‌ಬೋರ್ಡ್:
ಡಿಜಿಟಲ್‌ ವಾಟರ್‌ ಸ್ಟಾಕ್‌ ಮೂಲಕ ರಾಜ್ಯಮಟ್ಟದ ನೀರಿನ ನಿರ್ವಹಣೆಯ ಡ್ಯಾಶ್‌ಬೋರ್ಡ್ ಮತ್ತು “ಮಾಸ್ಟರ್ ವಾಟರ್ ಅಟ್ಲಸ್” ರಚಿಸಲಾಗುವುದು. ಇದು ಅಂತರ್ಜಲದ ಮಟ್ಟ, ಮಳೆಯ ಪ್ರಮಾಣ, ಮೇಲ್ಮೈ ಹರಿವು, ಬಳಕೆ ಮತ್ತು ನೀರಿನ ಗುಣಮಟ್ಟದ ಡೇಟಾವನ್ನು ಸಂಗ್ರಹಿಸಿ, ನಿಖರ ದತ್ತಾಂಶಗಳ ಮೂಲಕ ನೀರಿನ ಮೂಲಗಳ ಸ್ಥಿತಿಯನ್ನು ನಿರ್ವಹಿಸಲು ಅನುವು ಮಾಡಿಕೊಡಲಿದೆ.

ಈ ಯೋಜನೆಯ ಮೂಲಕ ನಗರೀಕರಣ ಹಾಗೂ ಕೃಷಿ ಒತ್ತಡದಿಂದ ಉಂಟಾಗುವ ನೀರಿನ ಮೂಲಕ ಕುಸಿತ, ಮಾಲಿನ್ಯ ಮತ್ತು ಅತಿಕ್ರಮಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಲು ಹಾಗೂ ತಕ್ಷಣದ ಕ್ರಮ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಸಚಿವರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಡಿ.ಕೆ. ಶಿವಕುಮಾರ್ ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಲಿ- ವಿಜಯೇಂದ್ರ ಆಗ್ರಹ

Next Post

ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ

Related Posts

Top Story

Santhosh Lad: ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ..!!

by ಪ್ರತಿಧ್ವನಿ
September 2, 2025
0

ಧಾರವಾಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೌಶಲ್ಯ ತರಬೇತಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಸಚಿವರು ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ...

Read moreDetails

ಬೆಂಗಳೂರಿನಲ್ಲಿ ಮಿರಾಯ್ ಸಿನಿಮಾ ಪ್ರಚಾರ ಮಾಡಿದ ತೇಜ ಸಜ್ಜಾ..!!

September 2, 2025

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ -‌ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ

September 2, 2025

ಬಿಡುಗಡೆಗೆ ಸಿದ್ಧವಾಗುತ್ತಿದೆ ಡಾರ್ಲಿಂಗ್ ಕೃಷ್ಣ ಅಭಿನಯದ “ಬ್ರ್ಯಾಟ್” ಚಿತ್ರ..!!

September 2, 2025

ಈ ವಾರ ತೆರೆಗೆ “ಜಾಲಿಡೇಸ್” ಖ್ಯಾತಿಯ ನಿರಂಜನ್ ಶೆಟ್ಟಿ ಅಭಿನಯದ “31 ಡೇಸ್”

September 2, 2025
Next Post
ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ

ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ

Recent News

Top Story

Santhosh Lad: ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ..!!

by ಪ್ರತಿಧ್ವನಿ
September 2, 2025
Top Story

ಬೆಂಗಳೂರಿನಲ್ಲಿ ಮಿರಾಯ್ ಸಿನಿಮಾ ಪ್ರಚಾರ ಮಾಡಿದ ತೇಜ ಸಜ್ಜಾ..!!

by ಪ್ರತಿಧ್ವನಿ
September 2, 2025
Top Story

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ -‌ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ

by ಪ್ರತಿಧ್ವನಿ
September 2, 2025
Top Story

ಬಿಡುಗಡೆಗೆ ಸಿದ್ಧವಾಗುತ್ತಿದೆ ಡಾರ್ಲಿಂಗ್ ಕೃಷ್ಣ ಅಭಿನಯದ “ಬ್ರ್ಯಾಟ್” ಚಿತ್ರ..!!

by ಪ್ರತಿಧ್ವನಿ
September 2, 2025
Top Story

ಈ ವಾರ ತೆರೆಗೆ “ಜಾಲಿಡೇಸ್” ಖ್ಯಾತಿಯ ನಿರಂಜನ್ ಶೆಟ್ಟಿ ಅಭಿನಯದ “31 ಡೇಸ್”

by ಪ್ರತಿಧ್ವನಿ
September 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Santhosh Lad: ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ..!!

September 2, 2025

ಬೆಂಗಳೂರಿನಲ್ಲಿ ಮಿರಾಯ್ ಸಿನಿಮಾ ಪ್ರಚಾರ ಮಾಡಿದ ತೇಜ ಸಜ್ಜಾ..!!

September 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada