ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ (Maharashtra cm) ಆಗಿ ದೇವೇಂದ್ರ ಫಡ್ನ ವೀಸ್ (Devendra Fadnavis ) ಪ್ರಮಾಣವಚನ ಸ್ವೀಕರಿಸಿದ್ದಾರೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 230 ಕ್ಕೂ ಅಧಿಕ ಸ್ಥಾನಗಳಲ್ಲಿ ಗೆತ್ತ ನಂತರವೂ ಮಹಾ ಯುತಿಯಲ್ಲಿ ಸಿಎಂ ಗೊಂದಲ ಏರ್ಪಟ್ಟಿತ್ತು ಇಂದು ಆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.
ಇಂದು ಅದ್ದೂರಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath singh) ಉಳಿದ ಕೇಂದ್ರ ಬಿಜೆಪಿ ನಾಯಕರ ಸಮ್ಮುಖದಲ್ಲಿ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ಇದೇ ವೇಳೆ ಮಹಾರಾಷ್ಟ್ರದ ಹಂಗಾಮಿ ಸಿಎಂ ಆಗಿದ್ದ ಏಕನಾಥ್ ಸಿಂಧೆಯವರನ್ನು (Eknath Shinde) ಇಂದು ಬಿಜೆಪಿ ನಾಯಕರು ನಡೆಸಿಕೊಂಡ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.

ಸತ್ಯ ಸೋಶಿಯಲ್ ಮೀಡಿಯಾದಲ್ಲಿ (Social media) ವಿಡಿಯೋ ಒಂದು ಬೈರಲ್ ಆಗಿದ್ದು ಈ ವಿಡಿಯೋದಲ್ಲಿ ವೇದಿಕೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಹಾದು ಹೋಗಬೇಕಾದರೆ ಏಕನಾಥ್ ಶಿಂಧೆ ಅವರ ಬಳಿ ಮಾತನಾಡಲು ಪ್ರಯತ್ನಿಸಿದಾಗಲೂ ಮೋದಿ ಅವರನ್ನು ನಿರ್ಲಕ್ಷಿಸಿ ಮುನ್ನಡೆದ ಹಾಗೆ ಭಾಸವಾಗುತ್ತಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಲು ಮಹತ್ವದ ಪಾತ್ರವಹಿಸಿದ ಮತ್ತು ಈ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಏಕನಾಥ್ ಶಿಂದೆಯರನ್ನು ಬಿಜೆಪಿ ನಾಯಕರು ಈಗ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದೆ.