ತೀವ್ರ ಕುತೂಹಲ ಕೆರಳಿಸಿದ ರಾಜ್ಯಸಭಾ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಗೆದ್ದು ಬೀಗಿದ್ದು ಪ್ರಾದೇಶಿಕ ಪಕ್ಷ ಜೆಡಿಎಸ್ಗೆ ಮತ್ತೊಮ್ಮೆ ಮಣ್ಣು ಮುಕ್ಕುವಂತೆ ಮಾಡಿದ್ದಾರೆ.
ಚುನಾವಣೆಗೂ ಮೊದಲು ಹೆಣೆದ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ಗೆ ಆಫರ್ ನೀಡಲಾಗಿತ್ತು. ಆದರೆ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ನುಡಿದ ಪೊಳ್ಳು ಭವಿಷ್ಯದಿಂದಾಗಿ ಪ್ರಾದೇಶಿಕ ಪಕ್ಷಕ್ಕೆ ನೆಲೆ ಇಲ್ಲದಂತಾಗಿದೆ.
ಈ ಮೊದಲು ಜೆಡಿಎಸ್ನಿಂದ 2018ರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಭಾವಾಗೊಂಡಿದ್ದ ಕೆ.ಸಿ.ವೀರೇಂದ್ರರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಒಪ್ಪಂದವಾಗಿತ್ತು. ಇದಕ್ಕೆ ಕಾಂಗ್ರೆಸ್ ನಾಯಕರು ತಲೆ ಆಡಿಸಿದ್ಧರು ಎಂದು ತಿಳಿದು ಬಂದಿದೆ.

ಎಲ್ಲರು ಅಂದುಕೊಂಡಂತೆ ವೀರೇಂದ್ರ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದಿದ್ದರೆ ಅವರ ಗೆಲುವು ನಿರಾಯಾಸವಾಗಿರುತಿತ್ತು ಮತ್ತು ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಹಾಕುತ್ತಿರಲಿಲ್ಲ. ಆದರೆ, ದೊಡ್ಡ ಗೌಡರ ಹಾಗೂ ರೇವಣ್ಣರ ಮಾತಿಗೆ ಕಟ್ಟು ಬಿದ್ದ ಹೆಚ್.ಡಿ.ಕುಮಾರಸ್ವಾಮಿಯವರ ಪಕ್ಷ ಪ್ರಾದೇಶಿಕ ಅಸ್ಮಿತೆಯನ್ನು ಕಳೆದುಕೊಂಡಿರುವುದು ಸತ್ಯ.
ರಾಜ್ಯಸಭಾ ಚುನಾವಣೆ ಸೋಲಿನ ಬೆನ್ನಲ್ಲೇ 2023ರ ವಿಧಾನಸಬೆ ಚುನಾವಣೆ ಮಿಷನ್ 123 ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಪ್ಲಾನ್ A ಹಾಗು ಪ್ಲಾನ್ Bಯನ್ನು ಸಿದ್ದಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಮೊದಲ ಪ್ಲಾನ್‌ನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ವಿರೋಧಿ ಧೋರಣೆ ಹಾಗು ಪ್ಲಾನ್ ಬಿನ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ವರ್ಷಪೂರ್ತಿ ಟಾರ್ಗೆಟ್ ಮಾಡುವುದು ಎಂದು ತಿಳಿದು ಬಂದಿದೆ.
,ಉ<ದಿನ ದಿನಗಳಲ್ಲಿ ರಾಜ್ಯ ರಾಜಕೀಯದ ಮೇಲಾಟ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನ ಕಾದು ನೋಡಬೇಕಿದೆ.






