ಮೈಸೂರು ಹೊಟೇಲ್ನಲ್ಲಿ ಗಲಾಟೆ ನಡೆದಿದ್ದು, ವರ್ಗಾವನೆ ದಂಧೆ ವಿಚಾರಕ್ಕೆ ಸಚಿವ ಚಲುವರಾಯಸ್ವಾಮಿ ಮೇಲೆ ಹಲ್ಲೆ ಆಗಿದೆ ಅನ್ನೊ ಆರೋಪಕ್ಕೆ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಈ ಸುದ್ದಿ ಹಬ್ಬಿಸಿರೋರು ಕುಮಾರಸ್ವಾಮಿ ಮತ್ತವರ ಸ್ನೇಹಿತರು ಎಮದಿರುವ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ್ರ ಮಗಳ ನಿಶ್ಚಿತಾರ್ಥಕ್ಕೆ ನಾವು ಹೋಗಿದ್ದು ನಿಜ. ಊಟ ಮಾಡಿದ್ವಿ ಬಂದ್ವಿ, ಯಾವುದೇ ಗಲಾಟೆ ನಡೆದಿಲ್ಲ ಎಂದಿದ್ದಾರೆ.
ಕುಮಾರಸ್ವಾಮಿಗೆ ಮಗನ ಚುನಾವಣೆಗಿಂತ ನನ್ನ ಬಗ್ಗೆ ಮಾಹಿತಿ ಕಲೆಕ್ಟ್ ಮಾಡುವುದರಲ್ಲೇ ನಿರತರಾಗಿದ್ದಾರೆ. ನಾನು ಮಂತ್ರಿಯಾದ ದಿನದಿಂದ ಇದೇ ಕೆಲಸ ಆಗಿದೆ. ನಾವು ಅಭಿವೃದ್ಧಿ ಬಗ್ಗೆ ಕೆಲಸ ಮಾಡ್ತೀವಿ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ವರ್ಗಾವಣೆಗೂ ಇದಕ್ಕೂ ಸಂಬಂಧವಿಲ್ಲ. ಕಿಲಾರ ಜಯರಾಂ ನಲವತ್ತು ವರ್ಷದಿಂದ ಪರಿಚಯ. ಅವನು ನಾನು ಒಳ್ಳೆಯ ಸ್ನೇಹಿತ, ನಮ್ಮ ಮಂಡ್ಯದವನು. ನನ್ನ ಬಗ್ಗೆ ಕಾಳಜಿ ಹೊಂದಿರುವ ಕುಮಾರಸ್ವಾಮಿಗೆ ಅಭಿನಂಧನೆ ಎಂದು ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಸುದ್ದಿಗೋಷ್ಠಿ ನಡೆಸಿ, ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಆಕಾಶಕ್ಕೆ ಉಗುಳಿದ್ರೆ ನಮ್ಮ ಮೇಲೆಯೇ ಬೀಳುತ್ತೆ ಅನ್ನೋದನ್ನ ಅರಿತುಕೊಂಡು ಮಾತನಾಡಬೇಕು. ಸಿಎಂ ಬಲಗೈ ಬಂಟ ಪತ್ರಿಕಾಗೋಷ್ಠಿಯಲ್ಲಿ ಅಬಕಾರಿ ಮಂತ್ರಿ ವಸೂಲಿ ಬಗ್ಗೆ ಹೇಳಿದ್ದಾರೆ. ಇವೆಲ್ಲ ಬಿಟ್ಟು ಚಲುವರಾಯಸ್ವಾಮಿ ಮತಾಡೋದನ್ನ ಸರಿಯಾಗಿ ಕಲಿಬೇಕು. ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಮಾತನಾಡಿದ್ರೆ ದೊಡ್ಡ ಲೀಡರ್ ಆಗ್ತಿನಿ ಅನ್ನೋದನ್ನ ಮನಸ್ಸಿಂದ ತೆಗೆದುಹಾಕಿ. ಚಲುವರಾಯಸ್ವಾಮಿ ಮೇಲೆ ಹಲ್ಲೆಯಾಗಿದ್ದ ವಿಚಾರದ ಬಗ್ಗೆ ಮಾತನಾಡಿ, ಕೀಲಾರ ಜಯರಾಮ್ ಒಳ್ಳೆ ವ್ಯಕ್ತಿ, ಈ ಘಟನೆ ಹೇಗಾಯ್ತು ಅಂತ ಗೊತ್ತಿಲ್ಲ. ಕೀಲಾರ ಜಯರಾಮ್ ಚಾಮುಂಡಿ ಬೆಟ್ಟಕ್ಕೆ ಬಂದು ಆಣೆ ಮಾಡಲಿ ಎಂದಿದ್ದಾರೆ. ನಾನೂ ಕೂಡ ಕಾರ್ಯಕ್ರಮದಲ್ಲೆ ಇದ್ದೆ. ಹಲ್ಲೆ ಆಗ್ತಿದೆ ಅಂದ್ರು ಅಷ್ಟರಲ್ಲಿ ಹೋಗಿ ನೋಡಿದೆ ಆಗ ಎಲ್ಲರೂ ಶಾಂತರಾಗಿದ್ರು ಎಂದಿದ್ದಾರೆ.