
AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಲವು ರಾಜ್ಯಗಳ ರಾಜ್ಯಾಧ್ಯಕ್ಷರನ್ನ ಬದಲು ಮಾಡ್ತೇವೆ ಎಂದು ನೀಡಿದ್ದ ಹೇಳಿಕೆ ಭಾರೀ ಸದ್ದು ಮಾಡ್ತಿದೆ. ಒಡಿಸ್ಸಾದಲ್ಲಿ ಹಿಂದುಳಿದ ವರ್ಗದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನೂ ಹಲವು ರಾಜ್ಯಗಳ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂದು ಹೇಳಿದ ಬೆನಲ್ಲೇ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲಿನ ಸಮರ ಬಿರುಸುಗೊಂಡಿದೆ. ದೆಹಲಿಗೆ ತೆರಳಿದ್ದ ಸಚಿವ ಸತೀಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ ವಾಪಸ್ಸಾಗಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬಹುದು.. ಆದರೆ ಮುಖ್ಯಮಂತ್ರಿ ಸ್ಥಾನ ಬದಲಾಗಲ್ಲ ಎಂದಿದ್ದಾರೆ.
ಅರಸು ದಾಖಲೆ ಮುರಿತಾರೆ ಸಿದ್ದರಾಮಯ್ಯ ಎಂದಿರುವ ಸಚಿವ ಎಂಬಿ ಪಾಟೀಲ್, CM ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಎಲೆಕ್ಷನ್ ಎಂದಿದ್ದಾರೆ ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್. ಇನ್ನು ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ನಮಗೆ ಹೇಳಿಲ್ಲ. ಸಿದ್ದರಾಮಯ್ಯ 5 ವರ್ಷ ಪೂರೈಸ್ತಾರೆ ಎಂದಿದ್ದಾರೆ ಗೃಹ ಸಚಿವ ಡಾ ಜಿ. ಪರಮೇಶ್ವರ್. ಇನ್ನು ಸಿಎಂ ಸಿದ್ದರಾಮಯ್ಯ ಗಟ್ಟಿಯಾಗಿ ಕುರ್ಚಿಯಲ್ಲಿ ಕೂತಿದ್ದಾರೆ. ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ ಎಂದಿದ್ದಾರೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ.

ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಯಾಗಿ 7 ವರ್ಷ 7 ತಿಂಗಳು ಪೂರೈಸಿದ್ದಾರೆ. ಸದ್ಯಕ್ಕೆ ಇದು ದಾಖಲೆ ಆಗಿದೆ. ಇದೀಗ ಸಿದ್ದರಾಮಯ್ಯ 6 ವರ್ಷ 9 ತಿಂಗಳು ಮುಖ್ಯಮಂತ್ರಿ ಆಗಿ ಪೂರ್ಣಗೊಳಿಸಿದ್ದಾರೆ. ಸಿಎಂ ಆಗಿ ಸಿದ್ದರಾಮಯ್ಯ 7 ವರ್ಷ 7 ತಿಂಗಳು ಪೂರೈಸಿ ಒಂದೇ ಒಂದು ಗಂಟೆ ಹೆಚ್ಚಿಗೆ ಸಿಎಂ ಆಗಿ ಮುಂದುವರಿದರೂ ಅದು ಕರ್ನಾಟಕದ ಇತಿಹಾಸದ ಪುಟ ಸೇರುತ್ತದೆ. ಅನೇಕ ರಾಜ್ಯಗಳ ಅಧ್ಯಕ್ಷ ಸ್ಥಾನ ಬದಲಾಗುತ್ತೆ ಅನ್ನೋ ಖರ್ಗೆಯವರ ಮಾತಿನ ಬಳಿಕ ಎಐಸಿಸಿ ಮಟ್ಟದಲ್ಲೇ ಪಕ್ಷದ ಸ್ಥಾನಮಾನಗಳು ಪುನಾರಚನೆ ಆಗುತ್ತದೆ ಎಂದು ಹೇಳಲಾಗ್ತಿದೆ.

ಈ ನಡುವೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬದಲಾವಣೆಗೂ ಸಿಎಂ ಸಿದ್ದರಾಮಯ್ಯ ಬಣ ಒತ್ತಡ ಹೇರಿದೆ ಎನ್ನಲಾಗ್ತಿದೆ. ಸತೀಶ್ ಜಾರಕಿಹೊಳಿ ಸೇರಿದಂತೆ ಸಾಕಷ್ಟು ನಾಯಕರು ದಿಲ್ಲಿ ಪರೇಡ್ ಮಾಡಿದ್ದು ಸುರ್ಜೇವಾಲ ಡಿ.ಕೆ ಶಿವಕುಮಾರ್ ಪರವಾಗಿ ಬ್ಯಾಟ್ ಮಾಡ್ತಾರೆ ಅನ್ನೋ ಕಾರಣಕ್ಕೆ ಬದಲಾವಣೆ ಮಾಡಲು ಒತ್ತಡ ಹೇರಲಾಗ್ತಿದೆ ಎನ್ನಬಹುದು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರ ಬದಲಾವಣೆ ಬಗ್ಗೆ ಸುಳಿವು ನೀಡಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರ್ಣ ಮಾಡ್ತಾರೆ ಎನ್ನುವ ಮಾತುಗಳ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್ X ಖಾತೆಯಲ್ಲಿ ಪರೋಕ್ಷವಾಗಿ ಟಾಂಟ್ ಮಾಡಿದ್ದು, ಪ್ರಯತ್ನ ವಿಫಲವಾಗಬಹುದು, ಪ್ರಾರ್ಥನೆಗೆ ಗೆಲುವು ನಿಶ್ಚಿತ ಎಂದಿದ್ದಾರೆ. ಮೈಸೂರಿನ ತಿರುಮಕೂಡಲು ನರಸೀಪುರ ಕುಂಭಮೇಳದಲ್ಲಿ ಭಾಗಿಯಾದ ಬಳಿಕ ಈ ರೀತಿಯ ಪೋಸ್ಟ್ ಹಾಕಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
