ಬಿಜೆಪಿ ಶಾಸಕ ಜನಾರ್ದನ ರೆಡ್ಡಿ (Janardan reddy) ವಿರುದ್ಧ ತಮಿಳುನಾಡಿನ ಕಾಂಗ್ರೆಸ್ ಎಂಪಿ ಶಶಿಕಾಂತ್ ಸಿಂಥಿಲ್ (Shashikantha senthil) ದೂರು ದಾಖಲಿಸಲು ಮುಂದಾಗಿದ್ದಾರೆ. ಹೀಗಾಗಿ ಇಂದು ಸಿಟಿ ಸಿವಿಲ್ ಕೋರ್ಟ್ ಗೆ ಶಶಿಕಾಂತ್ ಸಿಂಥಿಲ್ ಆಗಮಿಸಿದ್ದಾರೆ.ಧರ್ಮಸ್ಥಳದ ಬುರಡೆ ಗ್ಯಾಂಗ್ (Dharmasthala case) ಜೊತೆ ಸೇರಿ ಪಿತೂರಿ ನಡೆಸಿದ್ದಾರೆ ಎಂಬಾ ವಿಚಾರಕ್ಕೆ ಸಂಬಂಧಪಟ್ಟಂತೆ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದರು.ಈ ಕುರಿತು ಕ್ರಿಮಿನಲ್ ಮಾನ ನಷ್ಟ ಮೊಕದ್ದಮೆ ದಾಖಲು ಮಾಡಲು ಸಂಸದ ಶಶಿಕಾಂತ್ ಸಿಂಥಿಲ್ ಮುಂದಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಶಶಿಕಾಂತ್ ಸೆಂಥಿಲ್, ಜನಾರ್ದನ ರೆಡ್ಡಿ ಅವರು ವಾಟ್ಸಪ್ ನೋಡ್ಕೊಂಡು ಹೇಳಿಕೆ ನೀಡಿದ್ದಾರೆ. ಇದಕ್ಕೆಲ್ಲ ಉತ್ತರ ಕೊಡ್ಬೇಕಾ …? ಎಂದು ಅಂದ್ಕೊಂಡಿದ್ದೆ.ಆದ್ರೆ ಈಗ ಸಾಕಷ್ಟು ಬಿಲ್ಡಪ್ ಕೊಟ್ಟು ಮಾತಾಡ್ತಿದ್ದಾರೆ. ನನ್ನ ಇಮೇಜ್ ಡ್ಯಾಮೇಜ್ ಮಾಡೋಕೆ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಕರ್ನಾಟಕದಲ್ಲಿ 10 ವರ್ಷ ಕೆಲಸ ಮಾಡಿದ್ದಾನೆ. ಈ ತರ ಆರೋಪ ಮಾಡ್ತಿರೋದು ಯಾರೂ ಅಂತ ನಿಮ್ಗೆ ಗೊತ್ತಿದೆ. ಕರ್ನಾಟಕ ಪ್ರಾಪರ್ಟಿನ ಮಿಸ್ ಯೂಸ್ ಮಾಡಿಕೊಂಡಿರೋರು, ಕರ್ನಾಟಕದ ಹೆಸರನ್ನು ದೇಶವ್ಯಾಪಿ ಕೆಟ್ಟದಾಗಿ ಬಿಂಬಿಸಿದವರು, ಕರ್ನಾಟಕ ಸ್ವತ್ತನ್ನು ದೋಚಿ ಏಳು ವರ್ಷ ಜೈಲಿನಲ್ಲಿ ಇದ್ದವರು..ಇಂತವರಿಗೆ ಏನು ಅಂತ ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ ಎಂದಿದ್ದಾರೆ.

ತಲೆ ಬುರುಡೆ ಎಲ್ಲಿ ಸಿಕ್ಕಿದೆ ಅಂತ ನನಗೆ ಗೊತ್ತಿಲ್ಲ. ಜನಾರ್ದನ್ ರೆಡ್ಡಿಗೆ ಗೊತ್ತಿರಬೇಕು..ಸದ್ಯ ಇನ್ವೆಷ್ಟಿಗೇಷನ್ ನಡೀತಿದೆ.. ಹೀಗಾಗಿ ಧರ್ಮಸ್ಥಳ ಪ್ರಕರಣದ ಬಗ್ಗೆ ನಾನು ಮಾತನಾಡೋದಿಲ್ಲ.ನನ್ನ ಹೆಸರು ಬಂದಿದೆ ಎಂಬ ಕಾರಣಕ್ಕೆ ದೂರು ಕೊಡ್ತಿದಿನಿ ಅಷ್ಟೇ ಎಂದಿದ್ದಾರೆ.











