ರಾಜ್ಯದಲ್ಲಿ ಧರ್ಮಸ್ಥಳ ಪ್ರಕರಣ (Dharmasthala case) ರಾಜಕೀಯ ಜಿದಾಜಿದ್ದಿಗೆ ಕಾರಣವಾಗಿದ್ದು, ಈಗಾಗಲೇ ಬಿಜೆಪಿ (Bjp) ಹಾಗೂ ಜೆಡಿಎಸ್ (Jds) ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದು ಯಾತ್ರೆ ಮತ್ತು ಸಮಾವೇಶಗಳನ್ನು ನಡೆಸಿದೆ. ಹೀಗಾಗಿ ಇದೀಗ ಕಾಂಗ್ರೇಸ್ ನಿಂದಲೂ ಧರ್ಮಸ್ಥಳ ಯಾತ್ರೆಗೆ ನಾಯಕರು ಮುಂದಾಗಿದ್ದಾರೆ.

ಧರ್ಮಸ್ಥಳ, ಹಿಂದೂ ಧರ್ಮ ಯಾರಪ್ಪನ ಸ್ವತ್ತು ಕೂಡ ಅಲ್ಲಾ ಎಂದಿರುವ ಕುಣಿಗಲ್ ಕಾಂಗ್ರೇಸ್ ಶಾಸಕ ಡಾ ರಂಗನಾಥ್ ಧರ್ಮಸ್ಥಳ ಯಾತ್ರೆಗೆ ಮುಂದಾಗಿದ್ದಾರೆ. ನೂರಾರು ಕಾರುಗಳಲ್ಲಿ ಧರ್ಮಸ್ಥಳ ಯಾತ್ರೆಗೆ ಕಾಂಗ್ರೇಸ್ ನಾಯಕರು ಮುಂದಾಗಿದ್ದಾರೆ. ತುಮಕೂರಿನ GKBMS ಶಾಲಾ ಕ್ರೀಡಾಂಗಣದಿಂದ ಯಾತ್ರೆ ಆರಂಭವಾಗಲಿದೆ.

ಆ ಬಳಿಕ ಕುಣಿಗಲ್ ಸರ್ಕಲ್ ನಿಂದ ಧರ್ಮಸ್ಥಳ ಯಾತ್ರೆ ಅಧಿಕೃತವಾಗಿ ಆರಂಭವಾಗಲಿದೆ. ಇಲ್ಲಿ ಭಾಗವಹಿಸುವ ಪ್ರತಿ ಕಾರಿಗೆ ಧರ್ಮಸ್ಥಳ ಯಾತ್ರಾ ಫೊಸ್ಟರ್, ಕಾಂಗ್ರೆಸ್ ಬಾವುಟ ಕಟ್ಟಿ ಕಾರ್ಯಕರ್ತರು ಸಜ್ಜಾಗಿದ್ದಾರೆ. ಆ ಮೂಲಕ ಈ ಹಿಂದೆ ಬಿಜೆಪಿ ಜೆಡಿಎಸ್ ಧರ್ಮಸ್ಥಳ ಯಾತ್ರೆಗೆ ವಿರೋಧ ವ್ಯಕ್ತ ಪಡಿಸಿದ್ದ ಕಾಂಗ್ರೇಸ್ ಇದೀಗ ತಾನೇ ಯಾತ್ರೆಗೆ ಮುಂದಾಗಿದೆ.











