ರಾಜ್ಯದ ಹಲವು ಜಿಲ್ಲೆಗಳಲ್ಲಿ ಧರ್ಮಸ್ಥಳದ (Dharmasthala) ಭಕ್ತರು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದಾರೆ. ಮೈಸೂರು (Mysuru), ತುಮಕೂರು , ಕಲಬುರಗಿ, ಚಿಕ್ಕೋಡಿ ಸೇರಿದಂತೆ ಅನೇಕ ಕಡೆಗಳಲ್ಲಿ ಧರ್ಮಸ್ಥಳದ ಅಭಿಮಾನಿಗಳ ವೇದಿಕೆಯಿಂದ ಬೃಹತ್ ಪ್ರತಿಭಟನೆ (Protest ) ಕೈಗೊಳ್ಳಲಾಗಿದೆ.

ಹಿಂದೂಗಳ ಶ್ರದ್ಧಾ ಕೇಂದ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಇಲ್ಲಸಲ್ಲದ ಅಪಪ್ರಚಾರ ಮಾಡ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಚಿಕ್ಕೋಡಿ ನಗರದ ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ಮೂಲಕ ಸಾಗಿ ಬಳಿಕ ಚಿಕ್ಕೋಡಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಹೋರಾಟಗಾರರು ಮನವಿ ಸಲ್ಲಿಕೆ ಮಾಡಿದ್ದಾರೆ.

ಧರ್ಮಸ್ಥಳಕ್ಕೆ ದಿನಕ್ಕೆ 1 ಲಕ್ಷದವರೆಗೆ ಭಕ್ತರು ಬರ್ತಾರೆ.ಪುರಾಣ ಪ್ರಸಿದ್ಧ ಧರ್ಮಸ್ಥಳ ಕ್ಷೇತ್ರಕ್ಕೆ ದಕ್ಕೆ ತರುವ, ಸುಳ್ಳು ನಿಂದನೆ, ಅಪಪ್ರಚಾರ ಅವಹೇಳನ ಕೆಲಸ ಮಾಡ್ತಿದ್ದಾರೆ.ಅಪಪ್ರಚಾರ ಮಾಡೋರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು.ತನಿಖೆ ವರದಿ ಬರದೇ ಇದ್ರೂ ಧರ್ಮಸ್ಥಳ,ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಗಿರೀಶ್ ಮಟ್ಟಣ್ಣವರ,ಮಹೇಶ್ ಶೆಟ್ಟಿ ತಿಮ್ಮರೆಡ್ಡಿ, ಸಮೀರ್ ಎಂ.ಡಿ,ಜಯಂತ್ ಸೇರಿ ಹಲವರಿಂದ ಅಪಪ್ರಚಾರ ನಡೆಸಲಾಗಿದೆ.ಈ ಪ್ರಕರಣ ಹಿಂದೆ ಯಾರಿದ್ದಾರೆ, ಅವರಿಗೆ ಹಣದ ನೆರವು ಕೊಡ್ತಿರೋರು ಯಾರು ಎಂದು ತನಿಖೆ ಮಾಡಬೇಕೆಂದು ಒತ್ತಾಯ ಮಾಡಲಾಗಿದೆ.

ಧರ್ಮಸ್ಥಳ ಸಂಘದಿಂದ ಮಹಿಳೆಯರು, ರೈತರು, ಗ್ರಾಮೀಣ ಪ್ರದೇಶದ ಜನರಿಗೆ ಅನಕೂಲ ಆಗಿದೆ.ಆದರೇ ಯಾರೋ ಅನಾಮಿಕ ಹೇಳಿದ್ದಂತೆ ನೆಲೆ ಅಗೆಯಲಾಗುತ್ತಿದೆ. ಯಾರೋ ಬಂದು ವಿಧಾನಸಭೆಯಲ್ಲಿ ಹೆಣ ಇದೆಯೆಂದು ಹೇಳಿದ್ರೆ ಅಗೇಯುತ್ತಾರಾ ಎಂದು ಭಕ್ತರು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಅಪಪ್ರಚಾರ ಮಾಡೋರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.