ಧರ್ಮಸ್ಥಳ ಕ್ಷೇತ್ರದ (Dharmasthala case) ಮೇಲೆ ಅಪಪ್ರಚಾರದ ಹಿನ್ನಲೆ, ಇದನ್ನು ಖಂಡಿಸಿ ಬಿಜೆಪಿ (Bjp protest) ಹೋರಾಟ ಮಾಡಲು ಮುಂದಾಗಿದೆ.ಇಂದು ರಾಜ್ಯ ಬಿಜೆಪಿ ನಾಯಕರಿಂದ ಧರ್ಮ ರಕ್ಷಣಾ ಯಾತ್ರೆ ಮುಂದುವರೆದಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸತೀಶ್ ರೆಡ್ಡಿ (Satish reddy) ನೇತೃತ್ವದಲ್ಲಿ ಬೃಹತ್ ಧರ್ಮ ರಕ್ಷಣಾ ಯಾತ್ರೆಗೆ ಮಜ್ಜಾಗಿದ್ದಾರೆ.

ಇಂದು ಐದನೂರಕ್ಕೂ ಹೆಚ್ಚು ಭಕ್ತಾದಿಗಳ ಜೊತೆಗೂಡಿ ಧರ್ಮಸ್ಥಳಕ್ಕೆ ಶಾಸಕ ಸತೀಶ್ ರೆಡ್ಡಿ ಹೊರಟಿದ್ದಾರೆ. ಬೆಂಗಳೂರಿನ ಮಾದಾವರ ಮೆಟ್ರೋ ನಿಲ್ದಾಣದಿಂದ ಧರ್ಮ ರಕ್ಷಣಾ ಯಾತ್ರೆಗೆ ಚಾಲನೆ ಸಿಕ್ಕಿದೆ. ಮಧ್ಯಾಹ್ನ 3 ಗಂಟೆಗೆ ಧರ್ಮಸ್ಥಳ ದೇಗುಲವನ್ನು ಶಾಸಕ ಸತೀಶ್ ರೆಡ್ಡಿ ನೇತೃತ್ವ ಧರ್ಮ ರಕ್ಷಣಾ ಯಾತ್ರೆ ತಲುಪಲಿದೆ.

ಧರ್ಮಸ್ಥಳ ದೇಗುಲದಲ್ಲಿ ಮಂಜುನಾಥ ಸ್ವಾಮಿಯ ದರ್ಶನದ ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರನ್ನು ಶಾಸಕ ಸತೀಶ್ ರೆಡ್ಡಿ ಭೇಟಿಯಾಗಿ ಮಾತನಾಡಲಿದ್ದಾರೆ. ಹೀಗಾಗಿ ಇಂದು ಬೆಳಿಗ್ಗೆ ನೂರಾರು ಕಾರುಗಳು ಬೆಂಗಳೂರಿನಿಂದ ಧರ್ಮಸ್ಥಳದ ಕಡೆಗೆ ಹೊರಟಿವೆ.










